More

    ಹೋಂವರ್ಕ್​ ಇಲ್ಲ, ಶಿಕ್ಷೆಯೂ ಇಲ್ಲ… 30 ಗಂಟೆಯ ‘ಪವಾಡ’: ಶಾಲೆಯಲ್ಲಿ ಆಗದ್ದು ಇಲ್ಲಿ ಸಾಧ್ಯವಾಗಿದೆ!

    ಲಖನೌ: ಕೇವಲ 30 ಗಂಟೆಗಳಲ್ಲಿ ಯಾರನ್ನಾದರೂ ಸಾಕ್ಷರರನ್ನಾಗಿ ಮಾಡಲು ಸಾಧ್ಯವೇ? ಸಾಧ್ಯವಿಲ್ಲ ಎಂದು ಹೇಳುವವರೇ ಹೆಚ್ಚು.
    ಆದರೆ ಲಖನೌದ ಶಿಕ್ಷಕಿ ಸುನೀತಾ ಗಾಂಧಿ ಇದನ್ನು ಸಾಧಿಸಿ ತೋರಿಸಿದ್ದಾರೆ. ಈ ಕಷ್ಟಕರವಾದ ಕೆಲಸವನ್ನು ಬಹಳ ವರ್ಷಗಳಿಂದ ಬಹಳ ಸುಲಭವಾಗಿ ಮಾಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಇದೇ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರು, ಶಾಲೆಗೆ ಹೋಗಲು ಸಾಧ್ಯವಾಗದ ಉತ್ತರ ಪ್ರದೇಶದ ಅನೇಕ ಮಕ್ಕಳನ್ನು ಸಾಕ್ಷರರನ್ನಾಗಿ ಮಾಡಿದ್ದಾರೆ.

    ಕುತೂಹಲದ ವಿಷಯ ಎಂದರೆ ಇದುವರೆಗೆ ಸುನೀತಾ ಅವರು ಯಾವ ಕುಟುಂಬದಿಂದಲೂ ಶುಲ್ಕವನ್ನು ಪಡೆದುಕೊಂಡಿಲ್ಲ. ಕಳೆದ 5 ವರ್ಷಗಳಿಂದ ಗ್ಲೋಬಲ್‌ ಡ್ರೀಮ್ಸ್‌ ಪ್ರಾಜೆಕ್ಟ್ ಅಡಿಯಲ್ಲಿ ಬಡಮಕ್ಕಳನ್ನೆಲ್ಲ ಒಟ್ಟುಗೂಡಿಸಿ, ಅಕ್ಷರ ಕಲಿಸುತ್ತಿದ್ದೇನೆ. ಇವರಿಗಾಗಿಯೇ ಪಠ್ಯಕ್ರಮ ರೂಪಿಸಿದ್ದೇನೆ. ಕೇವಲ 30 ಗಂಟೆಯಲ್ಲಿ ವಿಶಿಷ್ಟ ಬೋಧನೆ ಮೂಲಕ ಆ ಮಕ್ಕಳನ್ನು ವಿದ್ಯಾವಂತರನ್ನಾಗಿಸುತ್ತಿರುವುದಾಗಿ ಸುನೀತಾ ಹೇಳುತ್ತಾರೆ.

    ಹೋಂವರ್ಕ್​ ಇಲ್ಲ, ಶಿಕ್ಷೆಯೂ ಇಲ್ಲ... 30 ಗಂಟೆಯ 'ಪವಾಡ': ಶಾಲೆಯಲ್ಲಿ ಆಗದ್ದು ಇಲ್ಲಿ ಸಾಧ್ಯವಾಗಿದೆ!
    ಮುಂದಿನ ವರ್ಷದ ಅಂತ್ಯದ ವೇಳೆಗೆ 20 ರಾಜ್ಯಗಳಲ್ಲಿ ಈ ಮಾದರಿಯ ಶಾಲೆಗಳನ್ನು ಆರಂಭಿಸುವ ಆಶಯವಿದೆ ಎನ್ನುತ್ತಾರೆ ಈ ಶಿಕ್ಷಕಿ. ಗ್ಲೋಬಲ್ ಡ್ರೀಮ್‌ಶಾಲಾ ಎಂಬ ಹೆಸರಿನ ಸಂಘಟನೆಯೊಂದಿಗೆ ಈ ಕಾರ್ಯವನ್ನು ಮಾಡುವ ಯೋಜನೆ ರೂಪಿಸಿದ್ದಾರೆ ಇವರು.

    ಅನೇಕ ಮಂದಿ ಸ್ವಯಂ ಸೇವಕರು ಇಲ್ಲಿ ಉಚಿತ ಶಿಕ್ಷಣ ನೀಡುವಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ಕೆಲವು ವಿದ್ಯಾರ್ಥಿಗಳನ್ನು ಗಮನಿಸಿದ್ದೇನೆ. ಪ್ರತಿದಿನ ಶಾಲೆಗೆ ಹೋಗುತ್ತಾರೆ. ಆದರೆ ಅವರು ಅಧ್ಯಯನದಲ್ಲಿ ದುರ್ಬಲರಾಗಿರುತ್ತಾರೆ. ಅಂಥವರನ್ನು ಉಳಿದ ಮಕ್ಕಳಿಗೆ ಹೋಲಿಸಿ ಹಿಯಾಳಿಕೆ ಮಾಡಲಾಗುತ್ತದೆಯೇ ವಿನಾ, ಅವರಲ್ಲಿ ಕಲಿಯುವ ಶಕ್ತಿ ಕಡಿಮೆ ಇರಬಹುದು ಎಂದು ಶಿಕ್ಷಕರು ಅಂದುಕೊಳ್ಳುವುದೇ ಇಲ್ಲ. ಅಂಥ ಮಕ್ಕಳಿಗೆ ವಿಷಯವೇ ಅರ್ಥವಾಗಿರುವುದಿಲ್ಲ. ಆದರೂ ಶಾಲೆಗೆ ಹೋಗುತ್ತಾರೆ. ಆದ್ದರಿಂದ ನಮ್ಮ ಶಿಕ್ಷಣ ವಿಧಾನವೇ ಬೇರೆ ಎನ್ನುತ್ತಾರೆ ಶಿಕ್ಷಕರಲ್ಲಿ ಒಬ್ಬರಾಗಿರುವ ಟಾಮ್​ ಡೆಲಾನಿ.

    ಒಟ್ಟು 120 ಅವಧಿಗಳಲ್ಲಿ ಈ ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಾರೆ. ಪುನರಾವರ್ತನೆ ಅಭ್ಯಾಸಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಶಾಶ್ವತವಾಗಿ ಉತ್ತರ ನೆನಪಿಟ್ಟುಕೊಳ್ಳುವ ಚಾತುರ್ಯವನ್ನು ಕಲಿಸುತ್ತಾರೆ. ಅಕ್ಷರ- ಪದಗಳನ್ನು ಗುರುತಿಸುವುದು, ಚಿತ್ರಗಳ ಮೂಲಕ ಪದ- ವಾಕ್ಯಗಳ ರಚನೆ, ವಿಡಿಯೋ ಮತ್ತು ಆಡಿಯೋ ಮೂಲಕ ಪಾಠ ಈ ರೀತಿಯಲ್ಲಿ ಮಾಮೂಲಿ ಶಾಲೆಗಳಿಗಿಂತಲೂ ಸಂಪೂರ್ಣ ಭಿನ್ನವಾದ ಪಾಠ ಇಲ್ಲಿ ಕಲಿಸಲಾಗುತ್ತದೆ. . ಇದಕ್ಕಾಗಿಯೇ ಸುನೀತಾ ಅವರು 30 ಪಾಠಗಳನ್ನೊಳಗೊಂಡ ಕಿಟ್‌ ಸಿದ್ಧಪಡಿಸಿದ್ದಾರೆ. ಇದರಲ್ಲಿ 60 ಕಿರು ವಿಡಿಯೋ, ಅಲ್ಫಾಬೆಟ್‌ ಕಟೌಟ್‌ ಮತ್ತು ಸ್ಟೇಷನರಿ ಐಟಮ್ಸ್‌ಗಳು ಇವೆ. ಆದ್ದರಿಂದ ಈ ಮಕ್ಕಳನ್ನು ಸಾಕ್ಷರರನ್ನಾಗಿ ಮಾಡಲು ತಮಗೆ 30 ಗಂಟೆ ಸಾಕು ಎನ್ನುತ್ತಾರೆ, ಅದನ್ನು ಸಾಧಿಸಿ ಕೂಡ ತೋರಿಸಿದ್ದಾರೆ.

    ಬಡ ಕುಟುಂಬಗಳ ಮಕ್ಕಳು ನಮಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಂದೊಂದು ಪಿರಿಯಡ್​ ಅವಧಿ 15 ನಿಮಿಷ ಮಾತ್ರ. ಅದಕ್ಕಾಗಿಯೇ 50 ರೂಪಾಯಿಗಳ ಅಗ್ಗಲ ಟೂಲ್​ ಕಿಟ್​ ತಯಾರಿಸಿದ್ದೇವೆ ಎನ್ನುತ್ತಾರೆ ಸುನೀತಾ.

    ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

    ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

    ನಸುಕಿನಲ್ಲಿ ಭೀಕರ ಅಪಘಾತ: ಕಾರು ಬೆಂಕಿಗಾಹುತಿ- ರಕ್ಷಿಸಲು ಜನರಿದ್ದಲ್ಲದೇ ಐವರ ಸಜೀವ ದಹನ

    ಭಾರತಕ್ಕೂ ಕಾಲಿಟ್ಟೇಬಿಡ್ತು ಬ್ರಿಟನ್​ ಸೋಂಕು! ಪ್ರವಾಸ ಕೈಗೊಂಡಿದ್ದ ಚೆನ್ನೈ ವ್ಯಕ್ತಿಗೆ ಪಾಸಿಟಿವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts