More

    ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

    ವ್ಯಾಟಿಕನ್​: ಗರ್ಭಪಾತವಾದ ಭ್ರೂಣದಿಂದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೀವ ಉಳಿಸಿಕೊಂಡಿರುವುದು ಈಚೆಗೆ ಭಾರಿ ಸುದ್ದಿಯಾಗಿತ್ತು. ಗರ್ಭಪಾತ ಮಾತ್ರವಲ್ಲದೇ ಭ್ರೂಣಾವಸ್ಥೆಯಲ್ಲಿರುವ ಜೀವಕಣಗಳ ಮೇಲಿನ ಪ್ರಯೋಗಗಳನ್ನು ವಿರೋಧಿಸುತ್ತಲೇ ಬಂದಿದ್ದ ಟ್ರಂಪ್​ ಇದೀಗ ಖುದ್ದು ಇಂಥ ಭ್ರೂಣದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು.

    ಆದರೆ ಇದರ ಬೆನ್ನಲ್ಲೇ ಇದೀಗ ಇಟಲಿಯ ವ್ಯಾಟಿಕನ್​ ಸಿಟಿ ಕೂಡ ಇದಕ್ಕೆ ಸಂಪೂರ್ಣ ಅನುಮತಿ ನೀಡಿದೆ. ಗರ್ಭಪಾತವಾಗಿರುವ ಭ್ರೂಣದಿಂದ ಕರೊನಾ ವೈರಸ್​ಗೆ ಲಸಿಕೆಯನ್ನು ತಯಾರಿಸಬಹುದು ಎಂದು ಹೇಳಿದೆ. ಭ್ರೂಣದಿಂದ ತಯಾರು ಮಾಡಿರುವ ಲಸಿಕೆಯನ್ನು ಕ್ಯಾಥಲಿಕ್​ ಕ್ರೈಸ್ತರು ಉಪಯೋಗಿಸುವುದು ಕಾನೂನುಬಾಹಿರ ಎಂದೇ ಇಲ್ಲಿಯವರೆಗೆ ಹೇಳಲಾಗುತ್ತಿತ್ತು. ಇದಕ್ಕೆ ಕ್ಯಾಥೊಲಿಕ್ ಬಿಷಪ್‌ಗಳ ಸಮಿತಿಯು (ಯುಎಸ್‌ಸಿಸಿಬಿ) ಇದಕ್ಕೆ ಅನುಮತಿ ನೀಡಿದ್ದು, ಇದೀಗ ಎಲ್ಲರೂ ಇದರ ಚಿಕಿತ್ಸೆ ಪಡೆಯಬಹುದು ಎಂದು ಸ್ಪಷ್ಟನೆ ನೀಡಿದೆ.

    ಭ್ರೂಣದ ಮೂತ್ರಪಿಂಡದಲ್ಲಿರುವ ಎಚ್‌ಇಕೆ-293ಟಿ ಮಾದರಿಯ ಜೀವಕಣಗಳನ್ನು ಮೋನೋಕ್ಲೋನಲ್‌ ಆ್ಯಂಟಿಬಾಡಿ ಸಮ್ಮಿಶ್ರದ ಸೂತ್ರದಡಿ ಔಷಧ ರೂಪದಲ್ಲಿ ಪ್ರಯೋಗಿಸಲಾಗುತ್ತದೆ. ಅದನ್ನು ಕರೊನಾ ವೈರಸ್​ ತೀವ್ರ ಸ್ವರೂಪ ಪಡೆದಿರುವ ರೋಗಿಯ ಮೇಲೆ ಪ್ರಯೋಗಿಸಿದರೆ, ಬದುಕುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗುತ್ತದೆ. ಇದೇ ರೀತಿ ಟ್ರಂಪ್​ಗೆ ಕೂಡ ಚಿಕಿತ್ಸೆ ನೀಡಲಾಗಿತ್ತು.

    1971ರಲ್ಲಿ ನೆದರ್ಲೆಂಡ್‌ನಲ್ಲಿ ಗರ್ಭಪಾತಗೊಂಡಿದ್ದ ಭ್ರೂಣವೊಂದರಿಂದ ಪ್ರತ್ಯೇಕಿಸಿ ಸಂಸ್ಕರಿಸಲಾಗಿದ್ದ ಜೀವಕಣಗಳನ್ನು ಬಳಸಿ ತಯಾರಿಸಲಾಗಿದ್ದ ಔಷಧ ಒಂದನ್ನು ಟ್ರಂಪ್‌ಗೆ ನೀಡುವ ಮೂಲಕ ಅವರ ಜೀವ ಉಳಿದಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಕ್ಯಾಥಲಿಕ್​ ಕ್ರೈಸ್ತರ ಕೆಲವೊಂದು ಗುಂಪು ಈ ಚಿಕಿತ್ಸೆಗೆ ಅನುಮತಿ ನೀಡಬೇಕು ಎಂದು ಕೋರಿಕೊಂಡಿತ್ತು. ಆದರೆ ಭ್ರೂಣಹತ್ಯೆಯಿಂದ ಮಾಡುವ ಲಸಿಕೆಗಳು ತಮ್ಮಲ್ಲಿ ಕಾನೂನು ವಿರೋಧಿ ಆಗಿರುವ ಕಾರಣ, ಅದರ ಬಳಕೆ ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿತ್ತು.

    ಆದರೆ ಇದೀಗ ವ್ಯಕ್ತಿಯ ಜೀವ ಉಳಿಸಲು ಇದರ ಬಳಕೆ ಮಾಡಬಹುದು ಎಂದು ಯುಎಸ್‌ಸಿಸಿಬಿ ಅನುಮತಿ ನೀಡಿದೆ. ಇದು ನೈತಿಕವಾಗಿ ಸ್ವೀಕಾರಾರ್ಹ ಎಂದು ವ್ಯಾಟಿಕನ್ ಸೋಮವಾರ ರೋಮನ್ ಕ್ಯಾಥೊಲಿಕ್‌ಗೆ ತಿಳಿಸಿದೆ. ಕೋವಿಡ್​ಗೆ ಯಾವುದೇ ಪರ್ಯಾಯ ಮಾರ್ಗಗಳು ಸದ್ಯ ಇಲ್ಲದಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಕಂಡುಹಿಡಿಯುವವರೆಗೆ ಅಂತಹ ಲಸಿಕೆಗಳ ಬಳಕೆಯನ್ನು ಅನುಮತಿಸಲಾಗಿದೆ ಎನ್ನಲಾಗಿದೆ.

    ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

    ಇಂಥವರೂ ಇರ್ತಾರೆ! ಹೋಟೆಲ್​ ಬಿಲ್ 75 ಪೈಸೆ… ಟಿಪ್ಸ್​ ಕೊಟ್ಟಿದ್ದು 4 ಲಕ್ಷ ರೂಪಾಯಿ!

    ಭಾರತಕ್ಕೂ ಕಾಲಿಟ್ಟೇಬಿಡ್ತು ಬ್ರಿಟನ್​ ಸೋಂಕು! ಪ್ರವಾಸ ಕೈಗೊಂಡಿದ್ದ ಚೆನ್ನೈ ವ್ಯಕ್ತಿಗೆ ಪಾಸಿಟಿವ್​

    ಪ್ರಧಾನಿ ನರೇಂದ್ರ ಮೋದಿಗೆ ಒಲಿದ ಅಮೆರಿಕದ ಪ್ರತಿಷ್ಠಿತ ‘ಲೀಜನ್ ಆಫ್ ಮೆರಿಟ್’ ಅವಾರ್ಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts