More

    ಪ್ರಧಾನಿ ನರೇಂದ್ರ ಮೋದಿಗೆ ಒಲಿದ ಅಮೆರಿಕದ ಪ್ರತಿಷ್ಠಿತ ‘ಲೀಜನ್ ಆಫ್ ಮೆರಿಟ್’ ಅವಾರ್ಡ್​

    ವಾಷಿಂಗ್ಟನ್​: ಅಮೆರಿಕದ ಪ್ರತಿಷ್ಠಿತ ‘ಲೀಜನ್ ಆಫ್ ಮೆರಿಟ್’ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾಜನರಾಗಿದ್ದಾರೆ.
    ಅಮೆರಿಕ ಸಶಸ್ತ್ರ ಪಡೆ ವತಿಯಿಂದ ದೇಶದ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ನೀಡಲಾಗುವ ಅತ್ಯುನ್ನತ ಪದವಿ ಇದಾಗಿದೆ.

    ಅಮೆರಿಕ ಮತ್ತು ಭಾರತ ದೇಶಗಳ ನಡುವೆ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವಲ್ಲಿ ಮತ್ತು ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮೋದಿ ಅವರ ನಾಯಕತ್ವ ಅಪಾರ ಎಂದು ಹೇಳಿರುವ ಅಮೆರಿಕ ಈ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿದೆ.

    ಉಭಯ ದೇಶಗಳ ನಡುವಿನ ಯುದ್ಧತಂತ್ರದ ಸಹಭಾಗಿತ್ವವನ್ನು ವೃದ್ಧಿಸಿದ ನಾಯಕತ್ವ ಗುಣ ಹಾಗೂ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ರೂಪಿಸಿದ ಕಾರಣಕ್ಕೆ ಮೋದಿ ಅವರಿಗೆ ಈ ಗೌರವ ಸಮರ್ಪಿಸಲಾಗಿದೆ ಎಂದು ಅಮೆರಿಕ ಹೇಳಿದೆ.

    ಅಮೆರಿಕದ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಪ್ರಧಾನಿ ಮೋದಿ ಪರವಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ ಬ್ರಿಯನ್ ಅವರಿಂದ ಪ್ರಶಸ್ತಿಯನ್ನು ಶ್ವೇತಭವನದಲ್ಲಿ ಸ್ವೀಕರಿಸಿದರು.

    ಪ್ರಧಾನಿ ಮೋದಿ ಅವರೊಂದಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಮಾಜಿ ಪ್ರಧಾನಿ ಶಿನ್ಸೊ ಅಬೆ ಅವರಿಗೂ ಪ್ರಶಸ್ತಿ ನೀಡಲಾಗಿದ್ದು, ಆ ದೇಶಗಳ ರಾಯಭಾರಿಗಳು ಪ್ರಶಸ್ತಿ ಸ್ವೀಕರಿಸಿದರು.

    ನಾಯಕತ್ವ ಹಾಗೂ ಮುಕ್ತ ಇಂಡೋ-ಪೆಸಿಫಿಕ್ ಸಹಭಾಗಿತ್ವದ ಕಾರಣಕ್ಕೆ ಅಬೆ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಅದೇ ರೀತಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ನಾಯಕತ್ವ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಿ ಸಮಗ್ರ ಭದ್ರತೆ ಒದಗಿಸಿದ ದೃಷ್ಟಿಯಿಂದ ಪ್ರಶಸ್ತಿ ನೀಡಲಾಗಿದೆ ಎಂದು ಅಮೆರಿಕ ಹೇಳಿದೆ.

    ಭಾರತಕ್ಕೂ ಕಾಲಿಟ್ಟೇಬಿಡ್ತು ಬ್ರಿಟನ್​ ಸೋಂಕು! ಪ್ರವಾಸ ಕೈಗೊಂಡಿದ್ದ ಚೆನ್ನೈ ವ್ಯಕ್ತಿಗೆ ಪಾಸಿಟಿವ್​

    20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts