ಬಿಗಿ ಬಂದೋಬಸ್ತ್‌ ಇದ್ರೂ ಜಿಲ್ಲಾಧಿಕಾರಿಯ ಮನೆ ದರೋಡೆ ಮಾಡಿ ಚೀಟಿ ಬರೆದಿಟ್ಟು ಹೋದ ಕಳ್ಳರು!

theft
Published on

ದೇವಾಸ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದೇವಾಸ್‌ನಲ್ಲಿ ಜಿಲ್ಲಾಧಿಕಾರಿ ತ್ರಿಲೋಚನ್ ಗೌರ್ ಅವರ ಮನೆಯನ್ನು ದರೋಡೆ ಮಾಡಿ ಹೋದ ಕಳ್ಳರು, ಹೋಗುವಾಗ ಚೀಟಿ ಬರೆದಿಟ್ಟಿರುವ ವಿಚಿತ್ರ ಘಟನೆ ನಡೆದಿದೆ.

ಕರ್ತವ್ಯದ ನಿಮಿತ್ತ ಬೇರೆ ಕಡೆ ಹೋಗಿದ್ದು, ಮನೆಗೆ ಬಂದಾಗ ಕಳ್ಳತನ ನಡೆದಿರುವುದು ತಿಳಿದಿದೆ. ಲಾಕ‌ ಮುರಿದಿರುವ ಕಳ್ಳರು ಅದರಲ್ಲಿದ್ದ 30 ಸಾವಿರ ರೂಪಾಯಿಗಳ ಗಳ ನಗದು ಮತ್ತು ಚಿನ್ನಾಭರಣಗಳನ್ನು ಕದ್ದು ಒಯ್ದಿದ್ದಾರೆ.

ಹೋಗುವಾರ ಚೀಟಿ ಬರೆದಿಟ್ಟ ಅವರು, ನಾವು ಲಾಕ್‌ ಮಾಡುತ್ತಿಲ್ಲ. ಏಕೆಂದರೆ ಇದರಲ್ಲಿ ಹಣವಿಲ್ಲ. ಹಣವಿಲ್ಲದಿದ್ದಾಗ, ನಂತರ ಲಾಕ್ ಹಾಕುವ ಅಗತ್ಯವಿಲ್ಲ ಕಲೆಕ್ಟರ್ ಎಂದಿದ್ದಾರೆ.

ಸಿವಿಲ್ ಲೈನ್ ಪ್ರದೇಶದಲ್ಲಿ ಇವರ ಮನೆ ಇದೆ. ಅಚ್ಚರಿ ಎಂದರೆ, ಈ ಪ್ರದೇಶದಲ್ಲಿ ಎಲ್ಲಾ ಉನ್ನತ ಅಧಿಕಾರಿಗಳ ಮನೆ ಒಂದಕ್ಕೊಂದು ಹೊಂದಿಕೊಂಡೇ ಇದ್ದು, ಎಲ್ಲಾ ಮನೆಗಳಲ್ಲಿಯೂ ಟೈಟ್‌ ಸೆಕ್ಯುರಿಟಿ ಇದೆ. ಗೌರ್ ಅವರ ಬಂಗಲೆ ಸಂಸದರ ಬಂಗಲೆ ಮತ್ತು ದೇವಸ್ ಎಸ್ ಡಿಎಂ ಪ್ರದೀಪ ಸೋನಿ ಅವರ ಬಂಗಲೆ ನಡುವೆ ಇದೆ. ಸುಮಾರು 100 ಮೀಟರ್‌ ಅಂತರದಲ್ಲಿಯೇ ಪೊಲೀಸ್ ಸೂಪರಿಂಟೆಂಡೆಂಟ್ ಬಂಗಲೆ ಕೂಡ ಇದ್ದರೂ ಇಷ್ಟು ಭದ್ರತೆ ನಡುವೆ ದರೋಡೆ ನಡೆದಿದೆ.

ಸದ್ಯ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net