

ಹೈದರಾಬಾದ್: ಚಿತ್ರ ತಾರೆಯರಾದ ಸಮಂತಾ ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆದುಕೊಂಡಿರುವುದು ಅವರ ಅಭಿಮಾನಿಗಳು ಹಾಗೂ ಚಿತ್ರರಂಗದವರಿಗೆ ಇನ್ನೂ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಯಾರು ಏನೇ ಹೇಳಿದರೂ ಇವರಿಬ್ಬರು ಡಿವೋರ್ಸ್ ಪಡೆದಿರುವ ಬಗ್ಗೆ ಸತ್ಯ ಮಾತ್ರ ನಿಗೂಢವಾಗಿದೆ ಎಂದೇ ಎಲ್ಲರೂ ಹೇಳುತ್ತಿದ್ದಾರೆ.
ಈ ನಡುವೆ, ಸಮಂತಾ ಅವರಿಗೆ ಅಫೇರ್ಸ್ ಇತ್ತು, ಅವರು ಮಕ್ಕಳನ್ನು ಪಡೆಯಲು ಬಯಸಿರಲಿಲ್ಲ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಸಮಂತಾ ಖಡಕ್ ಆಗಿ ಉತ್ತರ ಕೊಟ್ಟಿದ್ದರು ಕೂಡ. ಇದರ ಬೆನ್ನಲ್ಲೇ ಇದೀಗ ನಿರ್ಮಾಪಕಿ ನೀಲಿಮಾ ಗುಣ ಹೇಳಿಕೆ ನೀಡಿದ್ದು, ಈ ಜೋಡಿಯ ವಿಚ್ಛೇದನಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಗುಣಶೇಖರ್ ಅವರ ‘ಶಕುಂತಲಂ’ ಚಿತ್ರದಲ್ಲಿ ಸಮಂತ ನಟಿಸುತ್ತಿದ್ದಾರೆ. ಗುಣಶೇಖರನ್ ಅವರ ಮಗಳು ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶೂಟಿಂಗ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡ ನಿಲೀಮಾ, ‘ನಮ್ಮ ತಂದೆ ಸ್ಕ್ರಿಪ್ಟ್ ವಿವರಿಸಿದಾಗ ಸಮಂತಾ ಈ ಚಿತ್ರ ಮಾಡಲು ಒಪ್ಪಿಕೊಂಡಿದ್ದರು. ಅವರಿಗೆ ತುಂಬ ಖುಷಿ ಕೂಡ ಆಗಿತ್ತು. ಆದರೆ ಅದೇ ವೇಳೆ ಅವರು ಹಿಂದೇಟು ಕೂಡ ಹಾಕಿದ್ದರು. ಏಕೆಂದರೆ ಪೌರಾಣಿಕ ಸಿನಿಮಾಗಳ ಶೂಟಿಂಗ್ಗೆ ಹೆಚ್ಚು ಸಮಯ ಹಿಡಿಯುತ್ತದೆ. ಆದ್ದರಿಂದ ಒಪ್ಪಿಕೊಳ್ಳಲು ಸ್ವಲ್ಪ ಕಷ್ಟ ಎಂದಿದ್ದರು. ಕಾರಣ ಕೇಳಿದಾಗ, ನಾನು ಅಮ್ಮನಾಗುವ ಪ್ಲ್ಯಾನ್ ಇದೆ. ಆದ್ದರಿಂದ ಆದಷ್ಟು ಬೇಗ ಶೂಟಿಂಗ್ ಮುಗಿಸಿದರೆ ಒಪ್ಪಿಕೊಳ್ಳಬಹುದು, ಇಲ್ಲದಿದ್ದರೆ ನನಗೆ ಪ್ಲ್ಯಾನ್ ಠುಸ್ ಆಗುತ್ತದೆ ಎಂದಿದ್ದರು. ಈ ಚಿತ್ರಕ್ಕೆ ಅವರೇ ಸೂಕ್ತ ವ್ಯಕ್ತಿ ಎಂದಿದ್ದ ನಾನು ಮತ್ತು ಅಪ್ಪ, ಅದಕ್ಕೆ ಒಪ್ಪಿಕೊಂಡಿದ್ದೆವು ಎಂದು ನಿಲೀಮಾ ಗುಣ ಹೇಳಿದ್ದಾರೆ.
ಇವರ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಿದಾಡುತ್ತಿರುವುದು ತುಂಬಾ ನೋವು ತಂದಿದೆ. ಆದರೆ ಡಿವೋರ್ಸ್ ಪಡೆದಿರುವುದು ತುಂಬಾ ಅಚ್ಚರಿ ವಿಷಯ ಎಂದೂ ಅವರು ಹೇಳಿದ್ದಾರೆ.