ಬೆಂಗಳೂರಿನ ಡೆಂಟಿಸ್ಟ್‌, ಐಸಿಸ್‌ ಟೆರರಿಸ್ಟ್‌! ದೆಹಲಿಯಲ್ಲಿ ಉಗ್ರನ ಅರೆಸ್ಟ್‌, ತನಿಖಾ ದಳದ ಮುಂದೆ ಹಾಜರು

terrorist
Published on

ಬೆಂಗಳೂರು: ದೆಹಲಿಯಲ್ಲಿ ಸೆರೆಸಿಕ್ಕ ಐಸಿಸ್ ಶಂಕಿತ ಉಗ್ರ ದಂತ ವೈದ್ಯ ಡಾ. ಮೊಹಮ್ಮದ್ ತೌಕೀರ್‌ನನ್ನು ಬೆಂಗಳೂರಿಗೆ ಕರೆತಂದು ಎನ್‌ಐಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಹೆಚ್ಚಿನ ತನಿಖೆಗೆ ನ.8ವರೆಗೆ ವಶಕ್ಕೆ ಪಡೆದಿದೆ.

ಐಸಿಸ್‌ಗೆ ನೇಮಕಾತಿ ಮತ್ತು ಹಣ ಸಂಗ್ರಹ ಆರೋಪದ ಮೇರೆಗೆ ದೆಹಲಿಯಲ್ಲಿ ಅಡಗಿದ್ದ ಬೆಂಗಳೂರಿನ ತಿಲಕನಗರ ಬಳಿಯ ಬಿಸ್ಮಿಲ್ಲಾ ನಗರದ ತೌಕೀರ್‌ನನ್ನು ಎನ್‌ಐಎ ತಂಡ ಬಂಧಿಸಿತು. ಐಸಿಸ್‌ನಲ್ಲಿ ತೌಕೀರ್ ಸಕ್ರಿಯನಾಗಿದ್ದ ಬಗ್ಗೆ ತನಿಖೆಯಲ್ಲಿ ಪುರಾವೆಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಎನ್‌ಐಎ ವಿಶೇಷ ಕೋರ್ಟ್‌ಗೆ ತನಿಖಾಧಿಕಾರಿಗಳು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಕೋರ್ಟ್, ನ.8ವರೆಗೆ ಶಂಕಿತನನ್ನು ಎನ್‌ಐಎ ವಶಕ್ಕೆ ಒಪ್ಪಿಸಿ ಆದೇಶಿಸಿತು. ಎನ್‌ಐಎ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿದರು.

ಐಸಿಸ್ ಸಂಘಟನೆಗೆ ಹಣ ಸಂಗ್ರಹ, ಸದಸ್ಯರ ನೇಮಕಾತಿ ಜಾಲದ ತೌಕೀರ್ ಕಿಂಗ್‌ಪಿನ್ ಆಗಿದ್ದಾನೆ. ಇಸ್ಲಾಂ ಯುವಕರಿಗೆ ಮೂಲಭೂತವಾದಿ ಬೋಧಿಸಿ ಐಸಿಸ್ ಸಂಘಟನೆಗೆ ಸೆಳೆಯುತ್ತಿದ್ದ. ಪ್ರಭಾವಕ್ಕೆ ಒಳಗಾದವರಿಗೆ ಟರ್ಕಿ ಮೂಲಕ ಸಿರಿಯಾಗೆ ಕಳುಹಿಸಿ ಐಸಿಸ್‌ಗೆ ಸೇರಿಸುತ್ತಿದ್ದ. ಐಸಿಸ್ ನೇಮಕಾತಿಗೆ ಅಗತ್ಯವಾದ ಹಣ ದೇಣಿಗೆ ಸಂಗ್ರಹದಲ್ಲೂ ತೌಕೀರ್ ಮುಖ್ಯ ಪಾತ್ರ ವಹಿಸಿದ್ದಾನೆ ಎಂದು ಕೋರ್ಟ್‌ಗೆ ಎನ್‌ಐಎ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net