More

    VIDEO: ಕುರುಂಕುರುಂ, ಟೇಸ್ಟಿ ಟೇಸ್ಟಿ ಪೇಪರ್‌ ದೋಸೆ ತಿನ್ನಿ, 71 ಸಾವಿರ ರೂ. ಬಹುಮಾನ ಗೆಲ್ಲಿ!

    ನವದೆಹಲಿ: ದೋಸೆಯಲ್ಲಿ ಇರುವ ವೆರೈಟಿಗಳಿಗೆ ಲೆಕ್ಕವೇ ಇಲ್ಲ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ತೆರನಾದ ದೋಸೆಗಳು ಇವೆ. ಅದರಲ್ಲಿಯೂ ಕೆಲವೊಂದು ದೋಸೆಗಳನ್ನು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಹಂಬಲ ಉಂಟಾಗುವುದಂತೂ ನಿಜ. ಕುರುಂಕುರುಂ ಎನ್ನಿಸುವ ಟೇಸ್ಟಿ ಟೇಸ್ಟಿ ದೋಸೆಯನ್ನೂ ತಿನ್ನಿ, ಅದರ ಜತೆಗೆ 71 ಸಾವಿರ ರೂಪಾಯಿ ಬಹುಮಾನವನ್ನೂ ಗೆಲ್ಲಿ ಎಂದರೆ ನಂಬುವಿರಾ?

    ನಂಬಲೇ ಬೇಕು. ಇಂಥದ್ದೊಂದು ಆಫರ್‌ ಕೊಟ್ಟಿದೆ ಡೆಲ್ಲಿ ಟಮ್ಮಿ (@delhi_tummy) ಎಂಬ ಇನ್‌ಸ್ಟಾಗ್ರಾಂ ಖಾತೆದಾರರು. ದೋಸೆ ತಿಂದರೆ ಬಹುಮಾನ ಕೊಡುತ್ತಾರೆ ಎಂದರೆ ದೋಸೆ ಚೆನ್ನಾಗಿಲ್ಲದೇ ಇರಬಹುದು ಎಂದುಕೊಂಡರೆ ಅದು ತಪ್ಪು. ದೋಸೆಯೇನೋ ತುಂಬಾ ಟೇಸ್ಟಿಯಾಗಿದೆ. ಆದರೆ ಅದರ ಉದ್ದ ಮಾತ್ರ 10 ಅಡಿ! ಈ 10 ಅಡಿಯಷ್ಟು ಇರುವ ದೋಸೆಯನ್ನು ಒಬ್ಬರೇ ಸಂಪೂರ್ಣವಾಗಿ ತಿಂದರೆ, ಈ ಬಹುಮಾನ ನೀಡಲಾಗುವುದಂತೆ!

    ಈ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ದೋಸೆ ತಯಾರಿಸುತ್ತಿರುವುದನ್ನು ನೋಡಬಹುದು. ದೋಸೆ ಕಾವಲಿಯಲ್ಲಿ ದೋಸೆ ಹಿಟ್ಟನ್ನು ಹಾಕುತ್ತಾ ಅದನ್ನು 10 ಅಡಿ ಉದ್ದದ ದೋಸೆಯಾಗಿ ಮಾಡುವುದನ್ನು ಇಲ್ಲಿ ನೋಡಬಹುದು. ದೋಸೆಯ ಮೇಲೆ ಎಣ್ಣೆ ಹಾಕಿ ನಂತರ ಆಲೂಗಡ್ಡೆ ಪಲ್ಯ ಹಾಗೂ ಕೆಲ ಮಸಾಲೆಯನ್ನು ಹಾಕುವುದನ್ನು ಇದರಲ್ಲಿ ಕಾಣಬಹುದು. ನಂತರ ಅದನ್ನು ಸುರುಳಿಯಂತೆ ಮಡಚಿ 10 ಅಡಿ ಉದ್ದದ ಪ್ಲೇಟ್‌ನಲ್ಲಿ ಹತ್ತಾರು ಬಗೆಯ ಚಟ್ನಿಯ ಜೊತೆ ಸರ್ವ್‌ ಮಾಡುತ್ತಾರೆ. ಕೊನೆಯಲ್ಲಿ ದೋಸೆಯ ಮೇಲೆ ಚೀಸ್‌ನ್ನು ಹಾಕುತ್ತಾರೆ. ಇದನ್ನು ಸ್ವಲ್ಪವೂ ಬಿಡದೇ ತಿನ್ನುವವರಿಗೆ ಬಹುಮಾನ ಕೊಡುತ್ತಾರಂತೆ.

    ಇಲ್ಲಿದೆ ನೋಡಿ 10 ಅಡಿ ಉದ್ದದ ದೋಸೆ

     

    View this post on Instagram

     

    A post shared by Bhawna 💫 (@delhi_tummy)

     

    ಗುಟ್ಟಾಗಿ ಕಾಲ್‌ ಮಾಡ್ತಾರೆ, ಕೂಡ್ಲೇ ನಂಬರ್‌ ಮಾಯ ಆಗತ್ತೆ! ಕೇಳಿದ್ರೆ ಸಂಶಯದ ಪಿಶಾಚಿ ಅಂತಾರೆ… ಏನ್‌ ಮಾಡ್ಲಿ ಮೇಡಂ?

    ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts