More

    ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

    ಲಖನೌ: ಐಎಎಸ್‌ ದಂಪತಿಯ ಮೊದಲ ರಾತ್ರಿಯ ವಿವಾದ ಮದುವೆಯಾಗಿ 32 ವರ್ಷಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ.

    ಬಾಲಾ ಪ್ರಸಾದ್‌ ಅಶ್ವಥಿ ಹಾಗೂ ಅವರ ಪತ್ನಿಯ ವಿವಾದ ಇದಾಗಿದೆ. ಇವರಿಬ್ಬರೂ ಐಎಎಸ್‌ ಅಧಿಕಾರಿಗಳಾಗಿದ್ದು ಬಾಲಾ ಅವರು ಇದೀಗ ನಿವೃತ್ತರಾಗಿದ್ದಾರೆ. ತಮ್ಮ ಪತಿ ದೈಹಿಕ ಹಾಗೂ ಮಾನಸಿಕವಾಗಿ ಇಷ್ಟು ವರ್ಷಗಳು ತಮಗೆ ಹೇಗೆಲ್ಲಾ ಹಿಂಸೆ ನೀಡಿದರು ಎಂಬ ಬಗ್ಗೆ ಪತ್ನಿ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದಾರೆ. ತಾವು ಮೊದಲ ರಾತ್ರಿ ಪಟ್ಟಿರುವ ಕಷ್ಟದಿಂದ ಹಿಡಿದು ಇಲ್ಲಿಯವರೆಗೆ ಅನುಭವಿಸಿರುವ ಹಿಂಸೆಯ ಕುರಿತು ಅವರು ಹೇಳಿಕೊಂಡಿದ್ದಾರೆ.

    ಈ ಐಎಎಸ್‌ ದಂಪತಿಯ ವಿವಾಹವು 1990ರ ಮೇ ತಿಂಗಳಿನಲ್ಲಿ ನಡೆದಿದೆ. ಮದುವೆಯಾದ ಮೊದಲ ರಾತ್ರಿಯೇ ಪತಿ ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥರು ಎಂದು ಪತ್ನಿಗೆ ತಿಳಿದಿದೆ. ಇದು ಮದುವೆಗೂ ಮುನ್ನವೇ ತಿಳಿದಿದ್ದರೂ ತಮಗೆ ಅವರು ಮೋಸ ಮಾಡಿರುವುದಾಗಿ ಪತ್ನಿ ದೂರಿದ್ದಾರೆ. ಅಷ್ಟೇ ಅಲ್ಲ, ಪತಿ ಯಾವಾಗ ದೈಹಿಕವಾಗಿ ಅಸಮರ್ಥರು ಎಂದು ತಮಗೆ ತಿಳಿಯಿತೋ ಅಲ್ಲಿಂದ ಇಲ್ಲಿಯವರೆಗೂ ಹಿಂಸೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.

    ‘ಮೊದಲ ರಾತ್ರಿ ನನ್ನ ಪತಿ ಅಸಮರ್ಥರು ಎಂದು ತಿಳಿಯಿತು. ಆದರೆ ಅಷ್ಟಕ್ಕೆ ಸುಮ್ಮನಾಗದ ನನ್ನ ಪತಿ ತಮ್ಮ ಸ್ನೇಹಿತರನ್ನು ಕರೆತಂದು ಅವರ ಜತೆ ಲೈಂಗಿಕ ಸಂಬಂಧ ಹೊಂದುವಂತೆ ಬೆದರಿಕೆ ಹಾಕುತ್ತಿದ್ದರು. ನಾನು ಅದನ್ನು ನಿರಾಕರಿಸಿದಾಗ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಲು ಶುರುಮಾಡಿದರು. ಅದೊಂದು ದಿನ ನನ್ನ ಕೈಯನ್ನು ಮುರಿಯಲು ಪ್ರಯತ್ನಿಸಿದರು. ಇಷ್ಟು ವರ್ಷಗಳು ನಾನು ಅವರ ಹಿಂಸೆ ಸಹಿಸಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

    ’ನನ್ನ ಪತಿ ನನ್ನನ್ನು ಆರ್ಥಿಕವಾಗಿ ಬಳಸಿಕೊಳ್ಳುತ್ತಿದ್ದರು. ಸಂಬಳ ಪಡೆಯಲು ಸಹ ನನಗೆ ಬಿಡುತ್ತಿರಲಿಲ್ಲ. ನನ್ನ ಸಂಬಳವನ್ನು ತಮ್ಮದೇ ಬ್ಯಾಂಕ್‌ ಖಾತೆಗೆ ಮೋಸದಿಂದ ಅಟ್ಯಾಚ್‌ ಮಾಡಿಕೊಂಡಿದ್ದರು. ಅಷ್ಟೂ ಸಂಬಳವನ್ನು ತಾವೇ ಪಡೆದು ಮನೆ ಖರ್ಚಿಗೆ ಕೇವಲ 6 ಸಾವಿರ ರೂಪಾಯಿ ನೀಡುತ್ತಿದ್ದರು. ಹೆಚ್ಚು ಹಣ ಕೇಳಿದಲ್ಲಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು’ ಎಂದಿದ್ದಾರೆ.

    ‘ನಕಲಿ ಸಹಿ ಮಾಡಿ ನನ್ನ ಖಾತೆಯಿಂದ ವಹಿವಾಟು ನಡೆಸಿದ್ದಾರೆ. ನಕಲಿ ಇಮೇಲ್ ಐಡಿ ಸೃಷ್ಟಿಸಿ ನನ್ನ ಅಣ್ಣನಿಂದ ಐದು ಲಕ್ಷ ರೂಪಾಯಿ ಪಡೆದಿದ್ದಾರೆ. ಕರೊನಾದ ಸಮಯದಲ್ಲಿ ಕರೊನಾ ಬಂದಿರುವುದು ತಿಳಿದಿದ್ದರೂ ಅದನ್ನು ನಮ್ಮಿಂದ ಮರೆಮಾಚಿದ್ದರು. ಇದರಿಂದ ನಮ್ಮ ಇಡೀ ಕುಟುಂಬ ಕರೊನಾದಿಂದ ಬಳಲುವಂತಾಯಿತು. ನಾನು ಕೂಡ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಈಗ ಸಹಿಸಿಕೊಳ್ಳುವುದು ಅಸಾಧ್ಯ ಎನ್ನುವ ಕಾರಣಕ್ಕೆ ದೂರು ನೀಡುತ್ತಿದ್ದೇನೆ’ ಎಂದಿದ್ದಾರೆ ಅವರು.

    ಬಾಲಾ ಪ್ರಸಾದ್ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ, ವಂಚನೆ ಮತ್ತು ಐಟಿ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

    VIDEO: ಎಂಟು ಮಂದಿಗೆ ಒಬ್ಬನೇ ಗಂಡ: ಜಗಳವೂ ಇಲ್ಲ, ಗಲಾಟೆಯೂ ಇಲ್ಲ… ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟಾನೆ ಪತಿರಾಯ…

    ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಹುಸಿಯಾಯ್ತು ಮುಲಾಯಂ ಸೊಸೆ, ಬಹುಗುಣ ಪುತ್ರನ ನಿರೀಕ್ಷೆ

    ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಹುಸಿಯಾಯ್ತು ಮುಲಾಯಂ ಸೊಸೆ, ಬಹುಗುಣ ಪುತ್ರನ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts