

ಕಾಬುಲ್: ಇಡೀ ಅಫ್ಘಾನಿಸ್ತಾನದ ಮೇಲೆ ಜಯ ಸಾಧಿಸಿ ಹೆಮ್ಮೆ ಪಡುತ್ತಾ ರಕ್ತದೋಕುಳಿ ಹರಿಸಿರುವ ತಾಲಿಬಾನಿಗಳಿಗೆ ಇದಾಗಲೇ ಇಲ್ಲಿಯ ಪುಟ್ಟ ನಗರ ಪಂಜ್‌ಶೀರ್ ಬೆವರು ಇಳಿಸುತ್ತಿದೆ. ಇದುವರೆಗೆ ಈ ಒಂದು ಪ್ರಾಂತ್ಯವನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲೇ ಅದರ ಮೇಲೆ ಹೋರಾಟ ನಡೆಸುತ್ತಿದ್ದಾರೆ ತಾಲಿಬಾನಿಗಳು.
ಇದಾಗಲೇ ಹಲವಾರು ತಾಲಿಬಾನಿ ರಕ್ಕಸರನ್ನು ಹೊಡೆದುರುಳಿಸಿರುವ ಪಂಜ್‌ಶೀರ್ ಸೈನಕರು ಇದೀಗ 41 ಮಂದಿಯನ್ನು ಹತ್ಯೆ ಮಾಡಿದ್ದಾರೆ. 21 ಉಗ್ರರನ್ನು ಸೆರೆ ಹಿಡಿಯಲಾಗಿದೆ.
ನಿಮಗೆ ಪಂಜ್‌ಶೀರ್ ಪ್ರಾಂತ್ಯದ ಒಳಗೆ ಬರಲು ಬಿಡುತ್ತೇವೆ. ಆದರೆ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಉತ್ತರ ಮೈತ್ರಿ ಪಡೆಯ ಕಮಾಂಡರ್ ಹಸೀಬ್ ಘೋಷಣೆ ಕೂಗುತ್ತಲೇ ಎಲ್ಲರನ್ನೂ ಹೊಡೆದುರುಳಿಸುತ್ತಿದ್ದಾರೆ.
ಈ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಮಿಲಿಟರಿ ಕಮಾಂಡರ್ ಹಾಗೂ ತಾಲಿಬಾನ್ ವಿರೋಧಿ ಆಂದೋಲನವನ್ನು ಮುನ್ನಡೆಸುತ್ತಿರುವ ಅಹಮದ್ ಮಸೂದ್ ಅವರ ವಕ್ತಾರ ಫಹೀಮ್ ಡಶ್ಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ತಾಲಿಬಾನಿಗಳುಹಲವು ಭಾಗಗಳಿಂದ ಪಂಜ್‌ಶೀರ್ ಕಣಿವೆ ಮೇಲೆ ದಾಳಿ ನಡೆಸಿದ್ದರು. ಆದರೆ, ಅವರನ್ನು ಒಳಗೆ ಪ್ರವೇಶಿಸಲು ನಿಗ್ರಹ ಪಡೆ ಅವಕಾಶ ನೀಡಿಲ್ಲ. ಈ ವೇಳೆ ತಾಲಿಬಾನ್ ಉಗ್ರರು ಸಾಕಷ್ಟು ಸುತ್ತು ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಎರಡೂ ಕಡೆಯವರಿಗೆ ಸಾಕಷ್ಟು ಗಾಯಗಳಾಗಿವೆ. ಆದರೂ ತಾಲಿಬಾನ್ ಪಡೆಯನ್ನು ಹಿಮ್ಮೆಟ್ಟಿಸಲಾಗಿದ್ದು, 41 ಮಂದಿಯನ್ನು ಹತ್ಯೆ ಮಾಡಿದ್ದೇವೆ ಎಂದಿದ್ದಾರೆ.