

ಬೆಳಗಾವಿ: ತುಂಬಾ ಪ್ರೀತಿಸುತ್ತಿದ್ದ ಪತ್ನಿ ನಿಧನರಾದ ಹಿನ್ನೆಲೆಯಲ್ಲಿ, ಅವರ ನೆನಪಿಗಾಗಿ ಮೂರ್ತಿ ಸ್ಥಾಪನೆ ಮಾಡಿದ್ದಾರೆ ಬೆಳಗಾವಿಯ ಶಿವಾ ಚೌಗಲೆ. ಇವರು ಪಾಲಿಕೆಯ ಸದಸ್ಯರಾಗಿದ್ದು, ಇವರ ಪತ್ನಿ ಮೈನಾಬಾಯಿ ಕೂಡ ಪಾಲಿಕೆಯ ಸದಸ್ಯೆಯಾಗಿದ್ದರು.
ಇವರ ಸ್ಮರಣಾರ್ಥ ಬೆಳಗಾವಿ ಮರಗಾಯಿ ನಗರದಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಮೈನಾಬಾಯಿ ಚೌಗಲೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ನಿಮೋನಿಯಾ ಕಾಣಿಸಿಕೊಂಡಿತ್ತು. ಪತಿ ಶಿವಾ ಅವರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಅದರ ಚಿಂತೆಯಲ್ಲಿಯೇ ಮೈನಾಬಾಯಿ ಜ್ವರಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದರು.
ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾದ ಶಿವಾ ಚೌಗಲೆ ಅವರಿಗೆ ಪತ್ನಿ ನೆನೆಪು ಸದಾ ಕಾಡುತ್ತಿದ್ದರಿಂದ ಮೂರ್ತಿ ಸ್ಥಾಪನೆ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಜ್ಯೋತಿಷಿಗಳ ಸಲಹೆ ಮೇರೆಗೆ ಮೂರ್ತಿ ನಿರ್ಮಾಣ ಮಾಡಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮನೆಯಲ್ಲಿ ಮೈನಾಬಾಯಿ ಮೂರ್ತಿ ಸ್ಥಾಪನೆ ಕಾರ್ಯ ಅದ್ಧೂರಿಯಾಗಿ ನೆರವೇರಿದೆ.
ಮನೆಯ ಮುಂದೆ ಪೆಂಡಾಲ್ ಹಾಗಿ ಬಂಧು, ಬಳಗಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ. ಮೂರ್ತಿಯ ಜತೆಗೆ ಮೈನಾಬಾಯಿ ಧರಿಸುತ್ತಿದ್ದ ಒಡವೆ, ಸೀರೆ ಸೇರಿ ಎಲ್ಲಾ ವಸ್ತುಗಳು ಇಡಲು ವಾರ್ಡರೂಬ್ ವ್ಯವಸ್ಥೆ ಮಾಡಲಾಗಿದೆ.
ತಮ್ಮ ವಾರ್ಡ್‌ನಲ್ಲಿ ಸುಮಾರು 8 ಕೋಟಿ ರೂಪಾಯಿ ಕೆಲಸ ಮಾಡಿಸಿದ್ದ ಮೈನಾಬಾಯಿ. ಅವರ ಎಲ್ಲಾ ಕನಸು ಈಡೇರಿಸಲು ಪತಿ ಸಂಕಲ್ಪ. ತೊಟ್ಟಿದ್ದಾರೆ. ಪತ್ನಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪನೆ ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ: