VIDEO: ಹೈಕೋರ್ಟ್‌ಗೆ ಬಂದ ಹಾವು! ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಪ್ರತ್ಯಕ್ಷ- ವಿಡಿಯೋ ವೈರಲ್‌

snake
Published on

ಮುಂಬೈ: ಕೋವಿಡ್‌ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವರ್ಚ್ಯುವಲ್‌ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದರು. ಆಗ ಸುಮಾರು ಐದು ಅಡಿ ಉದ್ದದ ಹಾವು ಅವರ ಕೊಠಡಿಯಲ್ಲಿ ನುಸುಳಿ ಆತಂಕ ಸೃಷ್ಟಿಸಿದೆ.

ನ್ಯಾಯಮೂರ್ತಿ ಎನ್‌.ಆರ್ ಬೋರ್ಕರ್ ಅವರ ಕೊಠಡಿಯಲ್ಲಿ ಈ ಹಾವು ಕಾಣಿಸಿಕೊಂಡಿದೆ. ಹಾವು ಕೊಠಡಿಯನ್ನು ಪ್ರವೇಶಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅಲ್ಲಿ ಇರಲಿಲ್ಲ. ಆದರೆ ವಿಚಾರಣೆ ಮುಗಿಸಿ ಕೊಠಡಿಗೆ ಬಂದಾಗ ಹಾವು ಪತ್ತೆಯಾಗಿದೆ.

ಹಾವನ್ನು ನೋಡಿದ ತಕ್ಷಣ ಕೋರ್ಟ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಉರಗ ತಜ್ಞರನ್ನು ಹೈಕೋರ್ಟ್‌ಗೆ ಕರೆಸಿದ್ದಾರೆ. ಹಾವು ವಿಷಕಾರಕ ಅಲ್ಲವೆಂದು ಉರಗ ರಕ್ಷಕರು ಹೇಳಿದ್ದಾರೆ. ಹಾವನ್ನು ಹಿಡಿದು, ಸೂಕ್ತ ಸ್ಥಳದಲ್ಲಿ ಅದನ್ನು ಬಿಟ್ಟಿದ್ದಾರೆ.

ವರ್ಚ್ಯುವಲ್‌ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಜನಸಂದಣಿ ಕಡಿಮೆಯಾಗಿದ್ದರಿಂದ ಹಾವು ಕೊಠಡಿಗೆ ಬಂದದ್ದು ಯಾರೂ ಗಮನಿಸಲಿಲ್ಲ ಎನ್ನಲಾಗಿದೆ.

ಇಲ್ಲಿದೆ ನೋಡಿ ಹಾವು ಹಿಡಿದ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net