More

    ವಿಲ್‌ ಬರೆಯದ ಅಪ್ಪನ ಆಸ್ತಿ, ಉಯಿಲು ಮಾಡದ ಮಹಿಳೆಯ ಆಸ್ತಿ ಯಾರಿಗೆ? ಸುಪ್ರೀಂನಿಂದ ಮಹತ್ವದ ತೀರ್ಪು

    ನವದೆಹಲಿ: ಹಿಂದೂ ಮಹಿಳೆಗೆ ಪುರುಷರಂತೆಯೇ ಆಸ್ತಿಯಲ್ಲಿ ಸರಿಸಮಾನು ಹಕ್ಕಿದೆ ಎಂದು ಕೆಲ ವರ್ಷಗಳ ಹಿಂದೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಈಗ ಅಂಥದ್ದೇ ಇನ್ನೊಂದು ತೀರ್ಪನ್ನು ಮಹಿಳೆಯರ ವಿಷಯದಲ್ಲಿ ನೀಡಿದೆ.

    ಹಿಂದೂ ಮಹಿಳೆಯು ತನ್ನ ಪಾಲಿನ ಆಸ್ತಿಯನ್ನು ಉಯಿಲು (ವಿಲ್) ಮಾಡದೇ ಸತ್ತರೆ ಆಕೆ ತನ್ನ ತಂದೆ ಅಥವಾ ತಾಯಿಯಿಂದ ಪಡೆದುಕೊಂಡಿರುವ ಆಸ್ತಿಯು ಆಕೆಯ ತಂದೆಯ ವಾರಸುದಾರರಿಗೆ ಮರಳುತ್ತದೆ, ಒಂದು ವೇಳೆ ಆ ಆಸ್ತಿಯ ಗಂಡ ಅಥವಾ ಗಂಡನ ತಂದೆಯಿಂದ ಪಡೆದುಕೊಂಡಿದ್ದರೆ ಆ ಆಸ್ತಿಯು ಗಂಡನ ಉತ್ತರಾಧಿಕಾರಿಗಳಿಗೆ ಮರಳುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
    (ಇಲ್ಲಿ ತಂದೆಯ ವಾರಸುದಾರರು ಎಂದರೆ ತಂದೆಯ ಪುತ್ರಿಯರು, ಪತ್ನಿ, ತಾಯಿ, ಮೃತ ಪುತ್ರನ ಪುತ್ರರು, ಮೃತ ಪುತ್ರನ ಪುತ್ರಿಯರು, ಮೃತ ಪುತ್ರಿಯ ಪುತ್ರಿಯರು. ಹಾಗೆಯೇ ಪತಿಯ ವಾರಸುದಾರರು ಎಂದರೆ ಅವರ ಪುತ್ರ, ಪುತ್ರಿ, ತಾಯಿ ಹಾಗೂ ಮೊಮ್ಮಕ್ಕಳು)

    ಅದೇ ರೀತಿ, ವಿಲ್‌ ಬರೆದಿಡದೆ ಸಾಯುವ ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಹಾಗೂ ವಿಭಜನೆಯಿಂದ ಬಂದ ಆಸ್ತಿಗಳು ಹೆಣ್ಣುಮಕ್ಕಳಿಗೆ ಆನುವಂಶಿಕವಾಗಿ ಸಿಗಬೇಕಾಗುತ್ತದೆ ಮತ್ತು ಅವರು ಕುಟುಂಬದ ಇತರ ಸದಸ್ಯರಿಗಿಂತ ಹೆಚ್ಚಿನ ಆದ್ಯತೆ ಪಡೆಯಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಇದರ ಅರ್ಥ, ಒಂದು ವೇಳೆ ಹಿಂದೂ ಪುರುಷ ವಿಲ್‌ ಬರೆದಿಡದೆ ಮೃತಪಟ್ಟರೆ, ಆತನ ಸ್ವಯಾರ್ಜಿತ ಆಸ್ತಿ, ಜಂಟಿ ಮಾಲೀಕತ್ವ ಅಥವಾ ಕೌಟುಂಬಿಕ ಆಸ್ತಿಯ ವಿಭಜನೆಯಿಂದ ಪಡೆದುಕೊಂಡ ಆಸ್ತಿಯನ್ನು ಹಾಗೆಯೇ ವಂಶಪಾರಂಪರ್ಯವಾಗಿ ಹಂಚಿಕೆ ಮಾಡಲಾಗುತ್ತದೆಯೇ ವಿನಾ, ಉಳಿಯುವಿಕೆಯ ಆಧಾರದಲ್ಲಿ ಅಲ್ಲ. ಅಂತಹ ಹಿಂದೂ ಪುರುಷರ ಹೆಣ್ಣುಮಕ್ಕಳು ಕುಟುಂಬದ ಇತರ ಸದಸ್ಯರಿಗಿಂತ (ಮೃತ ತಂದೆಯ ಸಹೋದರರ ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು) ಆ ಆಸ್ತಿಯನ್ನು ಆನುವಂಶಿಕವಾಗಿ ಪಡೆದುಕೊಳ್ಳಲು ಅರ್ಹತೆ ಪಡೆದಿರುತ್ತಾರೆ ಎಂದು ಕೋರ್ಟ್‌ ಹೇಳಿದೆ.

    ಅರುಣಾಚಲ ಗೌಂಡರ್ ಎನ್ನುವವರು ಆಸ್ತಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

    ಹಿಂದೂ ಉತ್ತರಾಧಿಕಾರ ಕಾಯ್ದೆಯ ಮುಖ್ಯ ಉದ್ದೇಶವು, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಪುರುಷ ಮತ್ತು ಸ್ತ್ರೀಯರ ನಡುವೆ ಸಂಪೂರ್ಣ ಸಮಾನತೆಯನ್ನು ಸ್ಥಾಪಿಸುವುದು ಆಗಿದೆ ಎಂದು ಹೇಳಿರುವ ನ್ಯಾಯಮೂರ್ತಿಗಳು, ಈ ಕಾಯ್ದೆ ಯಾರಿಗೆಲ್ಲಾ ಅನ್ವಯಿಸುತ್ತದೆ ಎಂದು ವಿವರಣೆ ನೀಡಿರುವುದು ಹೀಗೆ: ‘ಮುಸ್ಲಿಂ, ಕ್ರೈಸ್ತರು, ಪಾರ್ಸಿ ಹೊರತುಪಡಿಸಿ ಬೌದ್ಧ, ಜೈನ ಅಥವಾ ಸಿಖ್ ಧರ್ಮದ ಯಾವುದೇ ವ್ಯಕ್ತಿಗೂ ಈ ಕಾಯ್ದೆ ಅನ್ವಯಿಸುತ್ತದೆ.ಇದು ಏಕರೂಪದ ಮತ್ತು ಸಮಗ್ರವಾದ ಉತ್ತರಾಧಿಕಾರದ ವ್ಯವಸ್ಥೆಯನ್ನು ರೂಪಿಸುತ್ತದೆ. ಮಿತಾಕ್ಷರ ಮತ್ತು ದಯಾಭಾಗ ಶಾಲೆಗಳಿಂದ ಆಡಳಿತ ನಡೆಸಲ್ಪಡುವ ವ್ಯಕ್ತಿಗಳಿಗೆ ಮತ್ತು ಹಿಂದೆ ಮುರುಮಕ್ಕಟ್ಟಯಂ, ಅಳಿಯಸಂತಾನ ಮತ್ತು ನಂಬೂದ್ರಿ ಕಾನೂನುಗಳಿಂದ ಆಡಳಿತ ನಡೆಸಲ್ಪಡುವ ವ್ಯಕ್ತಿಗಳಿಗೆ ಅನ್ವಯ ಆಗುತ್ತದೆ. ಇದು ವೀರಶೈವ, ಲಿಂಗಾಯತ, ಬ್ರಹ್ಮ ಪ್ರಾರ್ಥನಾ ಅಥವಾ ಆರ್ಯ ಸಮಾಜದ ಅನುಯಾಯಿ ಸೇರಿದಂತೆ ಅದರ ಯಾವುದೇ ರೂಪದಲ್ಲಿ ಧರ್ಮದಿಂದ ಹಿಂದೂ ಆಗಿರುವವರಿಗೆ ಕೂಡ ಅನ್ವಯ ಆಗುತ್ತದೆ ಎಂದು ಕೋರ್ಟ್‌ ಹೇಳಿದೆ.

    ಪತಿಯ ಕಾಟ ಸಹಿಸದೇ ಆಗಿದ್ದಾಗಲೆಂದು ರುಂಡ-ಮುಂಡ ಬೇರೆ ಮಾಡಿ ಚೀಲಕ್ಕೆ ಹಾಕಿ ಠಾಣೆಗೆ ಹೋದ ಪತ್ನಿ!

    VIDEO: ಪೊಲೀಸರ ಜಾಗದಲ್ಲಿ ಕುಳಿತು ಅವರನ್ನೇ ಗದರಿಸುತ್ತಿರೋ ಕಪಿರಾಯ! ಸಿಬ್ಬಂದಿ ಸುಸ್ತೋ ಸುಸ್ತು

    ಸಿಎಂ ಬೊಮ್ಮಾಯಿ ಭದ್ರತಾ ಸಿಬ್ಬಂದಿಯಿಂದಲೇ ಗಾಂಜಾ ಮಾರಾಟ- ಮುಖ್ಯಮಂತ್ರಿಗಳ ನಿವಾಸದ ಬಳಿ ಇವರ ಡೀಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts