ಕಡಿಮೆ ದರದ ಚೀನಾ ಫೋನ್​ಗಳಿಗೂ ಬಂತು ಕುತ್ತು? ಯಾವೆಲ್ಲಾ ಕಂಪೆನಿಗಳ ಮೇಲೆ ಪ್ರಭಾವ ಬೀರಬಹುದು ನೋಡಿ..

phone
Published on

ನವದೆಹಲಿ: ಇದಾಗಲೇ ಚೀನಾದ ಹಲವಾರು ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಭಾರತದಿಂದಲೇ ಸಹಸ್ರಾರು ಕೋಟಿ ರೂಪಾಯಿಗಳ ಆದಾಯವನ್ನು ಸೃಷ್ಟಿಸಿಕೊಂಡು ಭಾರತಕ್ಕೇ ಚೂರಿ ಹಾಕುತ್ತಿರುವ ಚೀನಾಕ್ಕೆ ಈ ಮೂಲಕವಾಗಿ ಭಾರತ ತಿರುಗೇಟು ನೀಡಿದ್ದರೆ, ಹಲವು ದೇಶಗಳು ಕೂಡ ಚೀನಾಕ್ಕೆ ಬೇರೆ ಬೇರೆ ರೀತಿಯಾಗಿ ಬುದ್ಧಿ ಕಲಿಸಿವೆ.

ಇದೀಗ ಸ್ಮಾರ್ಟ್​ಫೋನ್​ಗೂ ಇದೇ ಗತಿ ಕಾಣಿಸಲು ಭಾರತದ ಸರ್ಕಾರ ನಿರ್ಧರಿಸಿದೆ. 12 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆ ಬಾಳುವ ಚೀನಾದ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ನಿಷೇಧ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆದಿದೆ. ಇದಾಗಲೇ ಕೇಂದ್ರ ಸರ್ಕಾರಕ್ಕೆ ಸಹಸ್ರಾರು ಕೋಟಿ ರೂಪಾಯಿಗಳ ತೆರಿಗೆಯನ್ನು ವಂಚಿಸಿರುವ ಒಪ್ಪೊ, ವಿವೊ ಕಂಪೆನಿ ಸೇರಿದಂತೆ ಬಹುಬೇಡಿಕೆ ಇರುವ ಶಿಯೋಮಿ, ಒನ್​ಪ್ಲಸ್​ ಕಂಪೆನಿಗಳ ಮೊಬೈಲ್​ಗಳು ಬ್ಯಾನ್​ ಆಗುವ ಸಾಧ್ಯತೆ ಇದೆ. ಏಕೆಂದರೆ ಈ ಕಂಪೆನಿಗಳ ಸ್ಮಾರ್ಟ್​ಫೋನ್​ಗಳ ದರವು 12 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಇವೆ.

ಭಾರತದಲ್ಲಿ ಚೀನಾ ಸ್ಮಾರ್ಟ್​ಫೋನ್​ಗಳ ಬೇರು ಬಿಟ್ಟಿವೆ. ಬಹುತೇಕರು ಕಡಿಮೆ ಬೆಲೆಗೆ ದೊರಕುವ ಚೀನಾ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುತ್ತಿದ್ದಾರೆ. ಹಾಗಾಗಿ ಚೈನೀಸ್ ಬ್ರ್ಯಾಂಡ್ ಗಳ ಮುಂದೆ ನಮ್ಮ ದೇಶದ ಸ್ಮಾರ್ಟ್ ಫೋನ್ ಉದ್ಯಮ ತತ್ತರಿಸುತ್ತಿದೆ. ಭಾರತೀಯ ಸ್ಮಾರ್ಟ್ ಫೋನ್ ಬ್ರಾಂಡ್​ಗಳಿಗೆ ಶಕ್ತಿಯನ್ನು ತುಂಬಲು ಈ ಹೆಜ್ಜೆ ಇಡಲಾಗುತ್ತಿದೆ. ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತಕ್ಕೆ ಇದು ಅನಿವಾರ್ಯ ಎನ್ನಲಾಗಿದೆ. ಇದೇ ಕಾರಣಕ್ಕೆ ಇಂಥದ್ದೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಇದು ಜಾರಿಗೊಂಡದ್ದೇ ಆದಲ್ಲಿ, ಈ ಚೀನಾ ಬ್ರ್ಯಾಂಡ್​ಗಳನನ್ನು ಹೊಂದಿರುವ ಜನರ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಕಡಿಮೆ ಬೆಲೆಗೆ ಸಿಗುವ ಚೀನಾ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಿವರ ಸಂಖ್ಯೆ ಕೂಡ ಭಾರತದಲ್ಲಿ ಹೆಚ್ಚಿದೆ. ಆದ್ದರಿಂದ ಹೀಗಿರುವಾಗ 12 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿದವರಿಗೆ ಈ ಬಿಸಿ ಮುಟ್ಟುವ ಸಾಧ್ಯತೆ ಇದೆ. ಆದರೆ ಸ್ಯಾಮ್​​ಸಂಗ್​ ಅಥವಾ ಆ್ಯಪಲ್​ ಐಫೋನ್​ ಬಳಕೆದಾರರಾಗಿದ್ದರೆ ಈ ಸಮಸ್ಯೆ ಬರಲಾರದು ಎನ್ನಲಾಗಿದೆ.

ಅದೇ ಮತ್ತೊಂದೆಡೆ, ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುದ್ದಿಯಾಗುತ್ತಲೇ ಷಿಯೋಮಿ ಕಂಪೆನಿಗಳ ಷೇರು ಮೌಲ್ಯ ಗಣನೀಯ ಇಳಿಕೆ ಕಂಡಿದೆ ಎಂದು ತಿಳಿದುಬಂದಿದೆ. ಇದಾಗಲೇ ತೆರಿಗೆ ವಂಚನೆ ಪ್ರಕರಣದಲ್ಲಿ ಒಪ್ಪೋ ಮತ್ತು ವೀವೊ ಕಂಪೆನಿಗಳ ವಿರುದ್ಧ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net