More

    ‘ಮಹಾ’ ಸಂಪುಟ ವಿಸ್ತರಣೆ: 50:50 ಆಧಾರದಲ್ಲಿ 18 ಮಂದಿ ಸಚಿವರಾಗಿ ಪ್ರಮಾಣ- ಡಿಟೇಲ್ಸ್​ ಇಲ್ಲಿದೆ…

    ಮುಂಬೈ: ಮಹಾರಾಷ್ಟ್ರದ ಏಕನಾಥ್‌ ಶಿಂಧೆ ನೇತೃತ್ವದ ಸರ್ಕಾರದ 18 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸುತ್ತಿದ್ದಾರೆ. ಸರ್ಕಾರ ರಚನೆಯಾಗಿ 40 ದಿನಗಳ ನಂತರ ಇಂದು ಸಂಪುಟ ವಿಸ್ತರಣೆ ಮಾಡಲಾಗಿದೆ.

    ಜೂನ್‌ 30, 2022 ರಂದು ಏಕನಾಥ್‌ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್‌ ಸರ್ಕಾರ ರಚನೆಯಾಗಿದೆ. ಆದರೆ, ಒಂದು ತಿಂಗಳು ಕಳೆದರೂ ದ್ವಿ ಸದಸ್ಯ ಸಂಪುಟ ಮಾತ್ರ ರಚನೆಯಾಗಿತ್ತು. ಇದೀಗ 18 ಮಂದಿಗೆ ಸಚಿವರಾಗುವ ಭಾಗ್ಯ ದೊರೆತಿದೆ.

    ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂಬತ್ತು ಬಿಜೆಪಿ ನಾಯಕರು ಮತ್ತು ಒಂಬತ್ತು ಶಿವಸೇನೆ ನಾಯಕರು ಇದ್ದು, ಅವರೆಲ್ಲರೂ ಇದೀಗ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಶಿಂಧೆ ಬಣದ ತಲಾ 9 ನಾಯಕರಿಗೆ ಇಂದು ಪ್ರಮಾಣ ವಚನ ಬೋಧಿಸಲಾಗುವುದು. ಆ ಮೂಲಕ ಮೈತ್ರಿ ಸರ್ಕಾರ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೊಂಡು ಆಡಳಿತ ನಡೆಸಲು ಮುಂದಾಗಿದೆ.

    ಶಿವಸೇನಾದ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್‌ ಅಘಾಡಿ ಮೈತ್ರಿಕೂಟದ ವಿರುದ್ಧ ಏಕನಾಥ ಶಿಂಧೆ ಬಂಡಾಯವೆದ್ದಿದ್ದರು. ನಂತರ ಶಿವಸೇನಾದಲ್ಲಿ ಉದ್ಧವ್‌ ಮತ್ತು ಶಿಂಧೆ ಬಣ ರೂಪುಗೊಂಡಿತು. ಶಿಂಧೆ ಬಣದಲ್ಲಿ ಶಿವಸೇನಾದ ಹೆಚ್ಚಿನ ಶಾಸಕರು ಸೇರಿದ್ದರು. ಈ ಹಿನ್ನೆಲೆಯಲ್ಲಿ ಶಿಂಧೆ ಬಣ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ.

    ಬಿಜೆಪಿಯಿಂದ
    * ಚಂದ್ರಕಾಂತ್‌ ಪಾಟೀಲ್‌,
    * ಸುಧೀರ್‌ ಮುಂಗನ್‌ತಿವಾರ್‌,
    * ಗಿರೀಶ್‌ ಮಹಾಜನ್‌,
    * ಸುರೇಶ್‌ ಖಾಡೆ,
    * ರಾಧಾಕೃಷ್ಣ ವಿಖೆ ಪಾಟೀಲ್‌,
    * ರವೀಂದ್ರ ಚೌಹಾಣ್‌,
    * ಮಂಗಲ್‌ ಪ್ರಭಾತ್‌ ಲೋಧಾ,
    * ವಿಜಯಕುಮಾರ್‌ ಗವಿತ್‌,
    * ಅತುಲ್‌ ಸವೆ.

    ಶಿವಸೇನೆಯಿಂದ
    * ದಾದಾ ಭುಸೆ,
    * ಶಂಭುರಾಜ್‌ ದೇಸಾಯಿ,
    * ಸಂದೀಪನ್‌ ಭುಮ್ರೆ,
    * ಉದಯ್‌ ಸಮಂತ್‌,
    * ತಾನಜಿ ಸಾವಂತ್‌,
    * ಅಬ್ದುಲ್‌ ಸತ್ತಾರ್‌,
    * ದೀಪಕ್‌ ಕೇಸಾರ್ಕರ್‌,
    * ಗುಲಾಬ್‌ರಾವ್‌ ಪಾಟೀಲ್‌,
    * ಸಂಜಯ್‌ ರಾಥೋಡ್‌.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts