

ಸಿಂಗಪುರ: ಮಹಾ ಕಳ್ಳಿಯೊಬ್ಬಳಿಗೆ ಕಳ್ಳತನ ಆರೋಪದಿಂದ ಬಿಡುಗಡೆ ಮಾಡಲು ತನ್ನ ಜತೆ ಲೈಂಗಿಕ ಕ್ರಿಯೆಗೆ ಬಾ ಎಂದು ಕರೆದಿದ್ದ ಸಿಂಗಪುರದ ಭಾರತೀಯ ಮೂಲದ ಪೊಲೀಸ್ ಇದೀಗ ಪೇಚಿಗೆ ಸಿಲುಕಿದ್ದಾನೆ.
ಅಂಗಡಿಯೊಂದರಲ್ಲಿ ದರೋಡೆಯಾಗಿತ್ತು. ಇದರ ಜತೆಗೆ ಕ್ರೆಡಿಟ್ ಕಾರ್ಡ್ ದುರುಪಯೋಗ ಪ್ರಕರಣವೂ ದಾಖಲಾಗಿತ್ತು. ಈ ಬಗ್ಗೆ ಮಳಿಗೆಯ ಮಾಲೀಕ ಪೊಲೀಸ್ ಕಂಪ್ಲೇಂಟ್ ನೀಡಿದ್ದ.
ತನಿಖೆ ಕೈಗೊಂಡ ಪೊಲೀಸರಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂತು. 32 ವರ್ಷದ ಮಹೇಂದ್ರನ್ ಸೆಲ್ವರಾಜು ಈ ಪ್ರಕರಣದ ತನಿಖೆ ಕೈಗೊಂಡಿದ್ದ. ಕಳ್ಳತನದಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ನೋಡಿದ ಈ ಪೊಲೀಸ್ ಮಹಾಶಯ, ನನಗೆ ಲೈಂಗಿಕ ಸಹಕಾರ ನೀಡು, ನನ್ನ ಜತೆ ಮಲಗಿದರೆ ನಿನ್ನ ಮೇಲಿರುವ ಕಳ್ಳತನದ ಆರೋಪದಿಂದ ಮುಕ್ತಿ ಮಾಡುವೆ ಅಂದಿದ್ದಾನೆ.
ಇದನ್ನು ಕೇಳಿ ಮಹಿಳೆ ಕೆಂಡಾಮಂಡಲ ಆಗಿದ್ದಾಳೆ. ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡಿದ್ದ ಉನ್ನತಾಧಿಕಾರಿಗಳು ಈತ ಆಕೆಗೆ ಆಫರ್ ನೀಡಿರುವುದು ತಿಳಿದುಬಂದಿದೆ. ಮಾತ್ರವಲ್ಲದೇ, ಈತನ ವಿರುದ್ಧ ಕೆದಕುತ್ತಾ ಹೋದಂತೆ ಕೆಲ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವುದೂ ತಿಳಿದುಬಂದಿದೆ. ಅಷ್ಟೇ ಅಲ್ಲದೇ, ಮಹಿಳೆಯೊಬ್ಬರ ವಿಡಿಯೋಗಳನ್ನು ಅವರ ಲ್ಯಾಪ್‌ಟಾಪ್‌ನಿಂದ ಕಾಪಿ ಮಾಡಿಕೊಳ್ಳುವ ಮೂಲಕ ಆಕೆಗೂ ವಂಚಿಸಿದ್ದ ಎಂದು ಗೊತ್ತಾಗಿದೆ. ’
ಮಹಿಳೆಯನ್ನು ಮಂಚಕ್ಕೆ ಕರೆದು, ತನ್ನ ಹಿಂದಿನ ಇದ್ದ ಬಿದ್ದ ಎಲ್ಲಾ ಕೆಟ್ಟ ಕೆಲಸಗಳನ್ನೂ ಬಹಿರಂಗಗೊಳಿಸಿದ ಈ ಪೊಲೀಸ್ ಈಗ ಕೆಲಸ ಕಳೆದುಕೊಂಡಿದ್ದಾನೆ. ಮಾತ್ರವಲ್ಲದೇ ಈತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.