More

    ನುಗ್ಗೇಕಾಯಿಯನ್ನು ಹ್ಯಾಷ್​ಟ್ಯಾಗ್​ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದೇಕೆ?

    ನವದೆಹಲಿ: ನಾನು ಮೊದಲಿನಿಂದಲೂ ನುಗ್ಗೆಕಾಯಿಯ ಪರೋಟಾ ಮಾಡಿ ತಿನ್ನುತ್ತಿದ್ದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆರೋಗ್ಯದ ಗುಟ್ಟನ್ನು ಬಿಟ್ಟುಕೊಟ್ಟರು.

    ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಆಯೋಜಿಸಲಾಗುತ್ತಿರುವ ಆನ್‌ಲೈನ್ ಫಿಟ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್‌ನೆಸ್ ದಿಗ್ಗಜರ ಜತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

    ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ಎಷ್ಟು ಪ್ರಯೋಜನ ಇದೆ ಎಂಬುದನ್ನು ವಿವರಿಸುವ ವೇಳೆ ಪ್ರಧಾನಿಯವರು ಈ ವಿಷಯವನ್ನು ಹೇಳಿದರು. ನುಗ್ಗೇಕಾಯಿ ತುಂಬಾ ಒಳ್ಳೆಯದು ಎಂದ ಅವರು, ಈಗೆ ಏನನ್ನಾದರೂ ಪ್ರಚಾರ ಮಾಡಬೇಕಿದ್ದರೆ ಹ್ಯಾಷ್​ಟ್ಯಾಗ್​ ಬಳಕೆ ಮಾಡಬೇಕು. ಅದಕ್ಕಾಗಿ ನುಗ್ಗೇಕಾಯಿಯನ್ನು ಹ್ಯಾಷ್​ಟ್ಯಾಗ್​ ಮೂಲಕ ಪ್ರಚಾರ ಮಾಡಿದರೆ ಇಂದಿನವರಿಗೆ ಅರ್ಥವಾಗುತ್ತದೆ. ಅದನ್ನೀಗ ನಾನು ಮಾಡಬೇಕಿದೆ ಎಂದು ಚಟಾಕಿ ಹಾರಿಸಿದರು.

    ಇದನ್ನೂ ಓದಿ: ಫಿಟ್​ ಇಂಡಿಯಾ ಮೂವ್​ಮೆಂಟ್​: ಪ್ರಧಾನಿ ಮೋದಿ ಜನತೆಗೆ ನೀಡಿದ್ದಾರೆ ಎರಡು ಮಂತ್ರ…

    ಇದೇ ವೇಳೆ ಎಡಗೈ ಭುಜವನ್ನು ಕಳೆದುಕೊಂಡರೂ ಇಡೀ ವಿಶ್ವವೇ ಬೆರಗುಗಣ್ಣುಗಳಿಂದ ನೋಡುವಂತೆ ಸಾಧನೆ ಮಾಡಿದ ಜಾವಲಿನ್​ ಥ್ರೋ ಆಟಗಾರ ದೇವೇಂದ್ರ ಜಾಝ್​ಹಾರಿಯಾ ಅವರ ಜತೆ ಸಂವಾದ ನಡೆಸಿ ಅವರನ್ನು ಶ್ಲಾಘಿಸಿದರು.

    ಅವರ ಈ ಸಾಧನೆಯ ಗುಟ್ಟೇನು ಎಂದು ಪ್ರಧಾನಿ ಕೇಳಿದಾಗ ದೇವೇಂದ್ರ ಅವರು, ‘ಎಡಗೈಯ ಭುಜವನ್ನು ಕಳೆದುಕೊಂಡಾಗ ಜೀವನವೇ ಬೇಡ ಎನ್ನಿಸಿತು. ಎಲ್ಲವನ್ನೂ ಬಿಟ್ಟುಬಿಡೋಣ ಎಂದುಕೊಂಡೆ. ಆದರೆ ಜೀವನದಲ್ಲಿ ಸಾಧ್ಯವಾಗದ್ದು ಯಾವುದೂ ಇಲ್ಲ ಎಂದು ಮನಸಿನಲ್ಲಿಯೇ ಅಂದುಕೊಂಡೆ. ಆದ್ದರಿಂದ ಮನಸ್ಸನ್ನು ದೃಢಮನಸ್ಸು ಮಾಡಿಕೊಂಡು ವ್ಯಾಯಾಮ ಮಾಡಿದೆ, ಫಿಟ್​ನೆಸ್​ ತಂತ್ರವನ್ನು ಕಲಿತೆ. ಇದರಿಂದಾಗಿ ಈ ಮಟ್ಟಿನ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

    ನಾನು ಕರೆ ಮಾಡಿದಾಗಲೆಲ್ಲಾ ನನ್ನಮ್ಮ ಕೇಳುವುದು ಇದೊಂದೇ… ಪ್ರಧಾನಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts