ಮಾಲ್​ ಒಳಗೆ ನುಗ್ಗಿ ಗುಂಡಿನ ದಾಳಿ- ಓರ್ವ ಗ್ರಾಹಕನ ಸಾವು, ಕೆಲವರಿಗೆ ಗಂಭೀರ ಗಾಯ

shootout
Published on

ಗ್ರ್ಯಾಂಡ್​ಚೌಟೆ (ಅಮೆರಿಕ): ಮಾಲ್​ ಒಳಗೆ ಬಂದೂಕು ಸಹಿತ ನುಗ್ಗಿದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಭಯಾನಕ ಘಟನೆ ಉತ್ತರ ವಿಸ್ಕಾನ್‌ಸಿನ್‌ ನಗರದ ಮಾಲ್‌ವೊಂದರಲ್ಲಿ ನಡೆದಿದೆ.

ಅಪರಿಚಿತ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ. ಮಾಲ್​ ಒಳಗೆ ಇರುವ ಗ್ರಾಹಕನೊಬ್ಬ ಮೃತಪಟ್ಟಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗ್ರ್ಯಾಂಡ್​ಚೌಟೆ ಎನ್ನುವ ಸ್ಥಳದಲ್ಲಿ ಫಾಕ್ಸ್‌ ರಿವರ್‌ ಎಂಬ ಮಾಲ್‌ ಇದೆ. ಈ ಮಾಲ್​ಗೆ ಸಂಜೆ ನುಗ್ಗಿದ ಬಂದೂಕುಧಾರಿ ಈ ಕೃತ್ಯ ಎಸಗಿದ್ದಾನೆ, ಗುಂಡು ಹಾರಿಸುತ್ತಿದ್ದಂತೆಯೇ ಮಾಲ್​ಗೆ ಬಂದಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ.

ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಿ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ' ಎಂದು ಪೊಲೀಸ್‌ ಅಧಿಕಾರಿ ಟ್ರಾವಿಸ್‌ ವಾಸ್ ಅವರು ತಿಳಿಸಿದರು.

ಇದು ವಿಸ್ಕಾನ್‌ಸಿನ್‌ನಲ್ಲಿ ನಡೆದ ಎರಡನೇ ಮಾಲ್‌ ದಾಳಿಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೂಡ ಮಾಲ್‌ವೊಂದರಲ್ಲಿ ದಾಳಿ ನಡೆಸಲಾಗಿತ್ತು. ಇದರಲ್ಲಿ 8 ಮಂದಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net