ಅಮೆರಿಕಕ್ಕೆ ಭಾರಿ ಶಾಕ್‌ ಕೊಟ್ಟ ಉತ್ತರ ಕೊರಿಯಾ: ಒಂದೇ ವರ್ಷದಲ್ಲಿ ಆರನೇ ಕ್ಷಿಪಣಿ ಪ್ರಯೋಗ

korea
Published on

ಪಯೋಂಗ್ಯಾಂಗ್: ಚೀನಾ ಮತ್ತು ರಷ್ಯಾವು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಯತ್ನವನ್ನು ವಿಫಲಗೊಳಿಸಿದ ಬಳಿಕ, ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿದೆ.

ಜಪಾನ್ ಸಮುದ್ರವನ್ನು ಗುರಿಯಾಗಿಸಿಕೊಂಡು ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸುವ ಮೂಲಕ ಅಮೆರಿಕಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ. ಈ ಬಗ್ಗೆ ಜಪಾನ್​ನ ಯೋನ್ಹಾಪ್ ನ್ಯೂಸ್ ಎಂಬ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯಲ್ಲಿ ವರದಿಯಾಗಿದೆ.

ಈ ಮೂಲಕ ಈ ವರ್ಷ ಪಯೋಂಗ್ಯಾಂಗ್ ನಡೆಸಿದ ಆರನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ಉತ್ತರ ಕೊರಿಯಾ ಈ ಹಿಂದೆ ಸಹ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿತ್ತು. ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಚಿಂತಿತವಾಗಿದ್ದು, ಕಳವಳವನ್ನು ವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net