ಎರಡನೇ ಡೋಸ್‌ ಪಡೆದರೂ ಕರೊನಾ ವೈರಸ್‌ಗೆ ಖ್ಯಾತ ಸರ್ಜನ್‌ ಬಲಿ!

doctor
Published on

ನವದೆಹಲಿ: ಈಗ ಎಲ್ಲೆಡೆ ಲಸಿಕೆ ಅಭಿಯಾನ ಶುರುವಾಗಿದೆ. ಕರೊನಾ ಲಸಿಕೆಯ ಎರಡು ಡೋಸ್‌ ಹಾಕಿಸಿಕೊಂಡರೆ ಸೋಂಕು ತಗಲುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಆದರೆ ಇದರ ನಡುವೆಯೇ ಆತಂಕದ ವರದಿಯೊಂದಿ ದೆಹಲಿಯಿಂದ ಬಂದಿದೆ. ಅದೇನೆಂದರೆ ಎರಡೂ ಲಸಿಕೆ ಪಡೆದ ಖ್ಯಾತ ಸರ್ಜನ್‌ ಒಬ್ಬರು ಕರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಕರೊನಾ ಸೋಂಕಿಗೆ ಒಳಗಾಗಿದ್ದ ಡಾ. ಅನಿಲ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಡಾ, ಅನಿಲ‌ ಅವರು, ದೆಹಲಿ ಸರೋಜ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಕಳೆದ ಮಾರ್ಚ್‌ನಲ್ಲಿ ಎರಡನೆಯ ಲಸಿಕೆ ಪಡೆದಿದ್ದರು. ಆದರೂ ಸೋಂಕು ಕಾಣಿಸಿಕೊಂಡಿದ್ದರಿಂದ ದಾಖಲು ಮಾಡಲಾಗಿತ್ತು. ಇವರು ಎರಡನೆಯ ಡೋಸ್‌ ಕೂಡ ಪಡೆದಿದ್ದರೂ ಮಹಾಮಾರಿ ಇವರನ್ನು ಬಲಿ ಪಡೆದುಕೊಂಡಿದೆ ಎಂದು ಸರೋಜ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪಿ.ಕೆ. ಭಾರದ್ವಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net