ಎಸ್​ಬಿಐ ಆನ್​ಲೈನ್​ ಸೇರಿದಂತೆ ಕೆಲ ಸೇವೆ ಸ್ಥಗಿತ- ಬ್ಯಾಂಕ್​ನಿಂದ ಮಾಹಿತಿ

SBI1
Published on

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಸ್ಟೇಟ್ ಆಫ್ ಇಂಡಿಯಾದ (ಎಸ್‌ಬಿಐ) ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಇಂದು ಸ್ಥಗಿತಗೊಂಡಿದೆ.

ಈ ಕುರಿತು ಟ್ವಿಟರ್​ನಲ್ಲಿ ಬ್ಯಾಂಕ್​ ಮಾಹಿತಿ ನೀಡಿದೆ. ತಾಂತ್ರಿಕ ಕಾರಣಗಳಿಂದ ಬ್ಯಾಂಕ್​ನ ಸೇವೆಗಳು ಸ್ಥಗಿತಗೊಂಡಿದ್ದು, ಇದಕ್ಕಾಗಿ ವಿಷಾದಿಸುತ್ತೇವೆ ಎಂದು ಬ್ಯಾಂಕ್​ ಹೇಳಿದೆ.

ಆದರೆ ಎಟಿಎಂ ಸೇವೆಗಳು ಮತ್ತು ಪಿಓಎಸ್ ಯಂತ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇದನ್ನು ಹೊರತುಪಡಿಸಿದರೆ ಆನ್​ಲೈನ್​ ಹಾಗೂ ಇತರ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ನಮ್ಮ ಗ್ರಾಹಕರು ನಮ್ಮೊಂದಿಗೆ ಇರಬೇಕೆಂದು ನಾವು ವಿನಂತಿಸುತ್ತೇವೆ. ಶೀಘ್ರದಲ್ಲೇ ಸಾಮಾನ್ಯ ಸೇವೆ ಪುನರಾರಂಭಗೊಳ್ಳುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net