More

    65ನೇ ವಯಸ್ಸಲ್ಲಿ ಮದುಮಗನಾದ ಹಿರಿಯ ವಕೀಲ ಸಾಳ್ವೆ- ಸೆಕೆಂಡ್​ ಇನ್ನಿಂಗ್ಸ್​ ಶುರು

    ಲಂಡನ್​: ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸುತ್ತಿರುವ, ಮಾಜಿ ಸಾಲಿಸಿಟರ್‌ ಜನರಲ್‌, ಹಿರಿಯ ವಕೀಲ ಹರೀಶ್​ ಸಾಳ್ವೆ ಅವರು ಇಂದು ಎರಡನೆಯ ಬಾರಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

    65 ವರ್ಷದ ಹರೀಶ್​ ಅವರು ಲಂಡನ್‌ ಮೂಲದ ಕಲಾವಿದೆ ಕ್ಯಾರೊಲೀನ್‌ ಬ್ರೊಸ್ಸಾರ್ಡ್‌ ಅವರನ್ನು ಲಂಡನ್​ನ ಚರ್ಚ್​ನಲ್ಲಿ ಇಂದು ಮದುವೆಯಾಗಿದ್ದಾರೆ.

    ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿರುವ ಸಾಳ್ವೆ ಅವರು, ತಮ್ಮ ದಾಂಪತ್ಯದ ಎರಡನೇ ಇನ್ನಿಂಗ್ಸ್​ ಶುರು ಮಾಡಿದ್ದಾರೆ. ಕರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಸರಳ ಸಮಾರಂಭದಲ್ಲಿ ಮದುವೆ ಏರ್ಪಟ್ಟಿದೆ.

    65ನೇ ವಯಸ್ಸಲ್ಲಿ ಮದುಮಗನಾದ ಹಿರಿಯ ವಕೀಲ ಸಾಳ್ವೆ- ಸೆಕೆಂಡ್​ ಇನ್ನಿಂಗ್ಸ್​ ಶುರುಸಾಳ್ವೆ ಅವರಿಗೆ ಇದಾಗಲೇ ಮೊದಲ ದಾಂಪತ್ಯದಿಂದ ಸಾಕ್ಷಿ (37) ಹಾಗೂ ಸಾನಿಯಾ (33) ಎಂಬ ಹೆಣ್ಣುಮಕ್ಕಳಿದ್ದು, ಅವರ ನೂತನ ಪತ್ನಿ ಕ್ಯಾರೊಲೀನ್​ ಅವರಿಗೆ 18 ವರ್ಷದ ಮಗಳಿದ್ದಾಳೆ.

    ಲಂಡನ್​ನಲ್ಲಿ ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ. ಬ್ರಿಟನ್​ಲ್ಲಿ ಜನಿಸಿರುವ ಕ್ಯಾರೋಲಿನ್ ಅವರಿಗೆ ತಮ್ಮಂತೆಯೇ ಕಲೆ, ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಅಭಿರುಚಿ ಇದೆ. ಇದೇ ಕಾರಣಕ್ಕೆ ಆಕೆಯನ್ನು ವರಿಸಿರುವುದಾಗಿ ಸಾಳ್ವೆ ಹೇಳಿದ್ದಾರೆ.

    ಇದನ್ನೂ ಓದಿ: ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!

    ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್​ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದಾರೆ. ಕುಲಭೂಷಣ್‌ ಜಾಧವ್‌ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇವರು ವಾದ ಮಂಡಿಸುತ್ತಿದ್ದಾರೆ.

    ಇಷ್ಟೇ ಅಲ್ಲದೇ ಹೈ ಪ್ರೊಫೈಲ್​ ಕೇಸ್​ಗಳಾದ ವೊಡಾಫೋನ್​, ಐಟಿಸಿ ಹೋಟೆಲ್ಸ್​, ಮುಖೇಶ್​ ಅಂಬಾನಿ, ರತನ್​ ಟಾಟಾ ಸೇರಿದಂತೆ ಸಹಸ್ರಾರು ಮಹತ್ವದ ಕೇಸ್​ಗಳಲ್ಲಿ ಇವರು ವಾದಿಸಿದ್ದಾರೆ. ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ.

    ಗಂಡ ವಿಚಾರಣೆಗೆ ಬರದೇ ಡಿವೋರ್ಸ್​ ಅರ್ಜಿ ವಜಾ ಆದ್ರೆ ಮತ್ತೆ ಹಾಕ್ಬೋದಾ?

    ಬಡ್ತಿಯಲ್ಲಿನ ಅಸಮಾಧಾನ? ಐಪಿಎಸ್​ ಅಧಿಕಾರಿ ದಿಢೀರ್​ ರಾಜೀನಾಮೆ

    ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ… ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts