More

    ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ… ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ…

    ಕೋಲಾರ: ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಭಾರಿ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಗಾಗಿ ಜಾತಿ-ಧರ್ಮವನ್ನು ಮೀರಿ ಅದೆಷ್ಟೋ ಮಂದಿ ಸೇವೆ ಸಲ್ಲಿಸಿರುವುದೂ ಅಷ್ಟೇ ನಿಜ.

    ಇದೀಗ ಅಂಥದ್ದೇ ಒಂದು ಸೇವೆಯನ್ನು ಮಾಡಲು ಹೊರಟಿದ್ದಾರೆ ಕೋಲಾರದ ನಿವೃತ್ತ ಶಿಕ್ಷಕ ಪಾಚಾಸಾಬ್​. ವಯಸ್ಸು ಬರೋಬ್ಬರಿ 96! ಶ್ರೀರಾಮನ ಅಪಾರ ಭಕ್ತರಾಗಿರುವ ಪಾಚಾಸಾಬ್​ ಅವರು ಶ್ರೀರಾಮ ಕೋಟಿ (ಕೋಟಿ ಬಾರಿ ಶ್ರೀರಾಮನ ಹೆಸರನ್ನು ಬರೆಯುವುದು) ಬರೆದಿದ್ದಾರೆ. ಪುಸ್ತಕ ಮಾತ್ರವಲ್ಲದೇ, ಎಕ್ಕದ ಎಲೆ, ಆಲದ ಎಲೆ, ಕಂಚಿನ ಎಲೆಯ ಮೇಲೂ ಶ್ರೀರಾಮ ಕೋಟಿ ಬರೆದಿರುವ ಅವರ ಆಸೆ ಇದನ್ನು ಹೇಗಾದರೂ ಮಾಡಿ ಅಯೋಧ್ಯೆಗೆ ಕಳುಹಿಸಬೇಕು ಎನ್ನುವುದು.

    22 ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ಅವರು, ಹಿಂದೊಮ್ಮೆ ಸ್ನೇಹಿತರ ಜತೆ ಭದ್ರಚಲಂ ದೇವಾಲಯಕ್ಕೆ ಹೋಗಿದ್ದರಂತೆ. ಅಲ್ಲಿ ಒಬ್ಬ ಸಾಧು ಶ್ರೀರಾಮ ಕೋಟಿ ಬರೆಯುತ್ತಿದ್ದನ್ನು ಕಂಡಿದ್ದಾರೆ. ಆಗ ಇದು ಏನೆಂದರೆ ವಿಚಾರಿಸಿದ್ದರಂತೆ. ಹೀಗೆ ಬರೆದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಸಾಧು ಹೇಳಿದ್ದಾರೆ.
    ಅಲ್ಲಿಂದಲೇ ತಮ್ಮ ಕಾರ್ಯ ಶುರು ಮಾಡಿರುವ ಪಾಚಾಸಾಬ್​ ಶ್ರೀರಾಮ ಕೋಟಿ ಬರೆಯುವುದನ್ನು ಪ್ರಾರಂಭಿಸಿದ್ದಾರೆ. ಅಕ್ಟೋಬರ್ 15ರಂದು 1 ಕೋಟಿ ಬರೆದು ಮುಗಿಸಿದ್ದಾರೆ.

    ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ... ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ...ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಪಾಚಾಸಾಬ್ ಜನಿಸಿದ್ದಾರೆ. 1923ರಲ್ಲಿ ಹುಟ್ಟಿರುವ ಇವರು, ಅಂದಿನ ಕಾಲದಲ್ಲಿಯೇ 8ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತಿದ್ದಾರೆ. ಅಂದಿನಿಂದಲೂ ಇವರಿಗೆ ಶ್ರೀರಾಮನ ಮೇಲೆ ಅಪಾರ ಭಕ್ತಿ. ಅದು ಎಷ್ಟರಮಟ್ಟಿಗೆ ಎಂದರೆ ನಿವೃತ್ತಿಯಾದ ಬಳಿಕ ಪಿಂಚಣಿಯಲ್ಲಿ ಶ್ರೀರಾಮಕೋಟಿ ಬರೆದುಕೊಂಡೇ ಜೀವನ ಸಾಗಿಸುತ್ತಿದ್ದಾರೆ.

    ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ... ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ...ಶ್ರೀರಾಮ ಕೋಟಿಯನ್ನು ಅಯೋಧ್ಯೆಗೆ ಯಾರಾದರೂ ಜನಪ್ರತಿನಿಧಿಗಳ ಕೈಯಲ್ಲಿ ಅರ್ಪಿಸುವ ಕನಸಿದೆ. ಮಾತ್ರವಲ್ಲದೇ ನನ್ನ ಊರಿನಲ್ಲಿ ರಾಮಾಂಜನೇಯ ದೇವಾಲಯ ನಿರ್ಮಾಣ ಮಾಡುವ ಕನಸು ಇದೆ ಎನ್ನುವ ಪಾಚಾಸಾಬ್​ ಅವರಿಗೆ ರಾಮಕೋಟಿಯಿಂದ ನನಗೆ ಜೀವನದಲ್ಲಿ ನೆಮ್ಮದಿ ಸಿಕ್ಕಿದೆಯಂತೆ, ಈ ರಾಮ ಕೋಟಿ ಬರೆಯುವುದರಿಂದ ನಾನು ಹೇಳಿದ ಮಾತು ನಡೆಯುತ್ತಿದೆ ಎಂದೂ ಹೇಳುತ್ತಾರೆ.

    ಗೋವಾ ಲೋಕಾಸೇವಾದಿಂದ ನಡೆದ ಗೋವಾ ಸತ್ಯಾಗ್ರಹದಲ್ಲಿ ಕೃಷ್ಣಯ್ಯಶೆಟ್ಟಿರವರ ನೇತೃತ್ವದಲ್ಲಿ ಸ್ವಾತಂತ್ರಕ್ಕೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಅದರ ಸವಿ-ನೆನಪುಗಳನ್ನು ಇಂದಿಗೂ ಹಂಚಿಕೊಳ್ಳುತ್ತಾರೆ.

    ನನ್ನ ಸೇವೆ ಮಾಡಿ ಸದ್ಗತಿ ಪಡೆಯಿರಿ ಎಂದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ‘ಗುರು’ಗೆ 120 ವರ್ಷ ಜೈಲು!

    ಮಾಸ್ಕ್​ ಏಕೆ ಧರಿಸಿಲ್ಲ ಎಂದು ಕೇಳಿದವನನ್ನು 27 ಬಾರಿ ಚಾಕುವಿನಿಂದ ತಿವಿದ ಅಕ್ಕ-ತಂಗಿ!

    ಮನೆಯಲ್ಲಿರೋ ವಸ್ತು ಮಾರಿ ಗೇಮ್​ ಆಡ್ತಾನೆ, ನೀವೇ ಶಿಕ್ಷೆ ಕೊಡಿ… ಮಗನ ವಿರುದ್ಧ ಪೊಲೀಸ್​ ಕಂಪ್ಲೇಂಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts