More

    ರಿಷಿಕೇಶದಲ್ಲಿ ನಗ್ನವಾಗಿ ನಿಂತು ವಿಡಿಯೋ ಮಾಡಿಕೊಂಡಳು: ಕಾರಣ ಕೇಳಿ ಪೊಲೀಸರು ಹುಬ್ಬೇರಿಸಿದರು!

    ರಿಷಿಕೇಶ (ಉತ್ತರಾಖಂಡ): ರಿಷಿಕೇಶದ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಮೇಲೆ ನಗ್ನವಾಗಿ ನಿಂತು ವಿಡಿಯೋ ಮಾಡಿಕೊಳ್ಳುತ್ತಿದ್ದ ಫ್ರೆಂಚ್‌ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತೂಗು ಸೇತುವೆಯಾದ ಲಕ್ಷ್ಮಣ ಝುಲಾದ ಮೇಲೆ ನಿಂತು 27 ವರ್ಷದ ಮೇರಿ ಹೆಲೆನ್ ಎಂಬಾಕೆ ನಗ್ನವಾಗಿ ನಿಂತು ತನ್ನನ್ನೂ ಸೇರಿದಂತೆ ಸುತ್ತಲಿನ ದೃಶ್ಯಗಳ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಳು.

    ಇಲ್ಲಿಗೆ ಬಂದಿದ್ದ ಭಕ್ತಾದಿಗಳು ಈ ಮಹಿಳೆಯನ್ನು ವಿಚಿತ್ರವಾಗಿ ಗಮನಿಸುತ್ತಿದ್ದರೂ, ಕೆಲವರು ಅಲ್ಲಿಯೇ ನಿಂತು ಆಕೆಯನ್ನು ನೋಡುತ್ತಿದ್ದರೂ ಮೈಮೇಲೆ ಪ್ರಜ್ಞೆ ಇಲ್ಲದವರ ರೀತಿ ತನ್ನ ಕಾರ್ಯವನ್ನು ಮುಂದುವರೆಸಿದ್ದಳು ಈಕೆ.

    ಇಷ್ಟೇ ಅಲ್ಲದೇ ಈ ವಿಡಿಯೋದ ಫುಟೇಜ್‌ಗಳನ್ನು ಪೋಸ್ಟ್‌ ಮಾಡಿದ್ದಳು. ಇದನ್ನು ನೋಡಿದ ಕೆಲವರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ನಂತರ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ಅಮಿತ್‌ ಷಾ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ- ಓಣಂ ಶುಭಾಶಯ

    ತನ್ನನ್ನು ಬಂಧಿಸಿರುವುದಕ್ಕೆ ತೀವ್ರವಾಗಿ ಅಚ್ಚರಿ ವ್ಯಕ್ತಪಡಿಸಿರುವ ಯುವತಿ, ತಾನು ಸಂಪೂರ್ಣವಾಗಿ ನಗ್ನವಾಗಿರಲಿಲ್ಲ, ಕೆಲವೇ ಬಟ್ಟೆಗಳನ್ನು ಧರಿಸಿದ್ದೆ. ಅಷ್ಟಕ್ಕೂ ಹೀಗೆ ನಗ್ನವಾಗಿ ನಿಂತಿರುವ ಹಿಂದೆ ಯಾವುದೇ ಕೆಟ್ಟ ಆಲೋಚನೆಗಳು ಇರಲಿಲ್ಲ. ಬದಲಿಗೆ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾಳೆ.

    ಯುವತಿಯ ಹೇಳಿಕೆ ಕೇಳಿ ಪೊಲೀಸರು ತಲೆ ಚಚ್ಚಿಕೊಂಡಿದ್ದಾರೆ. 1960ರ ದಶಕದಲ್ಲಿ ಕಟ್ಟಲಾಗಿರುವ ಲಕ್ಷ್ಮಣ ಝೂಲಾ, ಅಲ್ಲಿಯ ಗಂಗಾನದಿ ಹಾಗೂ ರಿಷಿಕೇಶಕ್ಕೆ ಇರುವ ಧಾರ್ಮಿಕ ಸಂಬಂಧಗಳ ಬಗ್ಗೆ ಯುವತಿಗೆ ಪೊಲೀಸರು ವಿವರಿಸಿದರು. ನಂತರ ತಾನು ತಪ್ಪು ಜಾಗಕ್ಕೆ ಹೋಗಿ ಲೈಂಗಿಕ ಕಿರುಕುಳದ ಜಾಗೃತಿ ಮೂಡಿಸಿದ್ದು, ತನ್ನನ್ನು ಕ್ಷಮಿಸಿ ಎಂದು ಕೋರಿದ್ದಾಳೆ.

    ನಂತರ ತಿಳಿದುಬಂದದ್ದೇನೆಂದರೆ, ಈಕೆ ಆನ್‌ಲೈನ್‌ ಮೂಲಕ ಮಣಿಹಾರಗಳನ್ನು ಮಾರುವ ವ್ಯವಹಾರ ನಡೆಸುತ್ತಿದ್ದಾಳೆ. ತನ್ನ ಈ ಉತ್ಪನ್ನ ಹೆಚ್ಚಿಗೆ ಮಾರಾಟ ಆಗಬೇಕು ಎನ್ನುವ ಉದ್ದೇಶದಿಂದ ನಗ್ನವಾಗಿ ನಿಂತು ಫೋಟೊ, ವಿಡಿಯೋ ಮಾಡುತ್ತಾಳೆ. ನಂತರ ನಗ್ನಾವಸ್ಥೆಯಲ್ಲಿ ಇದ್ದುಕೊಂಡೇ ಮಣಿಹಾರವನ್ನಷ್ಟೇ ಧರಿಸಿ, ಫೋಟೋ ತೆಗೆದು ಆನ್‌ಲೈನ್‌ನಲ್ಲಿ ತನ್ನ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾಳೆ ಎಂದು. ಜತೆಗೆ ವಿಡಿಯೋ ಮಾಡಿ ಅದನ್ನು ಹರಿಬಿಡುತ್ತಿದ್ದಾಳೆ.

    ಅದಕ್ಕಾಗಿ ಈಕೆ ಒಳ್ಳೊಳ್ಳೆ ಜಾಗವನ್ನು ಆಯ್ದುಕೊಳ್ಳುತ್ತಿದ್ದಾಳೆ, ಇದೀಗ ರಿಷಿಕೇಶಕ್ಕೆ ಬಂದು ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ಈ ಸಂಬಂಧ ಆಕೆಯನ್ನು ಬಂಧಿಸಿದ್ದಾರೆ, ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಯುವತಿ ಕ್ಷಮೆ ಕೋರಿದ್ದಾಳೆ. ಆಕೆಯ ಮೊಬೈಲ್‌ ಫೋನ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.

    ಆಂಟಿನೇ ಬೇಕೆಂದು ಐದು ಮದುವೆಯಾದವಳ 6ನೇ ಗಂಡನಾಗಿ ಹೋದ ಚಿಕ್ಕಮಗಳೂರು ಯುವಕ!

    ಸಣ್ಣಗಾಗಬೇಕು, ದಪ್ಪಗಾಗಬೇಕು, ಸಿಕ್ಸ್‌ಪ್ಯಾಕ್ ಬೇಕು ಎಂದೆಲ್ಲಾ ಜಿಮ್‌ಗೆ‌ ಹೋಗುತ್ತಿರುವಿರಾ?

    ಬಂಡೆಯಾಕಾರದ ಅಪರೂಪದ ಜೀವಿ ನೋಡಲು ಮುಗಿಬಿದ್ದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts