More

    ಬಂಡೆಯಾಕಾರದ ಅಪರೂಪದ ಜೀವಿ ನೋಡಲು ಮುಗಿಬಿದ್ದ ಜನ

    ರಾಮನಾಥಪುರ (ತಮಿಳುನಾಡು): ತಮಿಳುನಾಡಿನ ರಾಮನಾಥಪುರದ ಬೀಚ್‌ನಲ್ಲಿ ಬೃಹದಾಕಾರ ಬಂಡೆಯೊಂದು ಬಂದು ಬಿದ್ದಿರುವುದನ್ನು ಕಂಡು ಜನರು ದಂಗಾಗಿ ಹೋದರು.

    ಆದರೆ ಹತ್ತಿರ ಹೋಗಿ ನೋಡಿದಾಗ ಅದು ಬಂಡೆಯಲ್ಲ, ಬದಲಿಗೆ ಬೃಹತ್‌ ತಿಮಿಂಗಲ ಎಂದು ತಿಳಿದುಬಂದಿದೆ. ಆದರೆ ಇದು ಮೃತಪಟ್ಟಿರುವುದು ತಿಳಿದುಬಂದಿದೆ.

    ಬೃಹತ್‌ ಬಂಡೆಯಾಕಾರದ ಈ ತಿಮಿಂಗಲು ವಳಿನೊಕ್ಕಮ್‌ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಹಿಂದೆಂದೂ ನೋಡಿರದ ಈ ದೊಡ್ಡ ತಿಮಿಂಗಲವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಇಂಥ ತಿಮಿಂಗಲಗಳ ತಳಿಗಳು ಕೆಲವು ಪ್ರದೇಶಗಳಲ್ಲಿ ಕಾಣಿಸುತ್ತವೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಇವು ತೀರಾ ಅಪರೂಪ ಎನ್ನಲಾಗಿದೆ.

    1972ರ ವನ್ಯಜೀನಿ ಕಾಯ್ದೆ ಪ್ರಕಾರ ಇಂಥ ತಿಮಿಂಗಲು ಅಥವಾ ಶಾರ್ಕ್‌ಗಳನ್ನು ಹಿಡಿಯುವುದಾಗಲಿ ಅಥವಾ ಕೊಲ್ಲುವುದಾಗಲಿ ಅಪರಾಧ ಎಂದಿರುವ ಅರಣ್ಯಾಧಿಕಾರಿಗಳು, ಇದರ ಸಾವಿನ ಹಿಂದಿನ ರಹಸ್ಯವನ್ನು ಹುಡುಕುತ್ತಿದ್ದಾರೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟಿತು ರೋ ರೋ ರೈಲು: ಮುಖ್ಯಮಂತ್ರಿ ಚಾಲನೆ

    ಈ ಭಾಗದಲ್ಲಿ ಇಷ್ಟು ಬೃಹತ್‌ ತಿಮಿಂಗಲಗಳು ಕಾಣಿಸುವುದಿಲ್ಲ. ಆದರೆ ಕಳೆದ ಜೂನ್‌ನಲ್ಲಿ ಕೂಡ ಇದೇ ರೀತಿಯ ತಿಮಿಂಗಲ ಸಮುದ್ರದೊಳಗಿನಿಂದ ಬಂದು ಬಿದ್ದಿತ್ತು. ಅದನ್ನು ಅಳತೆ ಮಾಡಿದಾಗ 18 ಅಡಿ ಇತ್ತು. ಅದರ ಸಾವಿನ ರಹಸ್ಯ ಭೇದಿಸುವ ಮೊದಲೇ ಇದೀಗ ಅದೇ ಗಾತ್ರದ ಇನ್ನೊಂದು ತಿಮಿಂಗಲ ಬಂದು ಬಿದ್ದಿದೆ ಎಂದಿದ್ದಾರೆ.

    ತಿಮಿಂಗಲವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಿಖರ ಕಾರಣವನ್ನು ಹುಡುಕಲಾಗುತ್ತಿದೆ.

    ಸಣ್ಣಗಾಗಬೇಕು, ದಪ್ಪಗಾಗಬೇಕು, ಸಿಕ್ಸ್‌ಪ್ಯಾಕ್ ಬೇಕು ಎಂದೆಲ್ಲಾ ಜಿಮ್‌ಗೆ‌ ಹೋಗುತ್ತಿರುವಿರಾ?

    ಆಂಟಿನೇ ಬೇಕೆಂದು ಐದು ಮದುವೆಯಾದವಳ 6ನೇ ಗಂಡನಾಗಿ ಹೋದ ಚಿಕ್ಕಮಗಳೂರು ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts