More

    ಮೋದಿ ಉದ್ಘಾಟಿಸಲಿರುವ ಭಾರತದ ಅತ್ಯಂತ ಉದ್ದದ ಸಮುದ್ರ ಸೇತುವೆ ವೈಶಿಷ್ಟ್ಯಗಳೇನು?

    ನವದೆಹಲಿ: ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. 21.8 ಕಿಲೋಮೀಟರ್ ಉದ್ದದ ಸಮುದ್ರ ಸೇತುವೆಯನ್ನು ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನ್ಹಾವಾ ಶೇವಾ ಸೇತು ಎಂದು ಹೆಸರಿಸಲಾಗಿದೆ. ಇದನ್ನು 17,840 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ.

    ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ (ಸೇವಾರಿ ಮತ್ತು ನ್ಹಾವಾ ಶೇವಾ ನಡುವೆ) ಸಂಪರ್ಕಿಸುವ ಸೇತುವೆಯು ಪ್ರಸ್ತುತ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 15-20 ನಿಮಿಷಗಳಿಗೆ ತಗ್ಗಿಸುತ್ತದೆ.

    ಪ್ರಧಾನಿ ಮೋದಿ ಶುಕ್ರವಾರ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ 30,500 ಕೋಟಿ ರೂ.ಗಳ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿಯವರು ಈಸ್ಟರ್ನ್ ಫ್ರೀವೇ ಆರೆಂಜ್ ಗೇಟ್ ಅನ್ನು ಸಂಪರ್ಕಿಸುವ ಭೂಗತ ರಸ್ತೆ ಸುರಂಗಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ನಮೋ ಮಹಿಳಾ ಸಶಕ್ತೀಕರಣ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.

    ಈ ಸೇತುವೆಗೆ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ಡಿಸೆಂಬರ್ 2016 ನಡೆಸಿದ್ದರು.

    ಇದು ಸರಿಸುಮಾರು 21.8 ಕಿಮೀ ಉದ್ದವಿದೆ. ಸಮುದ್ರದ ಮೇಲೆ ಅಂದಾಜು 16.5 ಕಿಮೀ ಮತ್ತು ಭೂಮಿಯ ಒಳಗಡೆ ಅಂದಾಜು 5.5 ಕಿಮೀ ಇರುವ ಆರು ಪಥದ ಮಾರ್ಗವನ್ನು ಒಳಗೊಂಡಿದೆ.

    ಈ ಸೇತುವೆಯು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಎರಡಕ್ಕೂ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.

    MTHL ನಲ್ಲಿ ನಾಲ್ಕು ಚಕ್ರಗಳ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿಲೋಮೀಟರ್ ಆಗಿರುತ್ತದೆ ಎಂದು ಮುಂಬೈ ಪೊಲೀಸರು ಪ್ರಕಟಿಸಿದ್ದಾರೆ. ಸಮುದ್ರ ಸೇತುವೆ ಮೇಲೆ ಮೋಟಾರು ಬೈಕ್, ಆಟೋರಿಕ್ಷಾ ಮತ್ತು ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅನುಮತಿ ಇರುವುದಿಲ್ಲ.

    ಕಾರುಗಳು, ಟ್ಯಾಕ್ಸಿಗಳು, ಲಘು ಮೋಟಾರು ವಾಹನಗಳು, ಮಿನಿ ಬಸ್‌ಗಳು ಮತ್ತು ಎರಡು ಆಕ್ಸಲ್ ಬಸ್‌ಗಳು ಗಂಟೆಗೆ 100 ಕಿಲೋಮೀಟರ್ ವೇಗದ ಮಿತಿಯನ್ನು ಹೊಂದಿರುತ್ತವೆ.

    ಎಂಟಿಎಚ್​ಎಲ್​ನಲ್ಲಿ ಪ್ರಯಾಣಿಕ ಕಾರಿಗೆ 250 ರೂ.ಗಳನ್ನು ಏಕಮುಖ ಸುಂಕವಾಗಿ ವಿಧಿಸಲಾಗುತ್ತದೆ. ರಿಟರ್ನ್ ಜರ್ನಿಗಳಿಗೆ, ಹಾಗೆಯೇ ದೈನಂದಿನ ಮತ್ತು ಮೇಲಿಂದ ಮೇಲೆ ಸಾಗುವ ಪ್ರಯಾಣಿಕರಿಗೆ ಶುಲ್ಕಗಳು ಭಿನ್ನವಾಗಿರುತ್ತವೆ.

    ಚುನಾವಣೆ ಚಾಣಕ್ಯ ಸುನೀಲ್​ ಕನುಗೋಲು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts