

ಉತ್ತರ: ನಿಮ್ಮ ಅಜ್ಜನವರು ಬಿಟ್ಟು ಹೋಗಿರುವ ಎಲ್ಲ ಆಸ್ತಿಗಳಲ್ಲಿ , ನಿಮ್ಮ ಅಜ್ಜನವರ ಎಲ್ಲ ಮಕ್ಕಳಿಗೂ ಮತ್ತು ಅಜ್ಜಿ ಬದುಕಿದ್ದರೆ ಅವರಿಗೂ ಸಮ ಪಾಲು ಹಕ್ಕು ಇರುತ್ತದೆ. ಕೇವಲ ಖಾತೆ ಮಾಡಲು ಒಪ್ಪಿಗೆ ಕೊಟ್ಟು ಆ ಮೂಲಕ ರೆವೆನ್ಯೂ ದಾಖಲೆಗಳನ್ನು ನಿಮ್ಮ ತಂದೆಯ ಹೆಸರಿಗೆ ವರ್ಗಾವಣೆ ಮಾಡಿಸಿದ್ದ ಮಾತ್ರಕ್ಕೆ, ನಿಮ್ಮ ತಂದೆಯವರು ಮಾತ್ರ ಎಲ್ಲ ಸ್ವತ್ತಿನ ಮಾಲೀಕರು ಆಗುವುದಿಲ್ಲ.
ನಿಮ್ಮ ಅಜ್ಜನವರು ನೋಂದಾಯಿತ ಪತ್ರದ ಮೂಲಕ ದಾನ ಅಥವಾ ಕ್ರಯ ಮಾಡಿದ್ದರೆ, ಅಥವಾ ನಿಮ್ಮ ತಂದೆಗೆ ವಿಲ್ ಮಾಡಿದ್ದರೆ ಆಗ ನಿಮ್ಮ ತಂದೆ ಮಾತ್ರ ಇಡೀ ಸ್ವತ್ತಿನ ಮಾಲೀಕರು ಆಗುತ್ತಿದ್ದರು. ಈಗ ಎಲ್ಲರಿಗೂ ಸಮಪಾಲು ಇರುತ್ತದೆ. ಹೀಗಾಗಿ ನಿಮ್ಮ ತಂದೆಯಿಂದ ನೀವು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡರೂ ನಿಮ್ಮ ಅಜ್ಜನ ಇತರ ವಾರಸುದಾರರಿಗೆ ಅವರ ಹಕ್ಕು ಇದ್ದೇ ಇರುತ್ತದೆ.