ಬೇಡ ಬೇಡವೆಂದರೂ ಲೈಂಗಿಕ ಕ್ರಿಯೆಗೆ ಮುಂದಾದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ! ಆಸ್ಪತ್ರೆಗೆ ಪತಿಯ ದೌಡು

couple
ಸಾಂದರ್ಭಿಕ ಚಿತ್ರ
Published on

ಜತಾರಾ (ಮಧ್ಯಪ್ರದೇಶ): ತನಗೆ ಇಷ್ಟವಿಲ್ಲದಿದ್ದರೂ ಗಂಡ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಬಂದ ಕಾರಣ, ಸಿಟ್ಟುಗೊಂಡ ಪತ್ನಿ ಆತನ ಮರ್ಮಾಂಗವನ್ನೇ ಕತ್ತರಿಸಿರುವ ಭಯಾನಕ ಘಟನೆ ಮಧ್ಯಪ್ರದೇಶದ ಜತಾರಾದಲ್ಲಿ ನಡೆದಿದೆ.

ಟಿಕಮ್​​ಗಢ ಜಿಲ್ಲೆಯಿಂದ 40 ಕಿಮೀ​ ದೂರದ ಜತಾರಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ಕ್ರಿಯೆ ನಡೆಸುವುದು ಬೇಡ ಎಂದರೂ ಕೇಳದ ಪತಿ, ಇದಕ್ಕೆ ಮುಂದಾದಾಗ ಮಹಿಳೆ ಕೋಪದಿಂದ ಈ ರೀತಿ ಮಾಡಿದ್ದು, 26 ವರ್ಷದ ಪತಿ ಮರ್ಮಾಂಗ ಕಳೆದುಕೊಂಡಿದ್ದು, 24 ವರ್ಷದ ಪತ್ನಿ ವಿರುದ್ಧ ಪೊಲೀಸರಲ್ಲಿ ಗಂಡ ದೂರು ದಾಖಲು ಮಾಡಿದ್ದಾನೆ.

2019ರಲ್ಲಿ ಇಬ್ಬರು ಮದುವೆಯಾಗಿದೆ. ಆದರೆ ಆರಂಭದಿಂದಲೂ ದಂಪತಿ ನಡುವೆ ಜಗಳವಾಗುತ್ತಿತ್ತು. ಆದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೂ ಪತಿ ಲೈಂಗಿಕ ಕ್ರಿಯೆಗೆ ಬಲವಂತ ಮಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಪತ್ನಿ ಹರಿತವಾದ ಆಯುಧದರಿಂದ ಮರ್ಮಾಂಗ ಕತ್ತರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರ್ಮಾಂಗ ಹಿಡಿದು ಬಂದ ಪತಿ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಮುಂದುವರೆದಿದೆ. ಪತ್ನಿ ವಿರುದ್ಧ ಐಪಿಸಿ ಸೆಕ್ಷನ್​​ 324ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net