ಸುಪ್ರೀಂ​ ಅಂಗಳದಲ್ಲಿ ಮಹಾರಾಷ್ಟ್ರ ಬಿಕ್ಕಟ್ಟು: ಬಂಡಾಯ ನಾಯಕ ಶಿಂಧೆ ಅರ್ಜಿ- ಇಂದು ವಿಚಾರಣೆ ಸಾಧ್ಯತೆ

shindhe
Published on

ನವದೆಹಲಿ: ಮಹಾರಾಷ್ಟ್ರ ಬಿಕ್ಕಟ್ಟು ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್​ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನಾ ಮುಖಂಡ ಏಕನಾಥ ಶಿಂದೆ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದಾರೆ. 16 ಶಾಸಕರಿಗೆ ಉಪಸಭಾಪತಿ ಹೊರಡಿಸಿದ್ದ ಅನರ್ಹತೆಯ ನೋಟಿಸ್​ ಅನ್ನು ಶಿಂಧೆ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ತಮ್ಮ ಬದಲಿಗೆ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನು ಬೇರೆಯವನ್ನು ನೇಮಿಸಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ ಶಿವಸೇನೆಯ 16 ಜನ ಶಾಸಕರಿಗೆ ಮಹಾರಾಷ್ಟ್ರ ಉಪ ಸ್ಪೀಕರ್​ ನರಹರಿ ಜಿರ್ವಾಲ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದರು. ಜೂನ್​ 27ರೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ಇದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಸುಪ್ರೀಂಕೋರ್ಟ್​ಗೆ ಸದ್ಯ ರಜೆ ಇದ್ದು, ರಜಾಕಾಲದ ಪೀಠದ ಮುಂದೆ ಅರ್ಜಿಯ ವಿಚಾರಣೆ ಇಂದು ಬರುವ ಸಾಧ್ಯತೆ ಇದೆ.

ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ನಲುಗುವಂತೆ ಮಾಡಿದ ಶಿಂಧೆ ಸಾಕಷ್ಟು ಸಂಖ್ಯೆಯ ನಿಷ್ಠಾವಂತ ಶಾಸಕರೊಂದಿಗೆ ಮುಂಬೈಯನ್ನು ತೊರೆದ ಒಂದು ದಿನದ ನಂತರ ಚೌಧರಿ ಅವರನ್ನು ಆ ಸ್ಥಾನಕ್ಕೆ ಅಜಯ್ ಚೌದರಿಯನ್ನು ಶಿವಸೇನೆ ಹೆಸರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net