ನನಗೆ ಮೊದ್ಲೇ ಮದ್ವೆಯಾಗಿದೆ, ಆಲಿಯಾ 2ನೆಯವಳು: ಮೊದಲ ಪತ್ನಿಯ ಸ್ಫೋಟಕ ವಿಷಯ ತಿಳಿಸಿದ ರಣಬೀರ್​ ಕಪೂರ್​!

alia
Published on

ಮುಂಬೈ: ಬಾಲಿವುಡ್​ನ ಕ್ಯೂಟ್​ ಜೋಡಿಗಳೆಂದೇ ಪ್ರಖ್ಯಾತರಾದವರು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್​. ಕಳೆದ ಏಪ್ರಿಲ್​ 14ರಂದು ಈ ಜೋಡಿ ಮದುವೆಯಾಗಿದ್ದು, ಸದ್ಯ ಭಾರಿ ಸುದ್ದಿಯಲ್ಲಿದೆ. ಇವರ ಜೋಡಿ ಬಹಳ ಚರ್ಚೆಯಲ್ಲಿ ಇರುವಾಗಲೇ ರಣಬೀರ್​ ಕಪೂರ್​ ಸ್ಫೋಟಕ ಹೇಳಿಕೆ ನೀಡಿದ್ದು, ಅಭಿಮಾನಿಗಳನ್ನು ಅದರಲ್ಲಿಯೂ ಆಲಿಯಾ ಭಟ್​ ಅಭಿಮಾನಿಗಳನ್ನು ಭಾರಿ ಚಿಂತೆಗೀಡುಮಾಡಿದೆ.

ತಮ್ಮ ಬಹುನಿರೀಕ್ಷಿತ ‘ಶಂಶೇರಾ‘ ಚಿತ್ರದ ಪ್ರಮೋಷನ್​ನಲ್ಲಿ ಬಿಜಿಯಾಗಿರುವ ರಣಬೀರ್​ ಕಪೂರ್​ ಅವರು, ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ನನ್ನ ಮೊದಲ ಪತ್ನಿ ಆಲಿಯಾ ಅಲ್ಲ, ಇದಾಗಲೇ ನನಗೆ ಮದುವೆಯಾಗಿದೆ ಎಂದು!

ಚಿತ್ರನಟರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ದೊಡ್ಡ ವಿಷಯವೇನಲ್ಲ. ಆದರೆ ರಣಬೀರ್​ ಅವರ ಬಾಯಲ್ಲಿ ಇಂಥ ಮಾತನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ಅವರು ತಮ್ಮ ಮೊದಲ ಪತ್ನಿಯ ವಿಷಯ ಹೇಳಿದ್ದು, ಅವರ ಅಭಿಮಾನಿಗಳು ನಿರಾಳವಾಗುವಂತೆ ಮಾಡಿದ್ದಾರೆ.

ಅದೇನೆಂದರೆ ರಣಬೀರ್​ ಕಪೂರ್​ ಹೇಳಿದ್ದೇನೆಂದರೆ, ‘ಮುಂಬೈನಲ್ಲಿದ್ದಾಗ ನಡೆದ ಘಟನೆ ಇದು. ನನ್ನ ಅಭಿಮಾನಿಯೊಬ್ಬಳು ನನ್ನ ಮನೆಯ ಗೇಟ್​ಗೆ ಬಂದು ಭಾರಿ ರಂಪಾಟ ಮಾಡಿದ್ದಳು. ನಾನು ಮದುವೆಯಾಗುವುದಾದರೆ ರಣಬೀರ್​ ಕಪೂರ್​ ಅವರನ್ನೇ ಆಗುವುದು ಎಂದು ಹಠ ಮಾಡಿದ್ದಳಂತೆ. ಈ ವಿಷಯ ನನಗೆ ಗೊತ್ತಿರಲಿಲ್ಲ. ಸೆಕ್ಯೂರಿಟಿ ಬಂದು ಹೇಳಿದಾಗಲೇ ತಿಳಿದದ್ದು, ಸೆಕ್ಯುರಿಟಿ ಆಕೆಯನ್ನು ಹೋಗಲು ಹೇಳಿದಾಗ, ಅವಳು ಬಿಡದೇ ಗೇಟ್​ಗೇ ಹೂವು, ಹಾರ ಎಲ್ಲಾ ಹಾಕಿ ನನ್ನ ಗಂಡ ರಣಬೀರ್​ ಕಪೂರ್​, ನನ್ನ ಮದುವೆ ಅವರ ಜತೆಯೇ ಆಗಿದೆ ಎಂದು ಹೇಳಿ ಹೋದಳಂತೆ. ಗೇಟ್​ಗೆ ಹೂವು, ಹಾರಗಳು ಸಹ ಇದ್ದದ್ದನ್ನು ನಾನು ನೋಡಿದೆ. ಆದ ಕಾರಣ, ಅವಳೇ ನನ್ನ ಮೊದಲ ಹೆಂಡತಿ. ಅದರೆ ಈವರೆಗೂ ಅವಳು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಆಕೆಯನ್ನು ನೋಡಲು ಕಾತರನಾಗಿದ್ದೇನೆ‘ ಎಂದು ಹಾಸ್ಯ ಮಾಡಿದರು!

ಒಟ್ಟಿನಲ್ಲಿ ಅವರ ಮಾತು ಸಂಪೂರ್ಣ ಕೇಳಿಸಿಕೊಂಡವರು ನಕ್ಕರೆ, ಇದು ಎರಡನೆಯ ಮದುವೆ ಎಂದಷ್ಟೇ ಕೇಳಿಸಿಕೊಂಡವರು ಮಾತ್ರ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net