VIDEO: ಪತಿಯಿಂದಲೇ ಕೊಲೆಯಾದ ಖ್ಯಾತ ಬ್ಲಾಗರ್: ಕೈಕಟ್ಟಿ ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆ!

ritika
Published on

ಆಗ್ರಾ (ಉತ್ತರ ಪ್ರದೇಶ): ಪತ್ನಿ ತನ್ನಿಂದ ಬೇರ್ಪಟ್ಟು ಬೇರೊಬ್ಬನ ಜತೆ ಇರುವುದನ್ನು ಸಹಿಸಲಾಗದ ಪತಿಯೊಬ್ಬ ಆಕೆಯ ಕೈ ಕಟ್ಟಿ ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಖ್ಯಾಗ ಬ್ಲಾಗರ್​ ರಿತಿಕಾ ಸಿಂಗ್ (30) ಕೊಲೆಯಾದ ಮಹಿಳೆ. ಇವರು ಆಹಾರಕ್ಕೆ ಸಂಬಂಧಿಸಿದ ಬ್ಲಾಗ್​ ಮಾಡಿದ್ದು, ಅದರಲ್ಲಿ ತುಂಬಾ ಖ್ಯಾತರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರಿತಿಕಾ ಮತ್ತು ಆಕಾಶ್​ ಗೌತಮ್​ 2014ರಲ್ಲಿ ಮದುವೆಯಾಗಿದ್ದರು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2018ರಲ್ಲಿ ಬೇರೆ ಬೇರೆಯಾಗಿದ್ದರು. ಬಳಿಕ ರಿತಿಕಾ ಅವರಿಗೆ ಫೇಸ್‍ಬುಕ್‍ನಲ್ಲಿ ವಿಪುಲ್ ಅಗರ್​ವಾಲ್​ ಎಂಬುವವರ ಪರಿಚಯವಾಗಿತ್ತು. ಇಬ್ಬರೂ ತಾಜ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮೇವಾಟಿಯ ಅಪಾರ್ಟ್‍ಮೆಂಟ್‍ನಲ್ಲಿ ಜತೆಯಲ್ಲಿ ಇದ್ದರು.

Thrown off 4th floor with hands tied, Ghaziabad blogger dies; estranged  husband, two others arrested | Agra News - Times of India

ಇದು ಪತಿ ಆಕಾಶ್​ಗೆ ತಿಳಿದು ಕೆಂಡಾಮಮಡಲವಾಗಿದ್ದಾನೆ. ಆತ ತನ್ನ ಸ್ನೇಹಿತೆ, ಸ್ನೇಹಿತರನ್ನು ಕರೆದುಕೊಂಡು ಪತ್ನಿ ನೆಲೆಸಿದ್ದ ಅಪಾರ್ಟ್‍ಮೆಂಟ್‍ಗೆ ಹೋಗಿ, ಇಬ್ಬರ ಜತೆ ಜಗಳವಾಡಿ ಹಲ್ಲೆ ಮಾಡಿದ್ದಾರೆ. ನಂತರ ವಿಪುಲ್​ ಮತ್ತು ರಿತಿಕಾರ ಕೈ ಕಟ್ಟಿಹಾಕಿದ್ದಾರೆ. ವಿಪುಲ್​ನನ್ನು ಬಾತ್​ರೂಮ್​ನ ಒಳಗೆ ಲಾಕ್​ ಮಾಡಿ, ರಿತಿಕಾರನ್ನು ಮೇಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸದ್ಯ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net