ಕರ್ಮ ಯಾರನ್ನೂ ಬಿಡುವುದಿಲ್ಲ ಎಂದ ರಾಹುಲ್​: ಇವರಿಗೆ 111 ರೂಪಾಯಿ ಕೊಡಿ ಎಂದ ಯುವತಿ!

rahulgandhi-karma
rahulgandhi
Published on

ನವದೆಹಲಿ: ಕರ್ಮ ಯಾರನ್ನೂ ಬಿಡುವುದಿಲ್ಲ. ಕರ್ಮ ಎಂದರೆ ಅವರೇ ಮಾಡಿರುವ ಕ್ರಿಯೆಗಳ ಪುಸ್ತಕ ಎಂದು ಸಂಸದ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಹೇಳಿದ್ದಾರೆ.

ಅವರು ಹೀಗೆ ಹೇಳಲು ಕಾರಣ, ರಫೇಲ್‌ ಯುದ್ಧ ವಿಮಾನ ಖರೀದಿಯ ವಿಷಯಕ್ಕಾಗಿ. ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ, 1.1 ಮಿಲಿಯನ್ ಯುರೋಗಳನ್ನು ವಿಮಾನ ತಯಾರಕರಿಂದ 'ಮಧ್ಯವರ್ತಿ' ಗೆ ಪಾವತಿಸಲಾಗಿದೆ ಎಂದು ಫ್ರೆಂಚ್ ಮಾಧ್ಯಮವೊಂದು ಉಲ್ಲೇಖಿಸಿದೆ. ಇದನ್ನು ಮುಂದು ಮಾಡಿಕೊಂಡ ರಾಹುಲ್​ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಾರೊಬ್ಬರೂ ಅವರ ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ರಫೇಲ್​ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಬಹಳ ವಿವಾದಗಳು ಹುಟ್ಟಿಕೊಂಡು ನಂತರ ಕಾಂಗ್ರೆಸ್​ಗೆ ಹಿನ್ನೆಡೆಯಾಗಿತ್ತು. ಇದೀಗ ಮತ್ತೆ ಫ್ರೆಂಚ್​ ಮಾಧ್ಯಮ ಈ ಯುದ್ಧ ವಿಮಾನಗಳ ವಿರುದ್ಧ ಬರೆದಿರುವ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಈ ಮಾತನ್ನು ಟ್ವೀಟ್​ ಮೂಲಕ ಹೇಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದಲ್ಲಿ ಉಲ್ಲೇಖವಾಗಿರುವ ಈ ವರದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಮತ್ತು ಒಪ್ಪಂದದ ಬಗ್ಗೆ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆದರೆ ರಾಹುಲ್​ ಗಾಂಧಿಯವರು ಏನೇ ಮಾತನಾಡಿದರೂ ಅದು ಟ್ರೋಲ್​ ಆಗುವುದು ಮಾಮೂಲಾಗಿಬಿಟ್ಟಿದೆ. ರಾಹುಲ್​ ಅವರ ಕೇಂದ್ರದ ವಿರುದ್ಧವೇನೋ ವಾಗ್ದಾಳಿ ನಡೆಸಿದ್ದಾರೆ. ಅದರೆ ಇವರ ಈ ಕರ್ಮದ ಟ್ವೀಟ್​ ಭಾರಿ ಟ್ರೋಲ್​ ಆಗುತ್ತಿದೆ. ನಿಮ್ಮ ಕರ್ಮದ ಬಗ್ಗೆ ಮಾತನಾಡಿ, ಕಾಂಗ್ರೆಸ್​ನ ಕರ್ಮದ ಬಗ್ಗೆ ಹೇಳಿ ಎಂದೆಲ್ಲಾ ಹಲವರು ಕಮೆಂಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ.

ಒಬ್ಬ ಸ್ಮಾರ್ಟಿ ಎಂಬ ಯುವತಿ, ಇವರ ಟ್ವೀಟ್​ಗೆ ರಿಪ್ಲೈ ಮಾಡಿದ್ದು, ರಾಹುಲ್​ಗಾಂಧಿಜೀ ಕರ್ಮ ಎಂಬ ಶಬ್ದವನ್ನು ಸರಿಯಾಗಿ ಹಿಂದಿಯಲ್ಲಿ ಹೇಳಿದರೆ ಅವರಿಗೆ ಕಾಂಗ್ರೆಸ್​ನ ಐಟಿ ಸೆಲ್​ನವರು 100 ರೂಪಾಯಿ ಪ್ರೈಜ್​ ಕೊಡಬೇಕು. ಒಂದು ವೇಳೆ ಅವರು ಹಿಂದಿಯ ಮೂಲ ಸ್ವರೂಪದಲ್ಲಿಯೇ ಇನ್ನೂ ಸ್ಪಷ್ಟವಾಗಿ ಉಚ್ಚರಿಸಿದರೆ 111 ರೂಪಾಯಿ ಕೊಡಬೇಕು ಎಂದು ಬರೆದಿದ್ದಾರೆ. ರಾಹುಲ್​ ಗಾಂಧಿಯವರ ಮೂಲ ಟ್ವೀಟ್​ಗಿಂತ ಈಗ ಇದೇ ಭಾರಿ ವೈರಲ್​ ಆಗುತ್ತಿದ್ದು, ಇದಕ್ಕೆ ಹಲವಾರು ಕಮೆಂಟ್​ಗಳು ಬರತೊಡಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net