More

    ಮೂರನೇ ಅತಿಹೆಚ್ಚು ಶತಕೋಟ್ಯಧೀಶ್ವರರ ದೇಶವಾಗಿ ಹೊಮ್ಮಿದ ಭಾರತ- ಯಾರ ಸಂಪತ್ತು ಎಷ್ಟಿದೆ ಗೊತ್ತಾ?

    ವಾಷಿಂಗ್ಟನ್​: ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಷ್ಟೇ ಅಲ್ಲದೆ, ಫೋರ್ಬ್ಸ್‌ ಪಟ್ಟಿಯಲ್ಲಿ ಜಗತ್ತಿನ 10ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಚೀನಾದ ಶ್ರೀಮಂತ ಉದ್ಯಮಿ ಜಾಕ್ ಮಾ ಅವರನ್ನು ಮುಕೇಶ್​ ಹಿಂದಿಕ್ಕಿದ್ದಾರೆ!

    ಪೋರ್ಬ್ಸ್ ಬಿಡುಗಡೆ ಮಾಡಿರುವ 35ನೇ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ ಕೋಟ್ಯಧೀಶ್ವರರಲ್ಲಿ ಅಮೆಜಾನ್‌ನ ಸಿಇಒ ಹಾಗೂ ಸಂಸ್ಥಾಪಕ ಜೆಫ್‌ ಬೇಜೋಸ್‌ ಅವರು ಸತತ ನಾಲ್ಕನೇ ಬಾರಿಗೆ ವಿಶ್ವದ ಅಗ್ರಗಣ್ಯ ಶ್ರೀಮಂತ ಎನಿಸಿಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 177 ಬಿಲಿಯನ್ ಅಮೆರಿಕನ್ ಡಾಲರ್. ಶ್ರೀಮಂತರ ಪಟ್ಟಿಯಲ್ಲಿ ಸ್ಪೇಸ್ ಎಕ್ಸ್ ಸ್ಥಾಪಕ ಎಲಾನ್ ಮಸ್ಕ್ ಎರಡನೇ ಸ್ಥಾನ ಪಡೆದಿದ್ದಾರೆ.

    ಮುಕೇಶ್​ ಅವರ ಒಟ್ಟು ಆಸ್ತಿ ಮೌಲ್ಯವು 84.5 ಶತಕೋಟಿ ಡಾಲರ್. ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಗ್ರೂಪ್​ನ ಅಧ್ಯಕ್ಷ ಗೌತಮ್ ಅದಾನಿ ಎರಡನೇ ಸ್ಥಾನ ಪಡೆದಿದ್ದು, ಜಾಗತಿಕವಾಗಿ 24ನೇ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದೆ. ಎಚ್​ಸಿಎಲ್ ಟೆಕ್ನಾಲಜೀಸ್ ಸ್ಥಾಪಕ ಶಿವ್ ನಾಡಾರ್ ಭಾರತದ ಮೂರನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

    ವಿಶೇಷ ಎಂದರೆ, ಅಮೆರಿಕ ಹಾಗೂ ಚೀನಾ ನಂತರ ಗರಿಷ್ಠ ಸಂಖ್ಯೆಯ ಶತಕೋಟ್ಯಧೀಶರನ್ನು ಹೊಂದಿರುವ ರಾಷ್ಟ್ರ ಭಾರತ ಎಂದು ವರದಿಯಲ್ಲಿ ಹೇಳಲಾಗಿದೆ.
    ವಿಶ್ವದ ಅತೀ ದೊಡ್ಡ ಲಸಿಕೆ ತಯಾರಿಕೆಯ ಸೇರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕ ಸೈರಸ್ ಪೂನಾವಾಲ್ಲಾ ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ 169ನೇ ಸ್ಥಾನ ಪಡೆದಿದ್ದು, ಏಷ್ಯಾದಲ್ಲಿ 7ನೇ ಸ್ಥಾನ ಪಡೆದಿದ್ದಾರೆ.

    ಭಾರತದ ಟಾಪ್​ 10 ಶ್ರೀಮಂತರಿವರು, ಇವರ ಆದಾಯ ಇಲ್ಲಿದೆ ನೋಡಿ:

    ಟಾಪ್​ 1. ಮುಖೇಶ್ ಅಂಬಾನಿ
    ಊರು: ಮುಂಬೈ
    ನಿವ್ವಳ ಆದಾಯ: $84.5 ಬಿಲಿಯನ್
    ಸಂಪತ್ತಿನ ಮೂಲ: ಬೇರೆ ಬೇರೆ ಮೂಲಗಳು

    ಟಾಪ್​ 2. ಗೌತಮ್ ಅದಾನಿ
    ಊರು: ಅಹಮದಾಬಾದ್
    ನಿವ್ವಳ ಆದಾಯ: $50.5 ಬಿಲಿಯನ್
    ಸಂಪತ್ತಿನ ಮೂಲ: ಮೂಲಸೌಕರ್ಯ

    ಟಾಪ್​ 3. ಶಿವ್ ನಾಡರ್
    ಊರು: ದೆಹಲಿ
    ನಿವ್ವಳ ಆದಾಯ: $23.5 ಬಿಲಿಯನ್
    ಸಂಪತ್ತಿನ ಮೂಲ: ಸಾಫ್ಟ್ ವೇರ್ ಸೇವೆಗಳು

    ಟಾಪ್ 4. ರಾಧಾಕಿಶನ್ ದಮಾನಿ
    ಊರು: ಮುಂಬೈ
    ನಿವ್ವಳ ಆದಾಯ: $16.5 ಬಿಲಿಯನ್
    ಸಂಪತ್ತಿನ ಮೂಲ: ಚಿಲ್ಲರೆ, ಹೂಡಿಕೆಗಳು

    ಟಾಪ್ 5. ಉದಯ್ ಕೋಟಕ್
    ಊರು: ಮುಂಬೈ
    ನಿವ್ವಳ ಆದಾಯ: $15.9 ಬಿಲಿಯನ್
    ಸಂಪತ್ತಿನ ಮೂಲ: ಬ್ಯಾಂಕಿಂಗ್

    ಟಾಪ್ 6. ಲಕ್ಷ್ಮಿ ಮಿತ್ತಲ್
    ನಿವಾಸ: ಲಂಡನ್
    ನಿವ್ವಳ ಆದಾಯ: $14.9 ಬಿಲಿಯನ್
    ಸಂಪತ್ತಿನ ಮೂಲ: ಉಕ್ಕು

    ಟಾಪ್ 7. ಕುಮಾರ್ ಬಿರ್ಲಾ
    ಊರು: ಮುಂಬೈ
    ನಿವ್ವಳ ಆದಾಯ: $12.8 ಬಿಲಿಯನ್
    ಸಂಪತ್ತಿನ ಮೂಲ: ಸರಕುಗಳು

    ಟಾಪ್ 8. ಸೈರಸ್ ಪೂನಾವಾಲಾ
    ಊರು:: ಪುಣೆ
    ನಿವ್ವಳ ಮೌಲ್ಯ: $12.7 ಬಿಲಿಯನ್
    ನಿವ್ವಳ ಆದಾಯ: ಲಸಿಕೆಗಳು

    ಟಾಪ್ 9. ದಿಲೀಪ್ ಶಾಂಘ್ವಿ
    ಊರು: ಮುಂಬೈ
    ನಿವ್ವಳ ಆದಾಯ: $10.9 ಬಿಲಿಯನ್
    ಸಂಪತ್ತಿನ ಮೂಲ: ಔಷಧೀಯ

    ಟಾಪ್ 10. ಸುನಿಲ್ ಮಿತ್ತಲ್ ಮತ್ತು ಕುಟುಂಬ
    ಊರು: ದೆಹಲಿ
    ನಿವ್ವಳ ಆದಾಯ: $10.5 ಬಿಲಿಯನ್
    ಸಂಪತ್ತಿನ ಮೂಲ: ಟೆಲಿಕಾಂ

    ಚೆಕ್​ಬೌನ್ಸ್​ ಪ್ರಕರಣ: ಖ್ಯಾತ ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

    ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಕಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

    ನಾನು ಇಷ್ಟಪಟ್ಟಾಕೆ ಬೇರೆ ಮದ್ವೆಯಾಗಲಿದ್ದು, ನನ್ನ ಜತೆ ಸೇರಲೂ ಸಿದ್ಧಳಿದ್ದಾಳೆ- ನಾನು ಒಪ್ಪಿದರೆ ತಪ್ಪಾ?

    ₹26 ಸಾವಿರ ಮಾಸ್ಕ್​ ಧರಿಸಿ ಸ್ಪೆಷಲ್​ ಮೆಸೇಜ್​ ನೀಡಿದ್ರು ಕರೀನಾ… ಮಾಸ್ಕ್​ ಸೋಲ್ಡ್​ ಔಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts