ತಮಿಳ್ನಾಡು ಇಂಡಿಯಾ ಆದ್ರೆ, ಇಂಡಿಯಾ ತಮಿಳ್ನಾಡು- ತಮಿಳ್ನಾಡು ಇಂಡಿಯಾ ಅಲ್ಲದಿದ್ರೆ ಇಂಡಿಯಾ ತಮಿಳ್ನಾಡು ಅಲ್ಲ...

rahul gandhi
Published on

ಚೆನ್ನೈ: ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ತಮಿಳುನಾಡಿಗೆ ಭೇಟಿಕೊಟ್ಟಿದ್ದು, ಅವರು ಮಾತನಾಡಿರುವ ಹಲವಾರು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಇದೇ 25ರವರೆಗೆ ರಾಹುಲ್‌ ಗಾಂಧಿ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾಗಲೇ ಅವರು ಮಾತನಾಡಿರುವ ವಿಡಿಯೋದ ಕೆಲವು ತುಣುಕುಗಳು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ‌ಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

ರಾಹುಲ್‌ಗಾಂಧಿ ಅವರು ವಿವಿಧ ಸ್ಥಳಗಳಲ್ಲಿ ಮಾತನಾಡಿರುವ ವಿಡಿಯೋಗಳನ್ನು ಚಿಕ್ಕ ಚಿಕ್ಕ ತುಣುಕುಗಳ ರೂಪದಲ್ಲಿ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಹೋದ ಕಡೆಗಳೆಲ್ಲಲ್ಲ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿರುವ ರಾಹುಲ್‌ಗಾಂಧಿಯವರು, ತಮಿಳುನಾಡಿನ ಮೇಲೆ ತಮಗಿರುವ ಪ್ರೀತಿಯನ್ನು ಬಣ್ಣಿಸಿದ್ದಾರೆ.

ಅದರಲ್ಲಿ ಒಂದು ವಿಡಿಯೋ ಹೀಗಿದೆ ಕೇಳಿ:

ಇದರಲ್ಲಿ ರಾಹುಲ್‌ಗಾಂಧಿ ಹೇಳಿದ್ದೇನೆಂದರೆ ತಮಿಳುನಾಡು ಎಂದರೆ ಇಂಡಿಯಾ, ಇಂಡಿಯಾ ಎಂದರೆ ತಮಿಳುನಾಡು. ತಮಿಳುನಾಡು ಇಂಡಿಯಾ ಅಲ್ಲದಿದ್ದರೆ, ಇಂಡಿಯಾ ತಮಿಳುನಾಡು ಅಲ್ಲ. ತಮಿಳುನಾಡು ಇಂಡಿಯಾದಲ್ಲಿ ಇದೆ. ಆದರೆ ತಮಿಳುನಾಡು ಇಂಡಿಯಾ ಅಲ್ಲ ಎಂದು ಮೋದಿಯವರು ಹೇಳಿದ್ದಾರೆ ಎಂದು ರಾಹುಲ್‌ಗಾಂಧಿ ಹೇಳಿದರು.

ಇದನ್ನು ಅಲ್ಲಿಯೇ ಇದ್ದ ಕಾಂಗ್ರೆಸ್‌ ಮುಖಂಡ ತಮಿಳಿನಲ್ಲಿ ಟ್ರಾನ್ಸ್‌ಲೇಟ್‌ ಮಾಡಿ ಹೇಳಿದರು. ಜನರು ಜೋರಾಗಿ ಚಪ್ಪಾಳೆ ತಟ್ಟಿದರು. ಈ ವಿಡಿಯೋ ಇದೀಗ ಸಾಕಷ್ಟು ವೈರಲ್‌ ಆಗಿದ್ದು, ಈ ವಿಡಿಯೋ ಕುರಿತಂತೆ ಹಲವಾರು ಕಮೆಂಟ್‌ಗಳು ಓಡಾಡುತ್ತಿವೆ.

ಕೊನೆಗೆ ತಮಿಳುನಾಡು ಎಲ್ಲಿ ಇದೆ ಎಂದು ಫೈನಲ್‌ ಆಯ್ತು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net