

ಉನ್ನಾವೋ: ಭಾರತ ಕಂಡ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ನಿನ್ನೆ ಜ.23ರಂದು ಆಚರಿಸಲಾಗಿದೆ. ಇವರು ಮೃತಪಟ್ಟು 75 ವರ್ಷ ಕಳೆಯುತ್ತಾ ಬಂದರೂ, ಇವರ ಸಾವಿನ ನಿಗೂಢತೆ ಇದುವರೆಗೂ ಬಹಿರಂಗವಾಗಿಲ್ಲ. ಅಪಘಾತದಲ್ಲಿ 1945ರಲ್ಲಿ ಮೃತಪಟ್ಟಿದ್ದ ನೇತಾಜಿ ಅವರ ಸಾವಿನ ಕುರಿತಂತೆ ಹಲವಾರು ಊಹಾಪೋಹಗಳು ಕೇಳಿಬರುತ್ತಿದ್ದರೂ, ಆ ರಹಸ್ಯ ಮಾತ್ರ ಇದುವರೆಗೂ ರಹಸ್ಯವಾಗಿಯೇ ಉಳಿದುಬಿಟ್ಟಿದೆ.
ಈ ನಡುವೆಯೇ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಹೇಳಿಕೆಯೊಂದನ್ನು ನೀಡಿದ್ದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಸಾಕ್ಷಿ ಮಹಾರಾಜ್ ಹೇಳಿದ್ದು ಏನೆಂದರೆ, ನೇತಾಜಿ ಸುಭಾಷ್‌ಚಂದ್ರ ಬೋಸ ಅವರನ್ನು ಹತ್ಯೆ ಮಾಡಿದ್ದ ಕಾಂಗ್ರೆಸ್ ಎಂದಿದ್ದಾರೆ.
ಉತ್ತರ ಪ್ರದೇಶದ ಉನ್ನಾವೋದ ಔರಸ್‌ನ ಉಟ್ರಾ ದಕೌಲಿ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂಸದ, ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್. ಅವರ ಸುಭಾಷ್ ಚಂದ್ರ ಬೋಸ್ ಜನಪ್ರಿಯತೆ ಮುಂದೆ ಗಾಂಧಿಯವರಾಗಲಿ, ಪಂಡಿತ್ ಜವಹರಲಾಲ್ ನೆಹರೂವರಾಗಲಿ ನಿಲ್ಲುವ ಧೈರ್ಯ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಒಳಸಂಚಿನಿಂದಲೇ ಹತ್ಯೆ ಮಾಡಿದೆ ಎಂದಿದ್ದಾರೆ.
ಇದೀಗ ಕಾಂಗ್ರೆಸ್ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ವಿಜಯವಾಣಿ ನಡೆಸಿರುವ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನೇತಾಜಿ ಅವರ ಪುತ್ರಿ ತಮ್ಮ ತಂದೆಯವರ ಅವಶೇಷದ ಡಿಎನ್‌ಎ ಪರೀಕ್ಷೆ ಆಗಲಿ ಎಂದು ಹೇಳಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಈ ವಿಶೇಷ ಸಂದರ್ಶನದ ಲಿಂಕ್ ಇಲ್ಲಿದೆ ನೋಡಿ: ನೇತಾಜಿ ಅವಶೇಷದ ಡಿಎನ್‌ಎ ಪರೀಕ್ಷೆ ಆಗಲಿ: ಸುಭಾಷ್‌ಚಂದ್ರ ಬೋಸ್ ಅವರ ಪುತ್ರಿ ಡಾ. ಅನಿತಾ