

ನವದೆಹಲಿ: ಇಂದು ಸ್ನೇಹಿತರ ದಿನ. ಈ ದಿನದಂದು ಕಾಂಗ್ರೆಸ್ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಷ್ ಮಾಡಿದ್ದಾರೆ.
ಈ ಕುರಿತು ವಿಡಿಯೋ ಒಂದನ್ನುಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದು, ನಾವಿಬ್ಬರು, ನಮಗಿಬ್ಬರು ಎಂಬ ಸ್ಲೋಗೋನ್ ಹೇಳಿದ್ದಾರೆ. ನಾವಿಬ್ಬರು. ನಮಗಿಬ್ಬರು, ಈ ದೇಶ ನಡೆಯುತ್ತಿರುವುದು ನಾಲ್ವರಿಂದ ಮಾತ್ರ ಎಂದು ಅದರಲ್ಲಿ ಹೇಳಿದ್ದಾರೆ. ಜತೆಗೆ ವಿಡಿಯೋದಲ್ಲಿ ಇಂಗ್ಲಿಷ್ ಹಾಡನ್ನು ಪ್ಲೇ ಮಾಡಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಕೈಗಾರಿಕೋದ್ಯಮದ ಜತೆ ಕೈ ಜೋಡಿಸಿರುವ ವೀಡಿಯೋ ಇದಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮೋದಿ ಹಲವಾರು ಗಣ್ಯ ವ್ಯಕ್ತಿಗಳ ಕೈಕುಲುಕುತ್ತಿರುವುದನ್ನು ಕಾಣಬಹುದು. ಇದಕ್ಕೆ ರಾಹುಲ್ ಗಾಂಧಿ ಶೇಖ್ಹ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹಮ್ ದೋ ಹಾಮಾರೆ ದೋ ಕಿ ಸರ್ಕಾರ್ಗೆ ಸ್ನೇಹಿತರ ದಿನಾಚರಣೆ ಶುಭಾಶಯಗಳು ಎಂದು ಕ್ಯಾಪ್ಷನ್ನಲ್ಲಿ ಬರೆಯುವ ಮೂಲಕ ಶುಭಾಶಯ ಕೋರಿದ್ದಾರೆ.
ಇದಕ್ಕೆ ಕಾಂಗ್ರೆಸ್ಸಿಗರು ಭಾರಿ ಶಹಭಾಸ್ಗಿರಿ ನೀಡಿದ್ದರೆ, ಬಿಜೆಪಿ ಬೆಂಬಲಿಗರು ಗರಂ ಆಗಿದ್ದಾರೆ. ಬುದ್ಧಿ ಬೆಳೆಯದ ಚಿಕ್ಕಮಕ್ಕಳು ಶಾಲೆಗಳಲ್ಲಿ ಸಹಪಾಠಿಗಳ ಜತೆ ಜಗಳವಾಡುವಂತೆ ಕೆಲಸವಿಲ್ಲದವರು ಮಾತ್ರ ಇಂಥ ಹುಚ್ಚುಹುಚ್ಚು ವಿಡಿಯೋ ಮಾಡಲು ಸಾಧ್ಯ ಎಂದು ಹಲವರು ರಾಹುಲ್ ಗಾಂಧಿಯವರನ್ನು ಟ್ರೋಲ್ ಮಾಡಿದ್ದಾರೆ. ಜತೆಗೆ ಕಳೆದ ವರ್ಷ ತಮಿಳುನಾಡು ಸೇರಿದಂತೆ ಕೆಲವೆಡೆಗಳಲ್ಲಿ ರಾಹುಲ್ ಗಾಂಧಿಯವರು ಮಾಡಿರುವ ಭಾಷಣಗಳ ತುಣುಕುಗಳನ್ನು ಹಾಕಿರುವ ಬಿಜೆಪಿ ಬೆಂಬಲಿಗರು, ಅರ್ಥವಿಲ್ಲದ ಇಂಥ ಮಾತುಗಳನ್ನಾಡುವವರು ಇನ್ನೇನು ವಿಡಿಯೋ ಮಾಡಲು ಸಾಧ್ಯ ಎಂದು ಅಣಕಿಸಿದ್ದಾರೆ. ಒಟ್ಟಿನಲ್ಲಿ ಈ ಸ್ನೇಹಿತರ ದಿನದ ವಿಷ್ ಕಮೆಂಟಿಗರ ಬಾಯಲ್ಲಿ ಆಹಾರದ ವಸ್ತುವಾಗಿದೆ.
ವಿಡಿಯೋ ಇಲ್ಲಿದೆ ನೋಡಿ: