

ಕಠ್ಮಂಡು: ಮೇಲಿಂದ ಮೇಲೆ ವಿದೇಶ ಪ್ರಯಾಣ ಬೆಳೆಸುವ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ತಲ್ಲಣ ಮೂಡಿಸಿದೆ. ಇತ್ತ ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ವಿದೇಶ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಅಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂಬ ಬಗ್ಗೆ ಖುದ್ದು ಕಾಂಗ್ರೆಸ್ ವಲಯದಲ್ಲಿಯೂ ಪ್ರಶ್ನೆ ಹುಟ್ಟುಹಾಕಿತ್ತು. ಇದೀಗ ಈ ವಿಡಿಯೋ ಉತ್ತರ ನೀಡಿದೆ!
ಅದೇನೆಂದರೆ ನೇಪಾಳದ ನೈಟ್ಕ್ಲಬ್ ಒಂದರಲ್ಲಿ ಮಹಿಳೆಯೊಬ್ಬರ ಜತೆ ರಾಹುಲ್ ಗಾಂಧಿ ಮದ್ಯ ಸೇವನೆ ಮಾಡುತ್ತಿರುವ ವಿಡಿಯೋ ಇದಾಗಿದೆ. ಇತ್ತ ಕಾಂಗ್ರೆಸ್ ಭಾರತದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವಾಗ, ಅದರ ಪ್ರಧಾನಿ ಅಭ್ಯರ್ಥಿ ಹೀಗೆ ನೈಟ್ಕ್ಲಬ್ನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದು ಮಾತ್ರ ಭಾರಿ ಕೋಲಾಹಲ ಸೃಷ್ಟಿಸಿದೆ.
ಈ ಮಹಿಳೆ ನೇಪಾಳದಲ್ಲಿರುವ ಚೀನಾದ ರಾಯಭಾರಿ ಹೌ ಯಾಂಕಿ ಎನ್ನಲಾಗಿದೆ. ಭಾರತದ ಕಟು ವೈರಿಯಾಗಿರುವ ಈಕೆ, ನೇಪಾಳ-ಭಾರತ ಹಾಗೂ ಪಾಕಿಸ್ತಾನ-ಭಾರತದ ನಡುವೆ ವೈರತ್ವ ತಂದಿಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾಳೆ.
ಭಾರತಕ್ಕೆ ಅತ್ಯಂತ ಸ್ನೇಹಪರ ರಾಷ್ಟ್ರವಾಗಿದ್ದ ನೇಪಾಳ, ಭಾರತದ ವಿರುದ್ಧ ಸಂಚು ಹೂಡುತ್ತಾ, ಈ ಪರಿಯಲ್ಲಿ ವಿರೋಧ ಕಟ್ಟಿಕೊಳ್ಳುವ ಮಟ್ಟಿಗೆ ಬೆಳೆದುನಿಂತಿದ್ದೇಕೆ ಎಂಬ ಬಗ್ಗೆ ತನಿಖೆ ಭಾರತದ ಗುಪ್ತಚರ ಇಲಾಖೆ ಜಾಡು ಹಿಡಿದು ಹೊರಟಾಗ ಕಂಡಿದ್ದು ಚೀನಾದ ಈ ಹೆಣ್ಣು. ನೇಪಾಳ ತನ್ನ ನಕ್ಷೆಯನ್ನೇ ಬದಲಿಸಿ ದಿನದಿಂದ ದಿನಕ್ಕೆ ಭಾರತದ ವೈರತ್ವ ಕಟ್ಟಿಕೊಳ್ಳುವ ಹಿಂದಿರುವುದು ಚೀನಾದ ಈ ಸುಂದರಿ ಎನ್ನುವುದು ಭಾರತದ ಗುಪ್ತಚರ ಇಲಾಖೆಗೆ ತಿಳಿದುಬಂದಿತ್ತು. ಮಾತ್ರವಲ್ಲದೇ, ಪಾಕಿಸ್ತಾನ ಮತ್ತು ಭಾರತದ ನಡುವೆ 1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುವುದಕ್ಕೂ ಈ ಸುಂದರಿಯೇ ಕಾರಣ ಎನ್ನಲಾಗಿದೆ.
ನೇಪಾಳದಲ್ಲಿ ರಾಹುಲ್ ಗಾಂಧಿ ಮೋಜು ಮಸ್ತಿ ಮಾಡುತ್ತಿರುವ ಮಹಿಳೆ ಈಕೆಯೇ ಎಂಬ ಮಾತು ಕೇಳಿಬಂದಿದೆ. ಇದರ ವಿಡಿಯೋ ಅನ್ನು ನೇಪಾಳದ ಪ್ರಜೆ ಭೂಪೇನ್ ಕುನ್ವರ್ ಅವರು ಹಂಚಿಕೊಂಡಿದ್ದಾರೆ. 'ಲಾರ್ಡ್ ಆಫ್ ಡ್ರಿಂಕ್ಸ್' ರಾಹುಲ್ ಗಾಂಧಿ ಅವರು ನೇಪಾಳದ ಕಠ್ಮಂಡುವಿನಲ್ಲಿ ಮಹಿಳೆಯ ಜತೆ ಪಬ್ನಲ್ಲಿ ಇದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
ನೇಪಾಳದಲ್ಲಿರುವ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ಪುತ್ರಿಯ ಮದುವೆಗೆಂದು ರಾಹುಲ್ ಗಾಂಧಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋದಲ್ಲಿ ಇರುವ ಮಹಿಳೆ ಯಾರು ಎಂಬ ಬಗ್ಗೆ ಗುಮಾನಿ ಇದ್ದರೂ, ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ಹೀಗೆ ನೈಟ್ಕ್ಲಬ್ನಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿರುವುದು ಮಾತ್ರ ಭಾರಿ ಕೋಲಾಹಲ ಸೃಷ್ಟಿಸಿದೆ.