

ಮುಂಬೈ: ಭಾರತ ಕಂಡ ಅಪರೂಪದ ಕ್ರಿಕೆಟ್ ತಾರೆಗಳಲ್ಲಿ ಒಬ್ಬರು ರಾಹುಲ್ ದ್ರಾವಿಡ್. ಟೆಸ್ಟ್ ಪಂದ್ಯಗಳಲ್ಲಿ 10 ಸಾವಿರಕ್ಕೂ ಅಧಿಕ ರನ್ನುಗಳನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದು. ಮಧ್ಯಪ್ರದೇಶ ಮೂಲದವರಾದವರೂ ರಾಹುಲ್ ದ್ರಾವಿಡ್ ಅವರು ಕನ್ನಡಿಗರು.
ಜಾಹೀರಾತು ಒಂದರಲ್ಲಿ ಕನ್ನಡದಿಂದ ಇವರು ಮಾತನಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ಅನ್ನು ವಿರಾಟ್ ಕೊಹ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರು ಇದನ್ನು ಶೇರ್ ಮಾಡಿಕೊಳ್ಳಲು ಕಾರಣ, ಅತ್ಯಂತ ಮೃದು ಸ್ವಭಾವದವರು ಎನಿಸಿಕೊಂಡಿರುವ ರಾಹುಲ್ ದ್ರಾವಿಡ್ಗೆ ಅತ್ಯಂತ ಕೋಪದಿಂದ ಇದರಲ್ಲಿ ಮಾತನಾಡಿದ್ದಾರೆ. ರಾಹುಲ್ ಅವರ ಇಂಥ ರೂಪ ನಾವು ನೋಡೇ ಇರಲಿಲ್ಲ ಎಂದು ಕೊಹ್ಲಿ ತಮಾಷೆಯಾಗಿ ಕ್ಯಾಪ್ಷನ್ ಹಾಕಿದ್ದಾರೆ.
ಈ ವಿಡಿಯೋದಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿರುವ ರಾಹುಲ್ ಮಹಿಳೆ ಸೇರಿದಂತೆ ಅನೇಕ ಮಂದಿಗೆ ಸಿಟ್ಟಿನಿಂದ ಬೈಯುವುದನ್ನು ಕಾಣಬಹುದು. ಬ್ಯಾಟ್ನಿಂದ ಕಾರಿನ ಗಾಜನ್ನು ಒಡೆಯುತ್ತಿರುವ ಅವರು, ಒಮ್ಮೆ ಕನ್ನಡದಿಂದ ಒಡೆದ್ಹಾಕ್ಬಿಡ್ತೀನಿ ಎಂದು ಆಕ್ರೋಶದಿಂದ ಹೇಳಿದ್ದಾರೆ.
ಅಸಲಿಗೆ ಇದೇನೂ ನಿಜವಾದ ವಿಡಿಯೋ ಅಲ್ಲ. ಬದಲಿಗೆ ಜಾಹೀರಾತಿಗೆ ಪೂರಕವಾಗಿ ಇಂಥದ್ದೊಂದು ವಿಡಿಯೋ ಮಾಡಲಾಗಿದೆ. ಮೃದು ಸ್ವಭಾವದ ದ್ರಾವಿಡ್ ಅವರಿಗೂ ಸಿಟ್ಟುಬರುತ್ತದೆ ಎಂದು ಜಾಹೀರಾತನ್ನು ಹೋಲಿಕೆ ಮಾಡಲು ಇದನ್ನು ಬಳಸಲಾಗಿದೆ. ಆದರೆ ಕನ್ನಡಿಗರು ಮಾತ್ರ ಇಂಥ ದೊಡ್ಡ ಸ್ಟಾರ್ ಬಾಯಲ್ಲಿ ಕನ್ನಡ ಬಂದದ್ದನ್ನು ಕೇಳಿ ಖುಷಿಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.