ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಎಸ್.ರಘುನಾಥ್ ಆಯ್ಕೆ; ಭಾನುಪ್ರಕಾಶ್ ಶರ್ಮರನ್ನು ಹಿಂದಿಕ್ಕಿ ಗೆಲುವು

akbms
Published on

ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನಕ್ಕಾಗಿ ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಎಸ್.ರಘುನಾಥ್ ಗೆಲುವು ಸಾಧಿಸಿದ್ದು, ತಮ್ಮ ಪ್ರತಿಸ್ಪರ್ಧಿ ಭಾನುಪ್ರಕಾಶ್ ಅವರನ್ನು ಹಿಂದಿಕ್ಕಿದ್ದಾರೆ.

ರಘುನಾಥ್ 13399 ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಭಾನುಪ್ರಕಾಶ್ ಶರ್ಮ 11235 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 2164 ಮತಗಳ ಅಂತರದಲ್ಲಿ ರಘುನಾಥ ಗೆಲುವಿನ ನಗೆ ಬೀರಿದ್ದಾರೆ.

ಲಿತಾಂಶ ಹೊರಬಿದ್ದ ನಂತರ ಮಾತನಾಡಿದ ರಘುನಾಥ್, ರಾಜ್ಯದಲ್ಲಿ 45ಲಕ್ಷ ಬ್ರಾಹ್ಮಣರಿದ್ದು, ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನಸಂಖ್ಯೆಯಲ್ಲಿದ್ದಾರೆ. ಪೌರೋಹಿತ್ಯ, ಅಡುಗೆ ಕೆಲಸ, ಅರ್ಚಕ ವೃತ್ತಿ ಮಾಡುವವರೇ ಹೆಚ್ಚಾಗಿದ್ದು, ಅಂತಹವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು. ವೃತ್ತಿ ಭಾಂದವರು ಆರ್ಥಿಕವಾಗಿ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು. ವಿಪ್ರ ಸಮುದಾಯದ ಏಳಿಗೆಗಾಗಿ 100ಕೋಟಿ ದೇಣಿಗೆ ಸಂಗ್ರಹಿಸಿ ದತ್ತಿನಿಧಿ ಸ್ಥಾಪಿಸಿ ಅದರಿಂದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿ ವಿಪ್ರ ಸಮುದಾಯದ ಮಕ್ಕಳಿಗೆ ಅವಕಾಶ ನೀಡುವುದು ಹಾಗೂ ವಿಶ್ರಾಂತಿ ಭವನ ನಿರ್ಮಿಸಲಾಗುವುದು. ಉದ್ಯೋಗ ಮೇಳ , ಸಾಮೂಹಿಕ ಉಪನಯನ ಮತ್ತು ವಧು-ವರಾನ್ವೇಷಣೆ ಕೇಂದ್ರ, ವಿಕಲಚೇತನರಿಗೆ ಸಹಾಯಧನ ಮತ್ತು ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ಚುರುಕುಗೊಳಿಸುವುದು. ಒಟ್ಟಾರೆ ವಿಪ್ರ ಸಮುದಾಯದ ಅಭಿವೃದ್ದಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಗೆಲುವಿಗೆ ಸಹಕರಿಸಿದ ವಿಪ್ರ ಸಮಾಜದ ಹಿರಿಯರಾದ ಸಿ.ವಿ.ಎಲ್.ಶಾಸ್ತ್ರಿ, ಬಿ.ಎನ್.ಸುಬ್ರಮಣ್ಯ, ಎಕೆಬಿಎಂಎಸ್ ಮಾಜಿ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್, ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ಲಕ್ಷ್ಮಿಕಾಂತ್ ಇನ್ನಿತರರಿಗೆ ಧನ್ಯವಾದ ಅರ್ಪಿಸಿದರು.

66 ಸಾವಿರ ಮತದಾರರಿದ್ದು, ಬೆಂಗಳೂರುನಗರ ಪ್ರದೇಶದಲ್ಲಿ 34ಸಾವಿರ ಮತದಾರರಿದ್ದಾರೆ. ಬೆಳಗ್ಗೆ 8ರಿಂದ 4ಗಂಟೆಗೆ ವರಗೆ ಮತದಾನ ನಡೆದು ನಂತರ ಮತ ಏಣಿಕೆ ಕಾರ್ಯ ಜರುಗಿತು.

ಬೆಂಗಳೂರುನಗರ ಪ್ರದೇಶದಲ್ಲಿ 8 ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೂ ಚುನಾವಣೆ ನಡೆಯಿತು. ನಗರದಲ್ಲಿ ಮೂರು ಮತದಾನ ಕೇಂದ್ರಗಳು, ಸಾವಿರಕ್ಕೂ ಹೆಚ್ಚು ಮತಗಳಿರುವ ಜಿಲ್ಲೆಯಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net