ಅರ್ಧ ಪರೀಕ್ಷೆ ಬರೆದ ಮೇಲೆ ಪ್ರಶ್ನೆ ಪತ್ರಿಕೆ ಬದಲಾಯಿಸಿದರು! ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ಎಡವಟ್ಟು

exam1
Published on

ಕೊಪ್ಪಳ: ರಾಜ್ಯದ ಹಲವು ಕಡೆಗಳಲ್ಲಿ ಭಾನುವಾರ ಪೊಲೀಸ್ ಕಾನ್ಸ್‌ಟೆಬಲ್‌ ಪರೀಕ್ಷೆ ನಡೆದಿತ್ತು. ಕೊಪ್ಪಳ ಜಿಲ್ಲೆ ಗಂಗಾವತಿ ಜೂನಿಯರ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಅದಲು-ಬದಲು ಆದ ಕಾರಣದಿಂದ ಅಭ್ಯರ್ಥಿಗಳು ಪೇಚಾಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಗಂಗಾವತಿ, ಕಾರಟಗಿ ತಾಲೂಕು ಸೇರಿ ಒಟ್ಟು 24 ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟೂ 300 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಲಾಖೆ ನಿಯಮದಂತೆ ಕೆಂಪು ಬಣ್ಣದ ಪ್ರಶ್ನೆ ಪತ್ರಿಕೆ ನೀಡಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಹಳದಿ ಬಣ್ಣದ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಯಿತು.

ಪ್ರಶ್ನೆ ಪತ್ರಿಕೆ ನೋಡಿ ಅಭ್ಯರ್ಥಿಗಳು ಗೊಂದಲದಲ್ಲಿ ಸಿಲುಕಿದರು. ಆದರೂ ಪರೀಕ್ಷೆ ಬರೆಯಲು ಶುರು ಮಾಡಿದರು. ಇದಾಗಿ ಕೆಲ ಗಂಟೆಗಳೇ ಸಂದಿದವು. ನಂತರ ಸಿಬ್ಬಂದಿಗೆ ತಪ್ಪಿನ ಅರಿವಾಗಿ ಸರಿಯಾದ ಪತ್ರಿಕೆ ಕೊಟ್ಟರು. ಇದರಿಂದ ಅಭ್ಯರ್ಥಿಗಳು ಎರಡೆರಡು ಬಾರಿ ಪರೀಕ್ಷೆ ಬರೆಯುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net