

ಹೀಗೆ 1999ರಲ್ಲಿ ಮಾರಾಟವಾದ ಆಸ್ತಿಯನ್ನು ಈಗ ಮಾರಾಟ ಮಾಡಿದವರ ಹೆಂಡತಿ ಮತ್ತು ಮಕ್ಕಳು ಮಾರಾಟದ ಕ್ರಯ ಪತ್ರದಲ್ಲಿ ಮಾರಾಟ ಮಾಡಿದವರ ಹೆಂಡತಿ ಮಕ್ಕಳ ಸಹಿ ಇಲ್ಲವೆಂದು ಕೇಸ್ ಹಾಕುತ್ತೇವೆ ಎನ್ನುತ್ತಿದ್ದಾರೆ, ಇದು ಕಾನೂನಿನಲ್ಲಿ ಸಿಂಧುವಾಗುವುದೇ ಅಥವಾ ಇಲ್ಲವೇ? ದಾನವಾಗಿ ಪಡೆದ ಆಸ್ತಿಯನ್ನು ಬೇರೊಬ್ಬರಿಗೆ ಮರುವಾಗ ಮಾರಾಟಗಾರನ ಹೆಂಡತಿ ಮತ್ತು ಮಕ್ಕಳ ಸಹಿ ಅವಶ್ಯಕತೆ ಇದೆಯಾ? ತಿಳಿಸಿಕೊಡಿ.
ಉತ್ತರ: ದಾನವಾಗಿ ಪಡೆದ ಸ್ವತ್ತು, ದಾನ ಪಡೆದವರ ಪ್ರತ್ಯೇಕ ಹಾಗೂ ವಯಕ್ತಿಕ ಸ್ವತ್ತು ಆಗಿರುತ್ತದೆ. ಈ ಸ್ವತ್ತಿಗೆ, ಸ್ವಯಾರ್ಜಿತ ಆಸ್ತಿಯ ಎಲ್ಲ ಗುಣಗಳೂ ಇರುತ್ತವೆ. ಹೀಗಾಗಿ ದಾನ ಪಡೆದ ಸ್ವತ್ತನ್ನು , ದಾನ ಪಡೆದವರು ತಮ್ಮ ಇಷ್ಟದಂತೆ ಉಪಯೋಗಿಸಬಹುದು ಅಥವಾ ಪರಭಾರೆ ಮಾಡಬಹುದು. ದಾನ ಪಡೆದವರು ಮಾರಾಟ ಮಾಡುವಾಗ ಅವರ ಪತ್ನಿ ಮತ್ತು ಮಕ್ಕಳ ಸಹಿಯ ಅವಶ್ಯಕತೆ ಇರುವುದಿಲ್ಲ.
ಅವರು ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ. ಮೋಸವಾಗಿ ದಾನ ಪತ್ರ ಮಾಡಿಸಿಕೊಂಡಿದ್ದರೆ ಮಾತ್ರ ಹೆದರಬೇಕು. ಅಂತಹ ಸಂದರ್ಭದಲ್ಲಿಯೂ, ದಾನ ಮಾಡಿಕೊಟ್ಟವರೇ ದಾನಪತ್ರವನ್ನು ರದ್ದು ಮಾಡಬೇಕು ಎಂದು ಪ್ರಕರಣ ಸಲ್ಲಿಸಬೇಕಾಗುತ್ತದೆ. ಅದೂ ಸಹ ಕಾಲಮಿತಿಯ ಒಳಗೇ ಸಲ್ಲಿಸಬೇಕಾಗುತ್ತದೆ. ನೀವು ಹೆದರ ಬೇಕಾಗಿಲ್ಲ.