ವಿಚ್ಛೇದನದ ಬಳಿಕ ಇಬ್ಬರು ಮಕ್ಕಳನ್ನು ಪತಿ-ಪತ್ನಿ ಹಂಚಿಕೊಳ್ಳುವ ಅವಕಾಶ ಇದೆಯೆ?

nyayadevate
Published on
ನಮ್ಮ ಮದುವೆಯಾಗಿ ಆರು ವರ್ಷಗಳಾಗಿವೆ. ನಮಗೆ ಎರಡು ಮಕ್ಕಳಿದ್ದಾರೆ. ದೊಡ್ಡ ಮಗುವಿಗೆ ಮೂರು ವರ್ಷ ಚಿಕ್ಕ ಮಗುವಿಗೆ ಒಂದು ವರ್ಷ. ನನ್ನ ಹೆಂಡತಿ ಈಗ ತವರಿನಲ್ಲೇ ಇದ್ದಾಳೆ. ನಮ್ಮ ತಾಯಿ ಇದ್ದರೆ ನನ್ನ ಜೊತೆ ಸಂಸಾರ ಮಾಡುವುದಿಲ್ಲ ಎನ್ನುತ್ತಿದ್ದಾಳೆ. ಒಂದು ಮಗುವನ್ನು ನನಗೆ ಕೊಡು ಒಂದು ಮಗುವನ್ನು ನೀನು ಇಟ್ಟುಕೋ ಎಂದರೆ ಒಪ್ಪುತ್ತಿಲ್ಲ. ಹಾಗೆ ಅವಳು ಒಪ್ಪಲು ನಾನು ಯಾವ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿ.

ಉತ್ತರ: ಮಕ್ಕಳನ್ನು ಪತಿ ಪತ್ನಿಯರು ಹಂಚಿಕೊಳ್ಳುವುದನ್ನು ಸಾಮಾನ್ಯವಾಗಿ ಕಾನೂನು ಮಾನ್ಯತೆ ಮಾಡುವುದಿಲ್ಲ. ಹಂಚಿಕೊಳ್ಳಲು ಮಕ್ಕಳು ಸ್ವತ್ತಲ್ಲ ಎನ್ನುವುದನ್ನು ಪೋಷಕರು ತಿಳಿದುಕೊಳ್ಳಬೇಕು. ಐದು ವರ್ಷದ ಒಳಗಿರುವ ಮಕ್ಕಳ ಕಸ್ಟಡಿಯನ್ನು ತಾಯಿಯಿಂದ ಬದಲಾಯಿಸುವುದಿಲ್ಲ.

ಅದರಲ್ಲೂ ಒಟ್ಟಿಗೆ ಬೆಳೆಯುತ್ತಿರುವ ಮಕ್ಕಳನ್ನು ಯಧು ವರ್ಷ ದಾಟಿದ್ದರೂ ಸಾಮಾನ್ಯವಾಗಿ ನ್ಯಾಯಾಲಯ ಬೇರ್ಪಡಿಸುವುದಿಲ್ಲ. ಹೀಗೆ ಮಾಡುವುದರಿಂದ ಮಕ್ಕಳ ಮನೋವಿಕಾಸದ ಮೇಲೆ ತೀವ್ರವಾದ ಪರಿಣಾಮ ಆಗುತ್ತದೆ. ಅದಕ್ಕೆ ಬದಲಾಗಿ ನೀವು ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ನಿಮ್ಮ ಮತ್ತು ನಿಮ್ಮ ಪತ್ನಿಯ ಮಧ್ಯೆ ಇರುವ ಸಮಸ್ಯೆಯನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿ ಎಂದು ಅರ್ಜಿ ಕೊಡಿ. ಇಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರು ಮಾತಾಡುತ್ತಾರೆ. ನಿಮ್ಮ ಸಮಸ್ಯೆ ಪರಿಹಾರ ಆಗಬಹುದು. ನಿಮ್ಮ ಕುಟುಂಬವೂ ಉಳಿಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net