VIDEO: ಉ.ಪ್ರದೇಶದಲ್ಲಿ ರೋಡ್‌ಷೋ ನಿಲ್ಲಿಸಿ ಮುಗುಳು ನಕ್ಕ ಪ್ರಿಯಾಂಕಾ ಬಿಜೆಪಿ ಕಾರ್ಯಕರ್ತರಿಗೆ ನೀಡಿದರು ಸರ್‌ಪ್ರೈಸ್‌!

priyanka
Published on

ಲಖನೌ: ಪಂಚರಾಜ್ಯಗಳ ಚುನಾವಣೆ ಇನ್ನೇನು ಹತ್ತಿರ ಬಂದಿದೆ. ಉತ್ತರಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ಇದೇ 10ರಂದು ನಡೆಯಲಿದ್ದು, ಚುನಾವಣಾ ಕಣ ರಂಗೇರಿದೆ. ಎಲ್ಲಾ ಪಕ್ಷಗಳೂ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕೊನೆ ಕ್ಷಣದ ಬಿರುಸಿನ ಚಟುವಟಿಕೆ ನಡೆಸುತ್ತಿದ್ದಾರೆ.

ಇದರ ನಡುವೆಯೇ ಕೆಲವೊಂದು ಅಚ್ಚರಿಯ ಘಟನೆಗಳೂ ನಡೆಯುತ್ತಿವೆ. ಉತ್ತರಪ್ರದೇಶ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಅಚ್ಚರಿ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಅಲಿಘರ್​​ನಲ್ಲಿ ಪ್ರಿಯಾಂಕಾ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಅತ್ತ ಕಡೆಯಿಂದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್​ ಅವರ ಪರ ಜಯಘೋಷ ಹಾಕಿಕೊಂಡು ಬರುತ್ತಿರುತ್ತದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಾಮುಖಿಯಾದಾಗ ಪ್ರಿಯಾಂಕಾ ಅವರು ತಮ್ಮ ರೋಡ್‌ಷೋ ನಿಲ್ಲಿಸಿ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಪ್ರಣಾಳಿಕೆ ನೀಡಿದರು. ಇದಾದ ಮೇಲೆ ಅದೇ ಮುಗುಳುನಗೆಯಿಂದಲೇ ಮುಂದೆ ಸಾಗಿದ್ದಾರೆ.

ಎರಡು ದಿನಗಳ ಹಿಂದೆ ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮುಖಾಮುಖಿಯಾಗಿದ್ದರು. ಈ ವೇಳೆ ಪರಸ್ಪರ ಕೈಬೀಸಿ, ಮುಗುಳುನಗೆ ಬೀರಿದ ಘಟನೆಯೂ ನಡೆದಿತ್ತು. ಇದೀಗ ಎರಡು ವಿರೋಧ ಪಕ್ಷಗಳು ಮುಖಾಮುಖಿಯಾಗಿ ನಡೆದ ಈ ಘಟನೆ ಭಾರಿ ಸುದ್ದಿ ಮಾಡುತ್ತಿದೆ.

ಪ್ರಿಯಾಂಕಾ ಗಾಂಧಿಯವರ ಈ ನಡೆ ಒಂದು ಕ್ಷಣ ಬಿಜೆಪಿ ಕಾರ್ಯಕರ್ತರನ್ನು ವಿಚಲಿತರನ್ನಾಗಿ ಮಾಡಿತು. ಆದರೆ ಪ್ರಿಯಾಂಕಾ ಮಾತ್ರ ಮುಗುಳುನಗೆಯಿಂದ ಪ್ರಣಾಳಿಕೆ ನೀಡಿ ಮುಂದೆ ಸಾಗಿದರು. ಅಂದಹಾಗೆ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ಯುವಕರಿಗೋಸ್ಕರ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಯುವಕರಿಗಾಗಿಯೇ ಅನೇಕ ಭರವಸೆಗಳು ಇವೆ.

ಉತ್ತರಪ್ರದೇಶದ 403 ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಬರುವ 10ರಂದು ನಡೆಯಲಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net