

ನವದೆಹಲಿ: ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಿರುದ್ಧದ ಆಕ್ಷೇಪಾರ್ಹ ಟ್ವೀಟ್ಗಳಿಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ಗೆ 1 ರೂ. ದಂಡ ಕಟ್ಟುವಂತೆ ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಇದರ ಬೆನ್ನಲ್ಲೇ ಇದೀಗ ತೀರಾ ಹಳೆಯದಾಗಿರುವ ಪ್ರಕರಣವೊಂದರ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. 11 ವರ್ಷ ಹಳೆಯ ನ್ಯಾಯಾಂಗ ನಿಂದನೆ ಪ್ರಕರಣ ಇದಾಗಿದೆ.
ಸುಪ್ರೀಂಕೋರ್ಟ್ನ 16 ಮುಖ್ಯನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಮಂದಿ ಭ್ರಷ್ಟರು ಎಂದು ಪ್ರಶಾಂತ್ ಭೂಷಣ್ ಅವರು 2009ರಲ್ಲಿ ತೆಹಲ್ಕಾ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಅದೇ ಸಾಲಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
ಇದನ್ನೂ ಓದಿ: ತಾಯಿಗೆ ಹೆಣ್ಣುಮಕ್ಕಳ ಪೂರೈಕೆ ಮಾಡುತ್ತಿದ್ದ ಮಕ್ಕಳು- ಬೀದಿ ಬದಿಯೇ ಇವರ ಅಡ್ಡಾ!
ಸದ್ಯ ಅದರ ವಿಚಾರಣೆ ನಡೆದಿರಲಿಲ್ಲ. ಇದೀಗ ಈ ಕೇಸ್ಗೆ ಮರುಜೀವ ಸಿಕ್ಕಿದೆ. ಈ ಪ್ರಕರಣದ ಕುರಿತು ಕೋರ್ಟ್ಗೆ ಸಹಕಾರ ನೀಡುವಂತೆ ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್ ನೇತೃತ್ವದ ಪೀಠ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದ ವಿಚಾರಣೆ ನಡೆಸಿದೆ. ವಿಚಾರಣೆಯನ್ನು ಅಕ್ಟೋಬರ್ ಎರಡನೇ ವಾರಕ್ಕೆ ಮುಂದೂಡಲಾಗಿದ್ದು, ಅಂದು ಈ ವಿವಾದದ ಕುರಿತು ಕೋರ್ಟ್ಗೆ ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರನ್ನು ಕೇಳಿಕೊಂಡಿದೆ.