

ಲಾಸ್ ಏಂಜಲಿಸ್ (ಅಮೆರಿಕ): ನಾಯಿಗಳನ್ನು ಎಷ್ಟೋ ಮಂದಿ ತಮ್ಮ ಮಕ್ಕಳಂತೆಯೇ ಸಾಕುತ್ತಾರೆ. ಅದಕ್ಕೆ ಏನಾದರೂ ಆಯಿತೆಂದರೆ ಸ್ವಂತ ಮಕ್ಕಳಿಗೇ ಸಮಸ್ಯೆ ಆದಂತೆ ಭಾವಿಸುತ್ತಾರೆ. ಅದೇ ರೀತಿ ತಮ್ಮ ನಾಯಿಗಳ ಮೇಲೆ ಜೀವ ಇಟ್ಟುಕೊಂಡಿರುವ ಪಾಪ್ ಗಾಯಕಿ ಗಾಗಾ ಇದೀಗ ಕಳೆದು ಹೋಗಿರುವ ನಾಯಿಗಳಿಗಾಗಿ ರೋಧಿಸುತ್ತಿದ್ದಾಳೆ.
ಈಕೆಯ ಎರಡು ನಾಯಿಗಳನ್ನು ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ. ಗನ್ ತೋರಿಸಿ ಕಳುವು ಮಾಡಿದ್ದಾರೆ. ಈ ನಾಯಿಗಳಿಗಾಗಿ ಪರಿತಪಿಸುತ್ತಿರುವ ಅಮೆರಿಕದ ಲಾಸ್ ಏಂಜಲಿಸ್‌ನ ಈ ಗಾಯಕಿ ಇದೀಗ ಜಾಹೀರಾತು ಹಾಕಿದ್ದು, ತಮ್ಮ ಈ ಎರಡು ಸಾಕು ನಾಯಿಗಳನ್ನು ಸುರಕ್ಷಿತವಾಗಿ ಹಿಡಿದುಕೊಟ್ಟರೆ 5 ಲಕ್ಷ ಡಾಲರ್ (ಸುಮಾರು 3.8 ಕೋಟಿ ರೂಪಾಯಿ) . ಬಹುಮಾನ ನೀಡುವುದಾಗಿ ಘೋಷಿಸಿದ್ದಾಳೆ.
ಕೆಲವು ದಿನಗಳ ಹಿಂದೆ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಗಳ ಮೇಲೆ ಗುಂಡು ಹಾರಿಸಿ ಗಾಯಗೊಂಡಿದ್ದ ಕೆಲವು ಕಿಡಿಗೇಡಿಗಳು ಎರಡು ನಾಯಿಗಳನ್ನು ಅಪಹರಿಸಿದ್ದಾರೆ. ಇವು ಫ್ರಾನ್ಸ್ ಮೂಲದ ಬುಲ್ ಡಾಗ್‌ಗಳು. ಇವುಗಳ ಹೆಸರು ಕೋಜಿ ಮತ್ತು ಗುಸ್ಟವ್.
ಇವುಗಳನ್ನು ಸುರಕ್ಷಿತವಾಗಿ ತಂದುಕೊಟ್ಟವರಿಗೆ ಬಹುಮಾನ ಇರುವ ಬಗ್ಗೆ ಗಾಗಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ. ನಾಯಿಗಳು ಇಲ್ಲದೇ ಜ್ವರ ಬಂದಂತೆ ಆಗಿದೆ. ಆದ್ದರಿಂದ ತಂದುಕೊಡಲು ಸಾಧ್ಯವಿಲ್ಲದೇ ಹೋದರೆ ಇಂಥಲ್ಲಿ ನಾಯಿ ಇದೆ ಎಂದು ಮಾಹಿತಿ ಕೊಟ್ಟರೆ ಸಾಕು, ಬಹುಮಾನ ಕೊಡುತ್ತೇನೆ ಎಂದಿರುವ ಗಾಗಾ. ಸಂಪರ್ಕಿಸಲು ಇ-ಮೇಲ್ ವಿಳಾಸ ನೀಡಿದ್ದಾಳೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ