More

    ಮೊಟ್ಟೆಯೊಳಗಿದ್ದ ಗಿಣಿಮರಿಯ ತೆಗೆದು ಸಾಕಿದರು! ವಿಡಿಯೋ ವೈರಲ್

    ನವದೆಹಲಿ: ಇನ್ನೇನು ಈ ಮರಿಗಿಣಿ ಮೊಟ್ಟೆಯೊಡೆದು ಹೊರಬರುವುದೇ ಕಾಯುತ್ತಿತ್ತು. ಆದರೆ, ಅಷ್ಟೊತ್ತಿಗಾಗಲೇ ಕಾವುಕೊಟ್ಟು ಮರಿ ಮಾಡಬೇಕಿದ್ದ ಅಮ್ಮ ಸತ್ತೇ ಹೋಯಿತು. ಆದರೆ ಆ ಮರಿಯನ್ನು ಕೃತಕ ಕಾವು ನೀಡಿ ಹೊರತರಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ.

    ತಾಯಿ ಗಿಣಿ ಸತ್ತ ಹೋಗಿದ್ದು ಅದರ ಮೊಟ್ಟೆ ಮಾತ್ರ ಸಿಕ್ಕಿದರೆ ಏನು ಮಾಡಲು ಸಾಧ್ಯ..? ಸಾಮಾನ್ಯ ಮನುಷ್ಯ ಕೃತಕ ಕಾವು ಒದಗಿಸಿ ಆ ಮರಿಯನ್ನು ಬದುಕಿಸುವುದು ಸಾಧ್ಯವಿರಲಿಲ್ಲ. ಬೇರೆ ಹಕ್ಕಿಯಿಂದ ಮೊಟ್ಟೆಯನ್ನು ಕಾವು ಕೊಡಿಸಿ ಮರಿ ಮಾಡುವುದೂ ಅಸಾಧ್ಯವಾದ ಮಾತೇ.

    ಆದರೆ ತಾವೇ ಮೊಟ್ಟೆಯಿಂದ ಮರಿಯನ್ನು ಹೊರಕ್ಕೆ ತಂದರೆ ಹೇಗೆ ಎಂಬ ಪ್ರಶ್ನೆ ಕೆಲವು ಪಕ್ಷಿಪ್ರಿಯರನ್ನು ಕಾಡಿದೆ. ಅದನ್ನು ಸಾಧಿಸಿಯೇ ನೋಡೋನ ಎಂದು ಕೆಲವು ಪಕ್ಷಿಪ್ರಿಯರು ಟ್ರೈ ಮಾಡಿದ್ದಾರೆ. ಅದೀಗ ಸಕ್ಸಸ್ ಆಗಿದ್ದು, ಮರಿಯನ್ನು ಯಶಸ್ವಿಯಾಗಿ ಹೊರಕ್ಕೆ ತೆಗೆದಿದ್ದಾರೆ.

    ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಇದರ ವಿಡಿಯೋ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇದೀಗ ಭಾರಿ ವೈರಲ್‌ ಆಗಿದೆ. ಮೊಟ್ಟೆಯೊಡೆಯುವ ಪ್ರಕ್ರಿಯೆಯಿಂದ ಹಿಡಿದು ಅದಕ್ಕೆ ಗುಟುಕು ನೀಡಿ, ಮರಿಯನ್ನು ಸಂಪೂರ್ಣ ಹಂತಕ್ಕೆ ತರುವವರೆಗಿನ ದೃಶ್ಯ ಈ ವಿಡಿಯೋದಲ್ಲಿದೆ.
    ಇದು ನೋಡಲು ಅತ್ಯಂತ ಸುಂದರ ವಿಚಾರ. ತಾಯಿ ಇಲ್ಲದ ಮರಿಯನ್ನು ಬೆಳೆಸಿದ ರೀತಿಯೇ ಸುಂದರ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.

    ಸಣ್ಣ ಗಾತ್ರದ ಮೊಟ್ಟೆಯಿಂದ ವ್ಯಕ್ತಿ ಮರಿಯೊಂದನ್ನು ಸುರಕ್ಷಿತವಾಗಿ ಹೊರ ತೆಗೆಯಲು ಪ್ರಯತ್ನಿಸುವಲ್ಲಿಂದ ಆರಂಭವಾಗುವ ವಿಡಿಯೋ ರೆಕ್ಕೆ ಪುಕ್ಕ ಬಲಿತ ಹಕ್ಕಿಯವರೆಗೂ ಇದೆ. ಹಕ್ಕಿ ತನಗೆ ಕೊಟ್ಟ ಆಹಾರವನ್ನೇಲ್ಲಾ ಉತ್ಸಾಹದಿಂದ ತಿನ್ನುವುದನ್ನೂ ಈ ವಿಡಿಯೋದಲ್ಲಿ ಕಾಣಬಹುದು.

    ರಾಮಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವೆವು- ಮುಸ್ಲಿಂ ಸಂಘದ ಟ್ವೀಟ್‌

    ಕಿರುತೆರೆಯ ಮತ್ತೊಬ್ಬ ಪ್ರಖ್ಯಾತ ನಟ ಆತ್ಮಹತ್ಯೆ- ಕೊಳೆತ ಸ್ಥಿತಿಯಲ್ಲಿ ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts