ನಿಮ್ಮ ಮೇಲೆ ಯಾವುದೇ ಕ್ಷಣ ಗುಂಡು ಹಾರಬಹುದು, ಎಲ್ಲವೂ ಸಿದ್ಧವಾಗಿದೆ: ಸಿಎಂಗೆ ಬಂತು ಬೆದರಿಕೆ ಪತ್ರ

patnaik
Published on

ಭುವನೇಶ್ವರ: ನಿಮ್ಮ ಮೇಲೆ ಬಂದೂಕು ಹಾರಿ ಪ್ರಾಣಪಕ್ಷಿ ಯಾವುದೇ ಕ್ಷಣ ಹೋಗಬಹುದು. ಅತ್ಯಾಧುನಿಕ ಬಂದೂಕುಗಳಿಂದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ಸುಪಾರಿ ಹಂತಕರು ನಿಮ್ಮ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಯಾವುದೇ ಕ್ಷಣದಲ್ಲಿ ನಿಮ್ಮ ಮೇಲೆ ದಾಳಿ ಮಾಡಬಹುದು...

ಹೀಗೆಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಇಂಗ್ಲಿಷ್​ನಲ್ಲಿ ಇರುವ ಈ ಅನಾಮಧೇಯ ಪತ್ರವು ಮುಖ್ಯಮಂತ್ರಿಯ ಮನೆ ವಿಳಾಸಕ್ಕೆ ಕಳುಹಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಇದಾಗಲೇ ಸುಪಾರಿ ಹಂತಕರು ನಿಮ್ಮನ್ನು ಕೊಲ್ಲಲು ರೆಡಿಯಾಗಿದ್ದಾರೆ. ಅವರೆಲ್ಲವೂ ವೃತ್ತಿಪರ ಕೊಲೆಗಾರರು ಎಂದು ನಾನು ತಿಳಿಸಲು ಇಚ್ಛಿಸುತ್ತೇನೆ. ಅವರ ಬಳಿ ಎ.ಕೆ- 47, ಅರೆ-ಸ್ವಯಂಚಾಲಿತ ಪಿಸ್ತೂಲ್‌ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಯಾವಾಗ, ಹೇಗೆ, ಯಾವ ಕ್ಷಣದಲ್ಲಿ ಅವರೆಲ್ಲರೂ ದಾಳಿ ಮಾಡುತ್ತಾರೋ ಹೇಳಲಾಗದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

ನಿಮ್ಮನ್ನು ಕೊಲ್ಲಲು ಸಂಚುರೂಪಿಸಿರುವ ಮಾಸ್ಟರ್ ಮೈಂಡ್ ನಾಗ್ಪುರದಲ್ಲಿ ವಾಸಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದೇ 5ರಂದು ಪತ್ರ ತಲುಪಿದೆ. ಈ ಕುರಿತು ಸರ್ಕಾರದ ವಿಶೇಷ ಕಾರ್ಯದರ್ಶಿ (ಗೃಹ) ಡಾ.ಸಂತೋಷ್ ಬಾಲಾ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಗುಪ್ತಚರ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತ ಭುವನೇಶ್ವರ ಅವರಿಗೆ ವಿಷಯ ತಿಳಿಸಿದ್ದು ತನಿಖೆ ಆದೇಶಿಸಿದ್ದಾರೆ.

ಮುಖ್ಯಮಂತ್ರಿಯವರು ತಮ್ಮ ನಿವಾಸ, ಸಚಿವಾಲಯ ಮತ್ತು ವಿವಿಧ ಸ್ಥಳಗಳಿಗೆ ಪ್ರಯಾಣಿಸುವಾಗ ಬಂದೋಬಸ್ತ್​ ಹೆಚ್ಚು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net