More

    ನನಗೆ ಹೇಳದೇ ನನ್ನ ಪಾಲಿನ ಜಮೀನು ಮಾರಿ ಅಮ್ಮ ತೀರಿಕೊಂಡರು- ಅದನ್ನು ಮರಳಿ ಪಡೆಯಬಹುದೆ?

    ನನಗೆ ಹೇಳದೇ ನನ್ನ ಪಾಲಿನ ಜಮೀನು ಮಾರಿ ಅಮ್ಮ ತೀರಿಕೊಂಡರು- ಅದನ್ನು ಮರಳಿ ಪಡೆಯಬಹುದೆ?ನನಗೆ 30 ವರ್ಷ. ನನಗೆ ಒಬ್ಬ ಅಣ್ಣ ಇದ್ದಾನೆ. ನಮ್ಮ ತಂದೆ 2008ರಲ್ಲಿ ತೀರಿಕೊಂಡರು. ಆ ನಂತರ ನಮ್ಮ ತಾಯಿ ಮತ್ತು ಅಣ್ಣ ಸೇರಿ ನಮ್ಮ ಜಮೀನನ್ನು ನನಗೆ ಹೇಳದೆ, ನನ್ನ ಸಹಿ ಇಲ್ಲದೆ , ಮತ್ತೊಬ್ಬರಿಗೆ ಮಾರಿದ್ದಾರೆ. ಈವರೆಗೆ ನನಗೆ ವಿಷಯ ತಿಳಿದಿರಲಿಲ್ಲ. ಈಗ ನಮ್ಮ ತಾಯಿಯೂ ಫೆಬ್ರವರಿ 2019ರಲ್ಲಿ ತೀರಿಕೊಂಡಿದ್ದಾರೆ. ಈಗ ನಾನು ನನ್ನ ಆಸ್ತಿಯ ಪಾಲನ್ನು ಹೇಗೆ ಪಡೆದುಕೊಳ್ಳಬೇಕು?

    ಉತ್ತರ: ನೀವು ಕೂಡಲೇ ವಕೀಲರನ್ನು ಸಂರ್ಪಸಿ ನಿಮ್ಮ ಅಣ್ಣನ ವಿರುದ್ಧ ವಿಭಾಗದ ದಾವೆ ಹಾಕಿ. ನಿಮ್ಮ ತಂದೆ ಬಿಟ್ಟು ಹೋದ ಎಲ್ಲ ಆಸ್ತಿಗಳನ್ನೂ ಸೇರಿಸಿ ದಾವೆ ಹಾಕಿ. ನಿಮ್ಮ ಅಣ್ಣ ಮತ್ತು ತಾಯಿ ಸೇರಿ ಮಾರಿದ ಜಮೀನನ್ನು ಕ್ರಯಕ್ಕೆ ಪಡೆದವರನ್ನೂ ದಾವೆಯಲ್ಲಿ ಪಾರ್ಟಿಮಾಡಿ. ಆ ಮಾರಾಟ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹಕ್ಕು ಘೊಷಣೆಯನ್ನೂ ನೀವು ಕೇಳಬಹುದು.

    ನಿಮಗೆ ವಿಷಯ ಯಾವಾಗ ತಿಳಿಯಿತು ಎನ್ನುವುದನ್ನೂ ದಾವೆಯಲ್ಲಿ ಬರೆಯಿರಿ. ನಿಮ್ಮ ಭಾಗ ನಿಮಗೆ ಸಿಗುತ್ತದೆ. ಕೆಲವೊಮ್ಮೆ ಮಾರಾಟ ಮಾಡಿದ ಆಸ್ತಿ ಬಿಟ್ಟು ಉಳಿದ ಆಸ್ತಿಯಲ್ಲಿ ನಿಮಗೆ ಹೆಚ್ಚಿನ ಭಾಗ ಕೊಡುವ ಸಾಧ್ಯತೆಯೂ ಇರುತ್ತದೆ. ದಾವೆಯಲ್ಲಿ ನಿಮ್ಮ ಅಣ್ಣನಿಗೆ ನೋಟಿಸ್​ ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಮಧ್ಯಸ್ಥಿಕೆಯಲ್ಲಿ ನಿಮ್ಮ ನಿಮ್ಮಲ್ಲಿ ಏನಾದರೂ ಒಪ್ಪಂದ ಆಗಲೂ ಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ವಿಚ್ಛೇದನದ ಆದೇಶದ ವಿರುದ್ಧ ಅಪೀಲ್‌ ಹೋಗದಿದ್ರೆ ವರ್ಷಗಳ ನಂತರ ಜೀವನಾಂಶದಿಂದ ತಪ್ಪಿಸಿಕೊಳ್ಳಬಹುದಾ?

    ಡಿವೋರ್ಸ್​ ನೀಡದೇ ಪತಿ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ- ಕಾನೂನಿನಡಿ ನಾನೇನು ಮಾಡಬಹುದು?

    ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್‌ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts