ದಾನಪತ್ರದಿಂದ ಬಂದ ಆಸ್ತಿಯಲ್ಲಿ ಬೇರೆಯವರಿಗೆ ಭಾಗ ಕೊಡಬೇಕಾ?

nyayadevate
Published on
ಪ್ರಶ್ನೆ: ನಮ್ಮ ತಾತನ ಆಸ್ತಿ ನಮ್ಮ ತಂದೆಗೆ ವಿಲ್ ಆಗಿತ್ತು. ನಮ್ಮ ತಂದೆ ಆ ಆಸ್ತಿಯನ್ನು ನನಗೆ ದಾನ ಪತ್ರ ಮಾಡಿದ್ದಾರೆ. ಈಗ ಈ ಆಸ್ತಿಯಲ್ಲಿ ನನ್ನ ತಂಗಿಗೆ ಪಾಲು ಕೊಡಬೇಕೆ?

ಉತ್ತರ: ನಿಮ್ಮ ತಂದೆಗೆ ಅವರ ತಂದೆಯ ( ನಿಮ್ಮ ತಾತನ) ವಿಲ್ ಮೂಲಕ ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ನಿಮ್ಮ ತಂದೆ ನಿಮಗೆ ಮಾಡಿರುವ ದಾನಪತ್ರ ಸಕ್ರಮವಾಗಿದ್ದು , ನೋಂದಣಿ ಆಗಿದ್ದು, ಮೋಚ ವಂಚನೆಯಿಂದ ಮಾಡಿಸಿಕೊಳ್ಳದ ದಾಖಲೆ ಆಗಿದ್ದರೆ , ಆ ದಾನ ಪತ್ರದಿಂದ ನಿಮಗೆ ಆಸ್ತಿಯಲ್ಲಿ ಸಂಪೂರ್ಣ ಹಕ್ಕು ಇರುತ್ತದೆ.

ನೀವು ಈ ಆಸ್ತಿಯನ್ನು ನಿಮ್ಮ ಇಷ್ಟದಂತೆ ಉಪಯೋಗಿಸಬಹುದು. ನಿಮಗೆ ಬೇಕಿದ್ದರೆ ನಿಮ್ಮ ತಂಗಿಗೆ ಅದರಲ್ಲಿ ಭಾಗ ಕೊಡಬಹುದು. ಆದರೆ, ನಿಮ್ಮ ತಂಗಿಗೆ ಅವಳದೇ ಆದ ಭಾಗ ಈ ಆಸ್ತಿಯಲ್ಲಿ ಇರುವುದಿಲ್ಲ.

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net