ಬಿಜೆಪಿ ಸಚಿವ, ಸಂಸದರಿಗೆ ಮುಜುಗರ ತಂದ ವಡಾಪಾವ್‌! ತಿಂದು ಬಿಲ್‌ ಕೊಡದೇ ಪೇಚಿಗೆ ಸಿಲುಕಿದರು....

vadapav
Published on

ಥಾಣೆ: ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹಾಜರಾಗಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಇತರ ಗಣ್ಯರು ಭಾರಿ ಟ್ರೋಲ್‌ ಆಗಿದ್ದಾರೆ. ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭದ ನಂತರ ಅಶ್ವಿನಿ ವೈಷ್ಣವ್ ಅವರು ಇನ್ನಿತರ ಜತೆ ಹೋಟೆಲ್‌ ಒಂದರಲ್ಲಿ ವಡಾಪಾವ್‌ ತಿಂದು ಬಿಲ್‌ ಪಾವತಿ ಮಾಡದೇ ಹೋದದ್ದೇ ಮುಜುಗರಕ್ಕೆ ಕಾರಣವಾಗಿದೆ.

ಆಗಿದ್ದೇನೆಂದರೆ, ಪ್ರಧಾನಿ ಜತೆ ಕಾರ್ಯಕ್ರಮದಲ್ಲಿ ಬಂದಿದ್ದ ಅವರು, ಕಾರ್ಯಕ್ರಮದ ನಂತರ ರೈಲು ನಿಲ್ದಾಣದ ಹೊರಗಿರುವ ಹೋಟೆಲ್​ನಲ್ಲಿ ವಡಾ ಪಾವ್ ತಿಂದಿದ್ದರು. ಹೋಟೆಲ್‌ ಗಜಾನನ್‌ನಲ್ಲಿ ಈ ಘಟನೆ ನಡೆದಿದೆ. ಸಚಿವ ಅಶ್ವಿನಿ ವೈಷ್ಣವ್ ಜತೆಗೆ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ, ಸಂಸದ ವಿನಯ್ ಸಹಸ್ರಬುದ್ಧೆ, ಬಿಜೆಪಿ ಶಾಸಕ ಸಂಜಯ್ ಕೇಲ್ಕರ್, ಶಾಸಕ ನಿರಂಜನ್ ದಾವ್ಖರೆ. ಶಾಸಕ ನಿರಂಜನ್ ದಾವ್ಖರೆ ಮತ್ತಿತರರರು ವಡಾಪಾವ್ ಸೇವಿಸಿದ್ದರು. ಆದರೆ ಹಣ ಕೊಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರ ಶೇರ್‌ ಮಾಡಿದ್ದರು. ಮಾತ್ರವಲ್ಲದೇ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು.

ಇದರಿಂದ ಮುಜುಗರಕ್ಕೆ ಒಳಗಾದ ನಂತರ ಬಿಜೆಪಿ ಕಾರ್ಯಕರ್ತರೊಬ್ಬರು ಹೋಟೆಲ್​ಗೆ ಬಂದು ಎರಡು ಸಾವಿರ ರೂಪಾಯಿ ಬಿಲ್ ಪಾವತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net