More

    ಸಿಖ್‌ ಮುಖಂಡರ ಜತೆ ಕೈ ಹಿಡಿದು ಹೆಜ್ಜೆ ಹಾಕಿದ ಪ್ರಧಾನಿ: ಊಟದ ಸಮಯದಲ್ಲಿ ತಟ್ಟೆ ಕೊಟ್ಟು ಸತ್ಕಾರ

    ಚಂಡೀಗಢ: ಪಂಜಾಬ್‌ನ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಇನ್ನೆರಡೇ ದಿನಗಳು ಬಾಕಿ ಇವೆ. ಇದೇ 20ರಂದು ಚುನಾವಣೆ ಶುರುವಾಗಲಿದೆ. ಇದಾಗಲೇ ಎಲ್ಲಾ ಪಕ್ಷಗಳ ಮುಖಂಡರು ಶತಾಯುಗತಾಯುವಾಗಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಿಸಲು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿಯೂ ಆಡಳಿತಾರೂಢ ಕಾಂಗ್ರೆಸ್‌ ಅನ್ನು ಹಿಮ್ಮೆಟ್ಟಲು ಬಿಜೆಪಿ ಶತಪ್ರಯತ್ನ ಪಡುತ್ತಿದೆ.

    ಈ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು. ತಮ್ಮ ನಿವಾಸದಲ್ಲಿ ದೇಶಾದ್ಯಂತದ ಪ್ರಮುಖ ಸಿಖ್ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ‌ನರೇಂದ್ರ ಮೋದಿ ಮತ್ತು ಸಿಖ್ ಸಮಾಜದ ಮುಖಂಡರ ನಡುವೆ ಹಲವು ವಿಷಯಗಳ ಕುರಿತು ಮಾತುಕತೆ ನಡೆದಿದೆ.

    ಇದೇ ವೇಳೆ ಊಟದ ಸಮಯದಲ್ಲಿ ಖುದ್ದು ಪ್ರಧಾನಿ ಮೋದಿಯವರು ಸಿಖ್ ನಾಯಕರಿಗೆ ತಟ್ಟೆಯನ್ನು ಕೊಟ್ಟು ಸತ್ಕರಿಸಿದ್ದಾರೆ. ಸಿಖ್‌ ನಾಯಕರ ಕೈ ಹಿಡಿದು ಅವರೊಂದಿಗೆ ಮಾತನಾಡುತ್ತಾ ಹೆಜ್ಜೆ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ ಸಂಘಟನೆಗಳ ಮುಖಂಡರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ, ಅವರು ಸಿಖ್ ಧರ್ಮದ ನಿಯಮಗಳ ಪ್ರಕಾರ ತಮ್ಮ ತಲೆಯನ್ನು ಮುಚ್ಚಿಕೊಂಡಿದ್ದು ಅದರ ಫೋಟೋ ವೈರಲ್‌ ಆಗಿದೆ.

    ಪ್ರಧಾನಿ ಮೋದಿ ಸಿಖ್ ನಾಯಕರಿಗೆ ತಮ್ಮ ನೀತಿಗಳನ್ನು ತಿಳಿಸಿದರು ಮತ್ತು ಏಳು ವರ್ಷಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ತಿಳಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ‘ ನನ್ನ ರಕ್ತದಲ್ಲಿ ಸಿಖ್ ಧರ್ಮವಿದೆ. ಸೇವೆ ಎಂಬುವುದು ನನಗೆ ರಕ್ತದಲ್ಲೇ ಬಂದಿದೆ. ನಾನು ಏನು ಮಾಡಿದರೂ ಅದನ್ನು ಹೃದಯದಿಂದ ಮಾಡುತ್ತೇನೆ’ ಎಂದಿದ್ದಾರೆ. ಸಿಖ್ ನಾಯಕರು ತಮ್ಮ ಬೇಡಿಕೆಗಳು ಪ್ರಧಾನಿ ಮುಂದೆ ಮಂಡಿಸಿದ್ದಾರೆ.

    ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವ ಪ್ರಮುಖರು ಎಂದರೆ:
    ದೆಹಲಿ ಗುರುದ್ವಾರ ಸಮಿತಿ ಅಧ್ಯಕ್ಷ ಹರ್ಮಿತ್‌ ಸಿಂಗ್ ಕಲ್ಕ; ಪದ್ಮಶ್ರೀ ಬಾಬಾ ಬಲ್ಬೀರ್ ಸಿಂಗ್ ಜಿ ಸಿಚೇವಾಲ (ಸುಲ್ತಾನ್ಪುರ್ ಲೋಧಿ), ಮಹಂತ್ ಕರಮ್‌ಜೀತ್‌ ಸಿಂಗ್, ಅಧ್ಯಕ್ಷ ಸೇವಾಪಂಥಿ ಯಮುನಾನಗರ; ಬಾಬಾ ಜೋಗಾ ಸಿಂಗ್, ಡೇರಾ ಬಾಬಾ ಜಂಗ್ ಸಿಂಗ್ (ನಾನಕ್ಸರ್) ಕರ್ನಾಲ್; ಸಂತ ಬಾಬಾ ಮೇಜರ್ ಸಿಂಗ್, ಮುಖಿ ಡೇರಾ ಬಾಬಾ ತಾರಾ ಸಿಂಗ್, ಅಮೃತಸರ, ಜತೇದಾರ್ ಬಾಬಾ ಸಾಹಿಬ್ ಸಿಂಗ್ ಜಿ, ಕರ್ ಸೇವಾ ಆನಂದಪುರ ಸಾಹಿಬ್, ಸುರೀಂದರ್ ಸಿಂಗ್ ನಾಮಧಾರಿ ದರ್ಬಾರ್ (ಭಾನಿ ಸಾಹಿಬ್), ಬಾಬಾ ಜಸ್ಸಾ ಸಿಂಗ್ ಶಿರೋಮಣಿ ಅಕಾಲಿ ಬುದ್ಧ ದಳ, ಪಂಜ್ವಾ ತಖ್ತೋ, ಡಾ. ಹರ್ಭಜನ್ ಸಿಂಗ್, ದಮ್ದಾಮಿ, ತಕ್ಸಲ್ , ಚೌಕ್ ಮೆಹ್ತಾ, ಸಿಂಗ್ ಸಾಹಿಬ್, ಗಿಯಾನಿ ರಂಜಿತ್ ಸಿಂಗ್ ಜಿ, ಜತೇದಾರ್ ತಖ್ತ್ ಶ್ರೀ ಪಾಟ್ನಾ ಸಾಹಿಬ್.

    ಮನೆಮನೆಗೆ ಮತ ಕೇಳುವಾಗಲೇ ಕೊನೆಯುಸಿರೆಳೆದ ಮೂವರು ಡಿಎಂಕೆ ಅಭ್ಯರ್ಥಿಗಳು!

    ಅಯೋಧ್ಯೆಯಲ್ಲಿ ಶುರುವಾಯ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ: ರನ್‌ವೇ ನಿರ್ಮಾಣ ಬೆಂಗಳೂರಿನ ಸಂಸ್ಥೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts